More

    ವಿಮೆ ಸೌಲಭ್ಯಕ್ಕೆ ಒಳಪಡಿಸುವಂತೆ ಕಂದಾಯ ಇಲಾಖೆ ನೌಕರರ ಸಂಘ ಮನವಿ

    ಗಂಗಾವತಿ: ಕರೊನಾ ಮುಂಜಾಗ್ರತೆ ಕ್ರಮಗಳಲ್ಲಿ ತೊಡಗಿಸಿಕೊಂಡ ಕಂದಾಯ ಸಿಬ್ಬಂದಿಗೂ ಅಗತ್ಯ ಸೇವೆಗಳ ಪರಿಹಾರದ ಸೇವೆಗಳ ಕಾಯ್ದೆಯಲ್ಲಿ ಸೇರಿಸುವಂತೆ ಒತ್ತಾಯಿಸಿ ಗ್ರಾಮಲೆಕ್ಕಿಗರ ಹಾಗೂ ಕಂದಾಯ ಇಲಾಖೆ ನೌಕರರ ಸಂಘದ ತಾಲೂಕು ಘಟಕದ ಸದಸ್ಯರು ನಗರದ ಮಿನಿವಿಧಾನಸೌಧದ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

    ಎಂದಿನಂತೆ ಕರ್ತವ್ಯ ನಿರ್ವಹಿಸಿದ ಸಂಘದ ಸದಸ್ಯರು ಊಟದ ಅವಧಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ತಹಸೀಲ್ದಾರರಾದ ಎಲ್.ಡಿ.ಚಂದ್ರಕಾಂತ ಮತ್ತು ರವಿ ಅಂಗಡಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಮಂಜುನಾಥ ಹಿರೇಮಠ ಮಾತನಾಡಿ, ಕರೊನಾ ಮುಂಜಾಗ್ರತೆ ಕ್ರಮಗಳಲ್ಲಿ ಕಂದಾಯ ಸಿಬ್ಬಂದಿ ಸಕ್ರಿಯ ಪಾಲ್ಗೊಂಡಿದ್ದು, ಪರಿಣಾಕಾರಿ ವೈರಸ್‌ನ ಅನಾಹುತದ ಬಗ್ಗೆ ಮಾಹಿತಿಯಿದ್ದರೂ ಹಗಲು ರಾತ್ರಿ ದುಡಿಯುತ್ತಿದ್ದಾರೆ.

    ಆರಂಭದಿಂದಲೂ ಹೆಚ್ಚಿನ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಜೀವದ ಹಂಗು ತೊರೆದು ತಪಾಸಣೆಯಲ್ಲಿ ತೊಡಗಿದ್ದಾರೆ. ಕರೊನಾ ಮುಂಜಾಗ್ರತೆ ಕ್ರಮಗಳ ಅಗತ್ಯ ಸೇವೆಗಳ ಕಾಯ್ದೆಯಲ್ಲಿ ಕಂದಾಯ ಸಿಬ್ಬಂದಿ ಸೇರಿಸಿದ್ದರೂ, ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪೊಲೀಸ್ ಸೇರಿ ಇತರ ಇಲಾಖೆ ಸಿಬ್ಬಂದಿಗೆ ದೊರೆಯುವ ಸೌಲಭ್ಯವನ್ನು ಒದಗಿಸಿಲ್ಲ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಕಂದಾಯ ಸಿಬ್ಬಂದಿ ಸೇರಿಸುವುದರ ಜತೆಗೆ 30 ಲಕ್ಷ ರೂ.ಗಳ ವಿಮೆಯ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ರಾಜು ಫಿರಂಗಿ, ಎಚ್.ಐ.ಬಗಲಿ, ಮಂಜುನಾಥ ನಂದನ್, ಶರಣಪ್ಪ, ವಸಂತಮಾಧವ, ಬಸವರಾಜ, ಪ್ರಕಾಶ, ಮಹ್ಮದ್ ರಫೀ, ಶ್ರೀಕಂಠೇಶ, ಅನಿತಾ, ಕವಿತಾ, ಲಕ್ಷ್ಮಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts