More

    ಕ್ರಿಕೆಟ್‌ನಲ್ಲಿ ಏಳು ವರ್ಷ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ : ಅಶ್ವಿನ್ ಮಂಕಡಿಂಗ್ ಎಚ್ಚರಿಕೆ

    ಸೆಂಚುರಿಯನ್: ಹರಿಣಗಳ ನಾಡಿನಲ್ಲಿ ಚೊಚ್ಚಲ ಟೆಸ್ಟ್ ಸರಣಿ ಜಯಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಟೀಮ್ ಇಂಡಿಯಾದ ಕನಸು ಮೂರೇ ದಿನಗಳಲ್ಲಿ ಭಗ್ನಗೊಂಡಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (76 ರನ್, 82 ಎಸೆತ, 12 ಬೌಂಡರಿ, 1 ಸಿಕ್ಸರ್) ಏಕಾಂಗಿ ಹೋರಾಟ ನಡುವೆ ಇತರ ಬ್ಯಾಟರ್‌ಗಳು 2ನೇ ಇನಿಂಗ್ಸ್‌ನಲ್ಲಿ ಕಂಡ ದಯನೀಯ ವೈಲ್ಯದಿಂದಾಗಿ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನೂ 2 ದಿನಗಳ ಆಟ ಬಾಕಿ ಉಳಿದಿರುವಂತೆಯೇ ಆತಿಥೇಯ ದಕ್ಷಿಣ ಆಫ್ರಿಕಾ ಎದುರು ಇನಿಂಗ್ಸ್ ಹಾಗೂ 32 ರನ್‌ಗಳಿಂದ ಸೋಲು ಅನುಭವಿಸಿದೆ. ಇದರೊಂದಿಗೆ ರೋಹಿತ್ ಶರ್ಮ ಬಳಗ ಸರಣಿಯಲ್ಲಿ 1-0 ಹಿನ್ನಡೆ ಅನುಭವಿಸಿದ್ದು, 2ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಗೆದ್ದು ಸರಣಿ ಸಮಬಲ ಸಾಧಿಸುವ ಅವಕಾಶವನ್ನು ಮಾತ್ರ ಹೊಂದಿದೆ.

    1. ವಿರಾಟ್ ಕೊಹ್ಲಿ ಏಳು ಕ್ಯಾಲೆಂಡರ್ ವರ್ಷದಲ್ಲಿ 2 ಸಾವಿರ ರನ್‌ಗಳಿಸಿದ ಮೊದಲ ಬ್ಯಾಟರ್ ಎನಿಸಿದರು. 2012, 2014, 2016, 2017, 2018, 2019 ಹಾಗೂ 2023. ಶ್ರೀಲಂಕಾದ ಕುಮಾರ್ ಸಂಗಕ್ಕರ (6), ಸಚಿನ್ ತೆಂಡುಲ್ಕರ್ (5) ನಂತರದ ಸ್ಥಾನದಲ್ಲಿದ್ದಾರೆ.

    2. ಡೀನ್ ಎಲ್ಗರ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೈಯಕ್ತಿಕ 2ನೇ ಗರಿಷ್ಠ ರನ್‌ಗಳಿಸಿದರು. ಬಾಂಗ್ಲಾದೇಶ ಎದುರು 199 ರನ್‌ಗಳಿಸಿದ್ದು ಮೊದಲನೆಯದಾಗಿದೆ.

    1: ರೋಹಿತ್ ಶರ್ಮ ನಾಯಕತ್ವದಲ್ಲಿ ಟೀಮ್ ಇಂಡಿಯಾದ ಮೊದಲ ಬಾರಿಗೆ ಇನಿಂಗ್ಸ್ ಸೋಲು ಕಂಡಿತು. 2015ರ ಬಳಿಕ 3ನೇ ಸೋಲು ಇದಾಗಿದೆ.

    ಅಶ್ವಿನ್ ಮಂಕಡ್ ಎಚ್ಚರಿಕೆ
    ಪಂದ್ಯದ ಮೂರನೇ ದಿನ ಟೀಮ್ ಇಂಡಿಯಾ ಆ್ ಸ್ಪಿನ್ನರ್ ಆರ್.ಅಶ್ವಿನ್, ದಕ್ಷಿಣ ಆಫ್ರಿಕಾದ ಬ್ಯಾಟರ್ ಮಾರ್ಕೋ ಜಾನ್ಸನ್‌ಗೆ ಮಂಕಡಿಂಗ್ ಎಚ್ಚರಿಕೆ ನೀಡಿದರು. ಮಂಕಾಡಿಂಗ್‌ನಲ್ಲಿ ದಿಟ್ಟ ನಿಲುವು ಹೊಂದಿರುವ ಅಶ್ವಿನ್, 98ನೇ ಓವರ್‌ನಲ್ಲಿ ಜಾನ್ಸೆನ್ ಎಸೆತಕ್ಕೂ ಮುನ್ನವೇ ಕ್ರೀಸ್ ತೊರೆಯುವುದನ್ನು ಗಮನಿಸಿ ಬೌಲಿಂಗ್ ಮಾಡುವುದನ್ನು ನಿಲ್ಲಿಸಿ ರನೌಟ್ (ಹಿಂದಿನ ಮಂಕಡಿಂಗ್) ಎಚ್ಚರಿಕೆ ನೀಡಿದರು. 2019ರ ಐಪಿಎಲ್‌ನಲ್ಲಿ ಜೋಸ್ ಬಟ್ಲರ್ ಅವರನ್ನು ಮಂಕಡಿಂಗ್ ಮೂಲಕ ಔಟ್ ಮಾಡಿ ಸುದ್ದಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts