More

    ಬಾಲವನ ಕಾಮಗಾರಿ ವಿಳಂಬ ವರದಿ ನೀಡಲು ಇಂಟ್ಯಾಕ್ಟ್‌ಗೆ ಶಾಸಕ ಸೂಚನೆ

    ಪುತ್ತೂರು: ಬಾಲವನದ ಗ್ರಂಥಾಲಯ ಕಟ್ಟಡ ದುರಸ್ತಿ ಸೇರಿದಂತೆ ಬಾಕಿ ಇರುವ ಮರುನಿರ್ಮಾಣ ಕಾಮಗಾರಿಗಳಿಗೆ ವೇಗ ನೀಡಲು ಪುರಾತನ ಕಟ್ಟಡ ಸಂರಕ್ಷಣೆಯ ನಿರ್ವಹಣಾ ಸಂಸ್ಥೆ ಇಂಟ್ಯಾಕ್ಟ್‌ಗೆ ಸೂಚಿಸಿದ್ದು, ವಿಳಂಬಕ್ಕೆ ಕಾರಣವಾದ ಅಂಶಗಳ ಕುರಿತು ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

    ಪರ್ಲಡ್ಕ ಬಾಲವನಕ್ಕೆ ಭೇಟಿ ನೀಡಿದ ಅವರು ಬಾಲವನ ಪುನರ್ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಬಳಿಕ ಮಾತನಾಡಿದರು.
    ಎರಡು ವರ್ಷಗಳ ಹಿಂದೆ ಬಾಲವನದ ಅಭಿವೃದ್ಧಿ ಸಮಿತಿಯು ರೂ. 1 ಕೋಟಿ ವೆಚ್ಚದಲ್ಲಿ ಕಾರಂತರ ಮನೆ, ಗ್ರಂಥಾಲಯ ಕಟ್ಟಡ ಪುನರ್ ನಿರ್ಮಾಣದ ಜವಾಬ್ದಾರಿಯನ್ನು ಇಂಟ್ಯಾಕ್ಟ್‌ಗೆ ವಹಿಸಿತ್ತು. ಈಗಾಗಲೇ ಹೆಚ್ಚಿನ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳ ವಿಳಂಬದ ಬಗ್ಗೆ ವಿವರ ಕೇಳಿದ್ದು, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
    ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್, ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts