More

    ಟಿಕ್​ಟಾಕ್​ ಬ್ಯಾನ್​ ಆಗಿದ್ದಕ್ಕೆ ಸಂಭ್ರಮಿಸಿದ ಶೂಟರ್​ ಹೀನಾ ಸಿಧು!

    ನವದೆಹಲಿ: ಚೀನಾ ಜತೆಗಿನ ಗಡಿ ಸಂಘರ್ಷದ ಬೆನ್ನಲ್ಲೇ ಕೇಂದ್ರ ಸರ್ಕಾರ ನಿಷೇಧಿಸಿರುವ 59 ಆ್ಯಪ್​ಗಳಲ್ಲಿ​ ಟಿಕ್​ಟಾಕ್​ ಕೂಡ ಸೇರಿದೆ. ಈ ವಿಡಿಯೋ-ಷೇರಿಂಗ್ ಸೋಷಿಯಲ್​ ನೆಟ್​ವರ್ಕಿಂಗ್​ ಆ್ಯಪ್ ಬ್ಯಾನ್​ ಆಗಿದ್ದಕ್ಕೆ ಭಾರತದ ಒಲಿಂಪಿಯನ್​ ಮಹಿಳಾ ಶೂಟರ್​ ಹೀನಾ ಸಿಧು ಸಂಭ್ರಮಿಸಿದ್ದಾರೆ. ಅದಕ್ಕೆ ಕಾರಣವೇನು ಗೊತ್ತೇ?

    ಚೀನಾದ ಟಿಕ್​ಟಾಕ್​ ಆ್ಯಪ್​ ನಿಷೇಧಿಸುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಹೀನಾ ಸಿಧು, ‘ಟಿಕ್​ಟಾಕ್​ ಮರೆಯಾಗಿರುವುದಕ್ಕೆ ನನಗೆ ಖುಷಿಯಾಗುತ್ತಿದೆ. ದ್ವೇಷದ ವಿಡಿಯೋಗಳು ಮತ್ತು ಪ್ರಾಣಿಗಳಿಗೆ ಹಿಂಸೆ ನೀಡುವ ವಿಡಿಯೋಗಳು ಟಿಕ್​ಟಾಕ್​ನಲ್ಲಿ ಪೋಸ್ಟ್​ ಆಗುತ್ತಿದ್ದುದನ್ನು ನೋಡಿ ಬೇಸರವಾಗುತ್ತಿತ್ತು. ಟಿಕ್​ಟಾಕ್​ ಇಲ್ಲದೆ ಇನ್ನು ಇಂಟರ್​ನೆಟ್​ ಖುಷಿಯ ತಾಣವಾಗಿರುತ್ತದೆ’ ಎಂದು ಟ್ವೀಟಿಸಿದ್ದಾರೆ.

    ಇದನ್ನೂ ಓದಿ: ಚೀನಾದ 59 ಆ್ಯಪ್​ ನಿಷೇಧಿಸ್ಪಟ್ಟರೂ, ಪಬ್​ಜಿ ಗೇಮ್​ ಯಾಕೆ ಬ್ಯಾನ್​ ಆಗಲಿಲ್ಲ ಗೊತ್ತೇ?

    ‘ಚೀನಾದ ಆ್ಯಪ್​ ಹೋಗಿದ್ದರೂ, ಅದಕ್ಕೆ ಬದಲಿಯಾಗಿ ಸಿದ್ಧಗೊಳ್ಳುವ ಆ್ಯಪ್​ನಲ್ಲಿ ಹಿಂಸಾತ್ಮಕ ವಿಡಿಯೋಗಳಿಗೆ ಖಂಡಿತವಾಗಿಯೂ ಅವಕಾಶ ನೀಡಬಾರದು. ಈ ಜವಾಬ್ದಾರಿ ಡೆವಲಪರ್​ಗಳಿಗೆ ಇರಬೇಕು. ಈ ವಿಡಿಯೋಗಳು ಕೇವಲ ಪೋಸ್ಟ್​ ಆಗುವುದು ಮಾತ್ರವಲ್ಲದೆ, ವೈರಲ್​ ಕೂಡ ಆಗುವುದು ಬೇಸರದ ಸಂಗತಿ. ಅಪ್​ಲೋಡ್​ ಮಾಡುವ ವಿಡಿಯೋದಲ್ಲಿನ ಅಂಶಗಳನ್ನು ನಿರ್ಬಂಧಿಸದ ಹೊರತಾಗಿ ಇಂಥ ಆ್ಯಪ್​ಗಳು ನಮ್ಮ ಜೀವನದಲ್ಲಿ ಸ್ಥಾನ ಪಡೆಯಬಾರದು’ ಎಂದು ಹೀನಾ ಸಿಧು ಇನ್ನೊಂದು ಟ್ವೀಟ್​ನಲ್ಲಿ ವಿವರಿಸಿದ್ದಾರೆ. ಕಾಮನ್ವೆಲ್ತ್​ ಗೇಮ್ಸ್​ ಸ್ವರ್ಣ ಪದಕ ವಿಜೇತ ಶೂಟರ್ ಆಗಿರುವ ಹೀನಾ ಸಿಧು, ಶೂಟಿಂಗ್​ ವಿಶ್ವಕಪ್​ನಲ್ಲಿ ಹಲವಾರು ಪದಕಗಳನ್ನು ಜಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts