More

    ಗಿರಿಕ್ಷೇತ್ರದಲ್ಲಿ ಗರುಡಗಂಭ ಪ್ರತಿಷ್ಠಾಪನೆ

    ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಗ್ರಾಮ ಗಿರಿ ಕ್ಷೇತ್ರದ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇಗುಲ ಮುಂಭಾಗ ಗರುಡಗಂಭ ಪ್ರತಿಷ್ಠಾಪನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

    ಪೂಜೆ ಹಿನ್ನೆಲೆಯಲ್ಲಿ ಮಂಗಳವಾರ ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ 6.30 ರಿಂದಲೇ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡು ಗಂಗಾ ಪೂಜೆ ಹಾಗೂ ವಿಘ್ನೇಶ್ವರ ಪೂಜೆ ನೆರವೇರಿತು. ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿಗೆ ಕುಂಕುಮಾರ್ಚನೆ, ವಿವಿಧ ಅಭಿಷೇಕಗಳು ಜರುಗಿದವು. ಒಡವೆ-ವಸ್ತ್ರಗಳಿಂದ ಅಲಂಕರಿಸಲಾಯಿತು. ಭಕ್ತರು ಹಣ್ಣು-ಕಾಯಿ ಸಮರ್ಪಿಸಿ ದೇವರ ದರ್ಶನ ಪಡೆದರು.

    ಗರುಡಗಂಭ ಪ್ರತಿಷ್ಠಾಪನೆ ಬಳಿಕ ಗಣಪತಿ ಹೋಮ, ನವಗ್ರಹ ಹಾಗೂ ವಿವಿಧ ವಿಧಿ ವಿಧಾನಗಳನ್ನು ಹಮ್ಮಿಕೊಳ್ಳಲಾಯಿತು. ನೊಣವಿನಕೆರೆ ಗ್ರಾಮದ ನಂದಗೋಪಾಲ ಶಾಸ್ತ್ರಿ ಹಾಗೂ ಅರ್ಚಕ ವೆಂಕಟೇಶಪ್ಪ ಪೂಜಾ ಕೈಂಕರ್ಯ ನಡೆಸಿಕೊಟ್ಟರು. ದುಗ್ಗೇನಹಳ್ಳಿ, ದಾಸರಹಳ್ಳಿ, ಉಂಗರಗೆರೆ, ಶೆಟ್ಟಿಹಳ್ಳಿ, ಕಬ್ಬಳಿ, ಮಸಕನಹಳ್ಳಿ ಹಾಗೂ ವಡ್ಡರಹಟ್ಟಿ ಗ್ರಾಮದ ಜನರು ಪಾಲ್ಗೊಂಡಿದ್ದರು.

    ಪ್ರಮುಖರಾದ ರಾಮಚಂದ್ರ, ಗೋವಿಂದೇಗೌಡ, ನಟರಾಜ್, ದೊಡ್ಡೇಗೌಡ, ಬಸವರಾಜ್, ಡಿ.ಆರ್.ಮಂಜುನಾಥ್, ಡಿ.ಆರ್.ಜಗದೀಶ್, ಮಸಕನಹಳ್ಳಿ ಮಂಜಣ್ಣ, ಹುಚ್ಚೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts