More

    ಫಾರಿನ್ನಿಂದ ಫ್ರೆಂಡ್​ ಮೆಸೇಜ್​ ಬಂದ್ರೆ ಹುಷಾರು!; ಹುಷಾರಿಲ್ಲ ಅಂತಾರೆ, ಹಣ ಕೇಳ್ತಾರೆ, ಅಸಲಿಯತ್ತೇ ಬೇರೆ..!

    ಬೆಂಗಳೂರು: ವಿದೇಶದಲ್ಲಿರುವ ಗೆಳೆಯನಿಂದ ಕರೆ ಬಂದರೆ ಓಕೆ, ಆದರೆ ಮೆಸೇಜ್ ಬಂದರೆ ಹುಷಾರು! ಅದರಲ್ಲೂ ಮೆಸೇಜ್ ಮಾಡಿ, ‘ಆರಾಮ್ ಇಲ್ಲ, ಆಸ್ಪತ್ರೆಯಲ್ಲಿದ್ದೇನೆ, ಹಣ ಕಳಿಸು..’ ಎಂದು ಕೇಳಿಕೊಂಡರೆ ಯಾವುದಕ್ಕೂ ಒಮ್ಮೆ ಫ್ರೆಂಡ್​ಗೆ ನೇರ ಕರೆ ಮಾಡಿಯೇ ಖಚಿತಪಡಿಸಿಕೊಳ್ಳಿ. ಏಕೆಂದರೆ ವಿದೇಶದಲ್ಲಿರುವವರ ಮೊಬೈಲ್​ಫೋನ್ ಹ್ಯಾಕ್ ಮಾಡುತ್ತಿರುವ ಕಳ್ಳರು ಅದರಿಂದ ಅವರ ಬಾಲ್ಯದ ಗೆಳೆಯರಿಗೆ ಮೆಸೇಜ್ ಕಳಿಸಿ ಲಕ್ಷಾಂತರ ರೂಪಾಯಿ ವಂಚನೆ ಎಸಗುತ್ತಿದ್ದಾರೆ. ವೈಟ್​ಫೀಲ್ಡ್​ ವಿಭಾಗ ಸಿಇಎನ್​ ಠಾಣೆಯಲ್ಲಿ ಅಂಥ ಎರಡು ಪ್ರಕರಣಗಳು ದಾಖಲಾಗಿವೆ.

    ವೈಟ್​ಫೀಲ್ಡ್​ನ ಅಪಾರ್ಟ್​ಮೆಂಟ್​ನಲ್ಲಿ ನೆಲೆಸಿರುವ ವ್ಯಕ್ತಿಯ ಬಾಲ್ಯ ಸ್ನೇಹಿತ ಮಲೇಷ್ಯಾದಲ್ಲಿ ನೆಲೆಸಿದ್ದಾರೆ. ಸಮಯ ಸಿಕ್ಕಾಗ ಇಬ್ಬರೂ ಮೊಬೈಲ್​​ಫೋನ್​ನಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಏಪ್ರಿಲ್​ 29ರಂದು ಮಲೇಷ್ಯಾದಲ್ಲಿ ಇರುವ ವ್ಯಕ್ತಿಯ ಮೊಬೈಲ್​ಫೋನ್​ ನಂಬರ್​ ಹ್ಯಾಕ್​ ಮಾಡಿರುವ ಸೈಬರ್​ ಕಳ್ಳರು, ಬೆಂಗಳೂರಿನ ಈ ವ್ಯಕ್ತಿಗೆ ಸಂದೇಶ ಕಳುಹಿಸಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದು, ತುರ್ತಾಗಿ ಹಣ ಬೇಕೆಂದು ಮನವಿ ಮಾಡಿದ್ದಾರೆ. ಬಾಲ್ಯ ಸ್ನೇಹಿತ ಕಷ್ಟದಲ್ಲಿ ಇದ್ದಾನೆ ಎಂಬ ಕಾರಣಕ್ಕೆ ಆತನ ಬ್ಯಾಂಕ್​ ಖಾತೆಗೆ 98 ಸಾವಿರ ರೂ. ಜಮೆ ಮಾಡಿದ್ದಾರೆ. ಇದಾದ ಮೇಲೆ ಬಾಲ್ಯ ಸ್ನೇಹಿತ ಸಂಪರ್ಕ ಮಾಡಿದ್ದಾಗ ಹಣ ಕೇಳಿಯೇ ಇಲ್ಲ. ಹಣ ಜಮೆ ಆಗಿರುವ ಬ್ಯಾಂಕ್​ ಖಾತೆ ತನ್ನದಲ್ಲ ಎಂದು ಖಚಿತ ಪಡಿಸಿದ್ದಾರೆ. ಸೈಬರ್​ ಕಳ್ಳರು ಮೊಬೈಲ್​ ನಂಬರ್​ ಹ್ಯಾಕ್​ ಮಾಡಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್ 

    ಅಮೆರಿಕ ಸ್ನೇಹಿತನ ಸೋಗಲ್ಲಿ 7 ಲಕ್ಷ ಧೋಖಾ: ಮಾರತ್​ಹಳ್ಳಿಯ ಉದ್ಯಮಿಗೆ ಅಮೆರಿಕದ ಸ್ನೇಹಿತನ ಸೋಗಿನಲ್ಲಿ ಸಂದೇಶ ಕಳುಹಿಸಿ ಅವರಿಂದ 7 ಲಕ್ಷ ರೂ. ಪಡೆದು ಸೈಬರ್​ ಕಳ್ಳರು ವಂಚನೆ ಮಾಡಿದ್ದಾರೆ.
    ಅಮೆರಿಕದ ಸ್ನೇಹಿತ ಸಂಜಯ್​ ಸಿಂಗ್​ ಹೆಸರಿನಲ್ಲಿ ಸಂದೇಶ ಕಳುಹಿಸಿ ಆಸ್ಪತ್ರೆಯಲ್ಲಿ ಇದ್ದಾನೆ. ಸರ್ಜರಿ ನಡೆಯುತ್ತಿದೆ. ತಕ್ಷಣ ಹಣ ಬೇಕೆಂದು ಉದ್ಯಮಿಗೆ ಸಂದೇಶ ಕಳುಹಿಸಿದ್ದಾನೆ. ಹಳೆಯ ಸ್ನೇಹಿತ ಕಷ್ಟದಲ್ಲಿ ಇದ್ದಾನೆ ಎಂದು ಹಂತ ಹಂತವಾಗಿ 7 ಲಕ್ಷ ರೂ. ಬ್ಯಾಂಕ್​ಗೆ ಜಮೆ ಮಾಡಿದ್ದಾರೆ. ಕೊನೆಗೊಂದು ದಿನ ಕರೆ ಮಾಡಿ ವಿಚಾರಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ನೊಂದ ಉದ್ಯಮಿ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕರೊನಾ ಸೋಂಕಿತರ ಕಷ್ಟ ನೋಡಿ ಬೈಕನ್ನೇ ಆಂಬುಲೆನ್ಸ್ ಮಾಡಿದ; ಸಂಕಷ್ಟಕ್ಕೆ ಮರುಗಿದ ಇಂಜಿನಿಯರ್​ಗೆ ಖರ್ಚಾಗಿದ್ದು ಗರಿಷ್ಠ 25 ಸಾವಿರ ರೂ.​!

    ಹುಷಾರ್! ಔಷಧ ಕೊಳ್ಳುವ ಮುಂಚೆ ಅಸಲಿಯೋ ನಕಲಿಯೋ ಗುರುತು ಹಚ್ಚಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts