More

    ಅಂತರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿ; ತಮಿಳುನಾಡು, ವಿದರ್ಭ, ಹಿಮಾಚಲಕ್ಕೆ ಜಯ

    ಶಿವಮೊಗ್ಗ: ನಗರದಲ್ಲಿ ಇದೇ ಮೊದಲ ಬಾರಿಗೆ ನಡೆದ 15 ವರ್ಷದೊಳಗಿನ ಅಂತರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ದಿನ ತಮಿಳುನಾಡು, ವಿದರ್ಭ ಮತ್ತು ಹಿಮಾಚಲ ಪ್ರದೇಶ ತಂಡಗಳು ಜಯದ ಖಾತೆ ತೆರೆದವು.
    ದೇಶೀಯಾ ಕ್ರಿಕೆಟ್‌ನಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸುವ ಸಲುವಾಗಿ ಬಿಸಿಸಿಐ(ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಶಿವಮೊಗ್ಗದ ಕೆಎಸ್‌ಸಿಎ ಮತ್ತು ಜೆಎನ್‌ಎನ್‌ಸಿಇ ಮೈದಾನದಲ್ಲಿ 15 ವರ್ಷದೊಳಗಿನ ಅಂತಾರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಸೋಮವಾರ ಆರಂಭಗೊಂಡಿತು.
    ಪಶ್ಚಿಮ ಬಂಗಾಳವನ್ನು ತಮಿಳುನಾಡು ತಂಡ 41 ರನ್‌ಗಳಿಂದ, ಉತ್ತರಖಂಡ ತಂಡದ ವಿರುದ್ಧ ವಿದರ್ಭ ತಂಡ 9 ವಿಕೆಟ್ ಹಾಗೂ ತ್ರಿಪುರ ತಂಡದ ಮೇಲೆ ಹಿಮಾಚಲ ಪ್ರದೇಶ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.
    ನಗರದ ಕೆಎಸ್‌ಸಿಎ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ತಮಿಳುನಾಡು ತಂಡ 35 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತ್ತು. ಸವಾಲಿನ ಮೊತ್ತ ಬೆನ್ನಟ್ಟಿದ ಪಶ್ಚಿಮ ಬಂಗಾಳ 30 ಓವರ್‌ಗಳಲ್ಲಿ 160 ರನ್‌ಗೆ ಆಲೌಟ್ ಆಯಿತು. ಕೆಎಸ್‌ಸಿಎ 2ನೇ ಮೈದಾನದಲ್ಲಿ ಉತ್ತರಖಂಡ 9 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿತ್ತು. ಅಲ್ಪ ಮೊತ್ತದ ಗುರಿ ಪಡೆದ ವಿದರ್ಭ ತಂಡ 15.3 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.
    ಜೆಎನ್‌ಎನ್‌ಸಿಇ ಮೈದಾನದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತ್ರಿಪುರ 32.5 ಓವರ್‌ಗಳಲ್ಲಿ 61 ರನ್ ಗಳಿಸಿತು. ಅಲ್ಪ ಮೊತ್ತ ಬೆನ್ನಟ್ಟಿದ ಹಿಮಾಚಲ ಪ್ರದೇಶ ವಿಕೆಟ್ ನಷ್ಟವಿಲ್ಲದೇ 11.4 ಓವರ್‌ಗಳಲ್ಲಿ 62 ರನ್ ಗಳಿಸಿತು.
    ಡಿಸಿ, ಎಸ್ಪಿ, ಪ್ರಾಚಾರ್ಯರಿಂದ ಪಂದ್ಯಾವಳಿಗೆ ಚಾಲನೆ
    ಕೆಎಸ್‌ಸಿಎ ಮೈದಾನದಲ್ಲಿ ಸೋಮವಾರ ಬೆಳಗ್ಗೆ ಡಿಸಿ ಡಾ. ಆರ್.ಸೆಲ್ವಮಣಿ ಮತ್ತು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹಾಗೂ ಜೆಎನ್‌ಎನ್‌ಸಿ ಮೈದಾನದಲ್ಲಿನ ಪಂದ್ಯಕ್ಕೆ ಪ್ರಾಚಾರ್ಯ ಡಾ. ನಾಗೇಂದ್ರ ಪ್ರಸಾದ್ ಚಾಲನೆ ನೀಡಿದರು. ಕೆಎಸ್‌ಸಿಎ ವಲಯ ಸಂಚಾಲಕ ಎಚ್.ಎಸ್.ಸದಾನಂದ್, ಸುಬ್ರಹ್ಮಣ್ಯ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts