More

    ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

    ಧಾರವಾಡ: ಐಎಂಎ, ವಿಮೆನ್ ಡಾಕ್ಟರ್ ವಿಂಗ್ ಹಾಗೂ ಶ್ರೀಯಾ ಕಾಲೇಜು ಸಹಯೋಗದಲ್ಲಿ ಇಲ್ಲಿನ ಶ್ರೀಯಾ ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನ ಮತ್ತು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ `ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು’ ವಿಷಯ ಕುರಿತು ವಿಚಾರ ಸಂಕಿರಣವನ್ನು ಗುರುವಾರ ಆಚರಿಸಲಾಯಿತು.
    ಸಂಪನ್ಮೂಲ ವ್ಯಕ್ತಿ ಹಾಗೂ ಡಿಮ್ಹಾನ್ಸ್ ಮನೋವೈದ್ಯೆ ಡಾ. ಸ್ವಪ್ನಾ ಪಾಂಡುರAಗಿ ಅವರು ಮಾನಸಿಕ ಆರೋಗ್ಯ, ಮಾನವ ಹಕ್ಕು ಮತ್ತು ಮಾದಕ ವ್ಯಸನ ತಡೆ ಕುರಿತು ಮಾತನಾಡಿದರು.
    ಐಎಂಎ ಅಧ್ಯಕ್ಷ ಡಾ. ಸತೀಶ ಇರಕಲ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಡಾ. ಕಿರಣ್ ಕುಲಕರ್ಣಿ, ಡಾ. ಕವಿತಾ ಎಂ., ಡಾ. ಪಲ್ಲವಿ ದೇಶಪಾಂಡೆ, ಡಾ. ಶರಯು ತಾವರಗೇರಿ, ಡಾ. ವಾಣಿ ಎಸ್. ಇರಕಲï, ಪ್ರಾಚಾರ್ಯೆ ರೋಡಾ ಜೇಸುರಾಜ್, ಲೀಲಾವತಿ ಕಳಸಪ್ಪನವರ, ಇತರರಿದ್ದರು.
    ಶ್ರೀಯಾ ಕಾಲೇಜಿನಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts