More

    ಒಳ ಮೀಸಲು ವರದಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ – ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯ

    ರಾಯಚೂರು: ಒಳ ಮೀಸಲು ವರ್ಗೀಕರಣಕ್ಕೆ ಸಂಬಂಸಿದಂತೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಾರಸು ಮಾಡುವಂತೆ ಒತ್ತಾಯಿಸಿ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಂಗಳವಾರ ಧರಣಿ ನಡೆಸಿತು.

    ಆಯೋಗದ ವರದಿಯನ್ನು ಪ್ರಸಕ್ತ ಬಜೆಟ್ ಅವೇಶನದಲ್ಲಿ ಅಂಗೀಕರಿಸಿ ಯಥಾವತ್ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಾರಸು ಮಾಡಬೇಕು. ಪಿಟಿಸಿಎಲ್ ಕಾಯ್ದೆಗೆ ಯಾವುದೇ ಧಕ್ಕೆ ಆಗದಂತೆ ಸೂಕ್ತ ತಿದ್ದುಪಡಿ ತರಬೇಕು. ಬಗರ್ ಹುಕುಂ ಅರ್ಜಿಗಳು ವಜಾಗೊಂಡಿದ್ದರಿಂದ ಪುನರ್ ಪರಿಶೀಲಿಸಲು ಆದೇಶ ಹೊರಡಿಸಬೇಕು. ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತರಿಗಿರುವ ಮೀಸಲು ಹಾಗೂ ಅವುಗಳ ಉಪ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲು ಪ್ರತ್ಯೇಕ ಆಯೋಗ ರಚನೆ ಮಾಡಬೇಕು. ಬಜೆಟ್‌ನಲ್ಲಿ ಎಸ್ಸಿ, ಎಸ್ಟಿ ಅಭಿವೃದ್ಧಿಗೆ 30 ಸಾವಿರ ಕೋಟಿ ರೂ. ಅನುದಾನ ಮೀಸಲಿಡಬೇಕು ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಧರಣಿ ಮೂಲಕ ಒತ್ತಾಯಿಸಿದರು.

    ಸಮಿತಿ ಜಿಲ್ಲಾ ಸಂಚಾಲಕ ಹನುಮಂತಪ್ಪ ಕಾಕರಗಲ್, ಪದಾಕಾರಿಗಳಾದ ಸುರೇಶ ಬಳಗಾನೂರು, ಚಿನ್ನಪ್ಪ ಪಟ್ಟದಕಲ್, ಮಹಾದೇವಪ್ಪ ದುಮತಿ, ಜೆ.ಸತ್ಯನಾಥ, ಕೆ.ನಲ್ಲಾರೆಡ್ಡಿ ನಾಯಕ, ಹೈದರ್ ಅಲಿ, ಹನುಮಂತು ಮ್ಯಾತ್ರಿ, ಶಿವಪ್ಪ, ಚಂದ್ರಶೇಖರ ಭಂಡಾರಿ ಹಾಗೂ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts