More

    ಆಧಾರ್ ಕೊಟ್ಟ ತತ್​ಕ್ಷಣವೇ ಇ-ಪ್ಯಾನ್ ಹಂಚಿಕೆ ಯೋಜನೆ ಈ ತಿಂಗಳಿಂದಲೇ ಜಾರಿ

    ನವದೆಹಲಿ: ಪ್ಯಾನ್ ಕಾರ್ಡ್​ಗಳನ್ನು ತತ್​ಕ್ಷಣವೇ ಆನ್​ಲೈನ್​ನಲ್ಲಿ ವಿತರಿಸುವ ಯೋಜನೆ ಈ ತಿಂಗಳಿಂದಲೇ ಜಾರಿಯಾಗಲಿದೆ ಎಂದು ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
    ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ 2020-21ರ ಮುಂಗಡಪತ್ರದಲ್ಲಿ ಈ ವಿಚಾರ ಪ್ರಸ್ತಾಪಿಸಿತ್ತು. ಆಧಾರ್ ಅನ್ನು ಆನ್​ಲೈನ್​ ಮೂಲಕ ಕೊಟ್ಟ ಕೂಡಲೇ ವಿವರವಾದ ಅರ್ಜಿ ಇಲ್ಲದೆಯೇ ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪ್ಯಾನ್​ ಹಂಚಿಕೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು.
    ಇದಕ್ಕೆ ಸಂಬಂಧಿಸಿದ ವ್ಯವಸ್ಥೆ ಈಗ ಸಿದ್ಧವಾಗುತ್ತಿದ್ದು, ಈ ತಿಂಗಳಲ್ಲೇ ಜಾರಿಗೆ ಬರಲಿದೆ. ಇದನ್ನು ಪಡೆಯಲು ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ಗೆ ಹೋಗಬೇಕು. ಅಲ್ಲಿ ಆಧಾರ್ ನಂಬರ್ ಕೊಟ್ಟರೆ, ಒನ್ ಟೈಮ್ ಪಾಸ್​ವರ್ಡ್​ ಅಥವಾ ಒಟಿಪಿ ಮೊಬೈಲ್​ಗೆ ಬರುತ್ತದೆ. ಆ ಒಟಿಪಿಯನ್ನು ಸೈಟ್​ನಲ್ಲಿ ದಾಖಲಿಸಿದಾಗ ಉಳಿದ ವಿವರಗಳನ್ನು ಪರಿಶೀಲಿಸಿ ಕೂಡಲೇ ಪ್ಯಾನ್ ಹಂಚಿಕೆ ಮಾಡಲಾಗುತ್ತದೆ. ಇದು ಇ-ಪ್ಯಾನ್ ಆಗಿರುತ್ತದೆ ಎಂದು ಪಾಂಡೆ ವಿವರಿಸಿದ್ದಾರೆ.
    ಪ್ಯಾನ್ -ಆಧಾರ್ ಜೋಡಣೆಯನ್ನು ಸರ್ಕಾರ ಕಡ್ಡಾಯ ಮಾಡಿದ್ದು, ಇದುವರೆಗೆ 30.75 ಕೋಟಿ ಪ್ಯಾನ್​ಗಳು ಆಧಾರ್ ಜತೆಗೆ ಲಿಂಕ್ ಆಗಿವೆ. ಆದಾಗ್ಯೂ, 2020ರ ಜನವರಿ 27ರ ಮಾಹಿತಿ ಪ್ರಕಾರ, ಇನ್ನೂ 17.58 ಪ್ಯಾನ್​ಗಳು ಆಧಾರ್ ಜತೆಗೆ ಲಿಂಕ್ ಆಗಬೇಕಷ್ಟೆ. ಪ್ಯಾನ್​-ಆಧಾರ್ ಜೋಡಣೆಗೆ 2020ರ ಮಾರ್ಚ್ 31 ಕೊನೇ ದಿನವಾಗಿರುತ್ತದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts