More

    ಹೆಣ್ಣು ಸವಾಲಗಳನ್ನು ಎದುರಿಸುವ ಗಟ್ಟಿಗಿತ್ತಿ

    ಕುಶಾಲನಗರ: ಹೆಣ್ಣು ಸಮಾಜದ ಕಣ್ಣು, ಬದುಕಿನ ಎಲ್ಲ ಸವಾಲಗಳನ್ನು ಎದುರಿಸಿ ನಿಲ್ಲುವ ಗಟ್ಟಿಗಿತ್ತಿ. ಕಷ್ಟದ ದಿನಗಳನ್ನು ಎದುರಿಸಿ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ ಹೆಣ್ಣಿನ ಸ್ಥೈರ್ಯದ ವಿವರಣೆಗೆ ಬೇರೆ ಪದಗಳು ಬೇಕಿಲ್ಲ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಯೋಗೇಂದ್ರ ನಾಯಕ್ ಶ್ಲಾಘಿಸಿದರು.

    ನಂ.470ನೇ ವಿವಿಧೋದ್ದೇಶ ಮಹಿಳಾ ಸಂಘದ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ಸ್ವಾಭಿಮಾನದ ಭಾವನೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಗುರಿ ಸಾಧಿಸುವುದಾಗಿದೆ. ಅಲ್ಲದೆ, ಮಹಿಳೆಯರು ಜೀವನದ ಎಲ್ಲ ಕ್ಷೇತ್ರಗಳಲ್ಲಿನ ಅಡೆತಡೆಗಳನ್ನು ದಾಟಿ ಅಗಾಧವಾದ ಸುಧಾರಣೆ ಮಾಡಲು ಧೈರ್ಯವಂತರಾಗಬೇಕು ಎಂದರು.

    ಕುಶಾಲನಗರದ ಸರ್ಕಾರಿ ಸಮುದಾಯ ಆರೋಗ್ಯ ಕೆಂದ್ರದ ವೈದ್ಯ ಶಿವಕುಮಾರ್ ಮಾತನಾಡಿ, ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಸಂಘಟಿತರಾಗಿ ಸಾಧನೆಗಳ ಮೂಲಕ ಉತ್ತಮ ಸಮಾಜ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಜೀವದಿಂದ ಮತ್ತೊಂದು ಜೀವವನ್ನು ಕೊಡುವ ಮೂಲಕ ಅದರ ಆರೈಕೆ, ಬೆಳವಣಿಗೆಯಲ್ಲಿಯೂ ಸಂಪೂರ್ಣ ಶಕ್ತಿಯನ್ನು ನೀಡುವುದು ಹೆಣ್ಣಿಗೆ ಮಾತ್ರ ಸಾಧ್ಯ ಎಂದರು.

    ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಪುಷ್ಪಾ ಮಾತನಾಡಿ, ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆತ್ಮ ವಿಶ್ವಾಸ, ಸ್ವಾಭಿಮಾನದಿಂದ ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಮಹಿಳೆ ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ, ಸ್ನೇಹಿತೆಯಾಗಿ ಎಲ್ಲ ಪಾತ್ರಗಳನ್ನು ತುಂಬುವ ಆಕೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ದಿನ ಮೀಸಲಿದೆ ಎಂದರು.

    ಮಕ್ಕಳಿಂದ ಛದ್ಮವೇಷ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸೆಲಿನಾ ಡಿ.ಕುನ್ನ ಮಾತನಾಡಿದರು. ಉಪಾಧ್ಯಕ್ಷೆ ಎನ್.ಎ.ಸುಶೀಲಾ, ನಿರ್ದೇಶಕರಾದ ಕಾವೇರಿ ಕಾಳಪ್ಪ, ನಳಿನಿ ನಂಜಪ್ಪ, ಎಚ್.ಎಂ.ಜಯಮ್ಮ, ಟಿ.ಪಿ.ಜಯಾ, ಎಚ್.ಡಿ.ಕಮಲಾ, ಟಿ.ಕೆ.ಅಜಿತ ಕುಮಾರಿ, ನಿರ್ಮಲಾ ಶಿವದಾಸ್, ಜಿ.ಟಿ.ಲಲಿತಾ, ಗೀತಾ, ಎಂ.ಕೆ.ಜರೀನಾ, ಪಿ.ಚೈತ್ರಾ, ಕಾರ್ಯದರ್ಶಿ ಬಿ.ಆರ್.ಶೈಲಾ ಕುಮಾರಿ, ಹೊಲಿಗೆ ಶಿಕ್ಷಕಿ ಶೋಭಾ, ಶಿಕ್ಷಕಿಯರಾದ ಎಂ.ಆರ್.ಸುಮಾ, ಎಂ.ಡಿ.ತನುಜಾ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts