More

    ವಿಮೆ ಸೌಲಭ್ಯ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ; ಹೊಸಪೇಟೆಯಲ್ಲಿ ಅಂಗನವಾಡಿ ನೌಕರರ ಪ್ರತಿಭಟನೆ ಮುಂದುವರಿಕೆ

    ಹೊಸಪೇಟೆ: ವಿಮೆ ಸೌಲಭ್ಯ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘ ತಾಲೂಕು ಘಟಕ, ಸಿಡಿಪಿಒ ಕಚೇರಿ ಮುಂದೆ ಕೈಗೊಂಡಿರುವ ಧರಣಿ ನಾಲ್ಕನೇ ದಿನವಾದ ಗುರುವಾರವೂ ಮುಂದುವರಿಯಿತು.

    ಸಂಘದ ತಾಲೂಕು ಅಧ್ಯಕ್ಷೆ ಕೆ.ನಾಗರತ್ನ ಮಾತನಾಡಿ, ಅಂಗನವಾಡಿಗಳನ್ನು ಮುಚ್ಚಬೇಕೆಂಬ ಸರ್ಕಾರ ಆದೇಶ ಹೊರಡಿಸಿದಾಗ ಹಾಗೂ ಕರೊನಾ ಸಂಕಷ್ಟದಲ್ಲೂ ಕಾರ್ಯಕರ್ತೆಯರು ಸರ್ಕಾರ ಸೂಚಿಸಿದ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ, ಸರ್ಕಾರ ಬೇಡಿಕೆ ಈಡೇರಿಕೆಗೆ ಮುಂದಾಗದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಗುಣಮಟ್ಟದ ಪಿಪಿಇ ಕಿಟ್ ವಿತರಿಸಬೇಕು. 50 ಲಕ್ಷ ರೂ. ವಿಮಾ ಪರಿಹಾರ ನೀಡಬೇಕು. ಈಗಿರುವ ನಿವೃತ್ತಿ ವೇತನ ಪದ್ಧತಿ ಬದಲಾಯಿಸಿ ಎಲ್‌ಐಸಿ ಮಾದರಿ ನೀಡಬೇಕು. ಐಸಿಡಿಎಸ್ ಯೋಜನೆಗೆ ಅನುದಾನ ಹೆಚ್ಚಿಸಬೇಕು. ಕರೊನಾ ವಾರಿಯರ್ಸ್‌ ಆದ ಅಂಗನವಾಡಿ ನೌಕರರಿಗೆ 25 ಸಾವಿರ ರೂ. ಪ್ರೋತ್ಸಾಹಧನ ನೀಡಬೇಕು. ಸೋಂಕಿತರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಕುಟುಂಬಗಳಿಗೆ ಮಾಸಿಕ 7500 ರೂ. ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.

    ಸಿಡಿಪಿಒ ಅಮರೇಶಗೆ ಮನವಿ ಸಲ್ಲಿಸಿದರು. ಸಂಘದ ಕಾರ್ಯದರ್ಶಿ ಜಿ.ಶಕುಂತಲಾ, ಖಜಾಂಚಿ ಈರಮ್ಮ, ಪದಾಧಿಕಾರಿಗಳಾದ ಎನ್.ಎಂ.ಸುಮಂಗಳಾ, ಕಂಪ್ಲಿ ಉಮಾದೇವಿ, ಎಚ್.ಮಂಜುಳಾ, ಸಿ.ರಾಧಾಬಾಯಿ, ಅಕ್ಕಮ್ಮ, ಪೀರಮ್ಮ, ಅನುರಾಧಾ, ಜಯಲಕ್ಷ್ಮೀ, ಭಾಗ್ಯಮ್ಮ, ಸಿಐಟಿಯು ಮುಖಂಡರಾದ ಆರ್.ಭಾಸ್ಕರರೆಡ್ಡಿ, ಕರುಣಾನಿಧಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts