More

    ವಾರ್ಡ್​ಗಳಲ್ಲಿ ವಿದ್ಯುದ್ದೀಪ ಅಳವಡಿಸಿ

    ಸವಣೂರ: ಪಟ್ಟಣದ ಬಹಳಷ್ಟು ವಾರ್ಡ್​ಗಳಲ್ಲಿ ವಿದ್ಯುತ್ ದೀಪಗಳಿಲ್ಲದ್ದರಿಂದ ರಾತ್ರಿ ಕತ್ತಲು ಆವರಿಸುತ್ತಿದೆ. ಈ ಬಗ್ಗೆ ಹಲವು ಬಾರಿ ತಿಳಿಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಜನರು ನಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಂತಾಗಿದೆ ಎಂದು ಪುರಸಭೆ ಸದಸ್ಯರು ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ ಅವರನ್ನು ತರಾಟೆಗೆ ತೆಗೆದುಕೊಂಡರು.

    ಪಟ್ಟಣದ ಪುರಸಭೆಯಲ್ಲಿ ಗುರುವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ, ಅವಶ್ಯಕ ವಸ್ತುಗಳ ಖರೀದಿ, ವಿವಿಧ ಟೆಂಡರ್​ಗಳಿಗೆ ಅನುಮೋದನೆ ನೀಡುವ ಹಿನ್ನೆಲೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವಿರೋಧ (ಕಾಂಗ್ರೆಸ್) ಪಕ್ಷದ ಸದಸ್ಯರು, ಅಧ್ಯಕ್ಷರ ಅಪ್ಪಣೆ ಮೇರೆಗೆ ಸದಸ್ಯರು ಕೋರುವ ವಾರ್ಡ್​ನಲ್ಲಿನ ಕೆಲಸ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಾರೆ ಎಂದು ಆರೋಪಿಸಿದರು.

    ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ನಿರಂತರ ಕಾರ್ಯ ಕೈಗೊಳ್ಳಲಾಗುತ್ತಿದೆ. ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಕಾರ್ಯವನ್ನು ಸೂಕ್ತ ಸಮಯಕ್ಕೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅವಶ್ಯಕ ಕಾರ್ಯವನ್ನು ತಿಳಿಸಿದಲ್ಲಿ ಕೂಡಲೆ ಕೈಗೊಳ್ಳಲಾಗುವುದು ಎಂದು ಸಮಜಾಯಿಸಿ ನೀಡಿದರು.

    ಸಭೆಯಲ್ಲಿ 2020-21ನೇ ಸಾಲಿನ ಹಣಕಾಸು ಯೋಜನೆಯ ನಿರ್ಬಂಧಿತ ಹಾಗೂ ಮುಕ್ತ ಅನುದಾನದ ಅಲ್ಪಾವಧಿ ಟೆಂಡರ್​ಗಳಿಗೆ ದರ ಮಂಜೂರಾತಿ, ಎಸ್​ಎಫ್​ಪಿಸಿ ಮತ್ತು ಪುರಸಭೆ ನಿಧಿಯಲ್ಲಿ ಶೇ. 29ರಷ್ಟು, ಮುಕ್ತನಿಧಿಯಲ್ಲಿ ಶೇ. 7.25 ಹಾಗೂ ಶೇ. 5 ಯೋಜನೆ ಅನುದಾನದಲ್ಲಿನ ಕಾಮಗಾರಿಗಳ ಅಲ್ಪಾವಧಿ ಟೆಂಡರ್ ದರ ಮಂಜೂರಾತಿ ನೀಡಲಾಯಿತು.

    ಪಟ್ಟಣದ ಯಲ್ಲಮ್ಮದೇವಿ ದೇವಸ್ಥಾನ, ವಡ್ಡರ ಓಣಿ ದೇವಸ್ಥಾನ ಆಸ್ತಿ ದಾಖಲು ಮಾಡುವ ಕುರಿತು ಅನುಮೋದನೆ ನೀಡಲಾಯಿತು.

    ಮಹಾಯೋಜನೆ (ಸಿಟಿ ಪ್ಲಾನ್) ಸಾರ್ವಜನಿಕರಿಂದ ಸ್ವೀಕರಿಸಿದ ಆಕ್ಷೇಪಣೆಗಳನ್ನು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ ಮಂಡಿಸಿದರು. ಅದಕ್ಕೆ ಆಕ್ಷೇಪಿಸಿದ ಅದ್ದು ಪರಾಶ, ಪ್ರತ್ಯೇಕ ಸಭೆ ನಡೆಸಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸರ್ವ ಸದಸ್ಯರು ಬೆಂಬಲ ಸೂಚಿಸಿದ್ದರಿಂದ ಈ ಕುರಿತು ಮುಂದಿನ ಸಭೆಯಲ್ಲಿ ರ್ಚಚಿಸಲು ನಿರ್ಣಯ ಕೈಗೊಳ್ಳಲಾಯಿತು.

    ಪಟ್ಟಣದ ಸಮಗಾರ ಓಣಿಯ ದಬಲ್ ಗಟಾರ್ ತುಂಬಿ ಕೊಳಚೆಯೆಲ್ಲ ಮನೆಗೆ ನುಗ್ಗುತ್ತಿದೆ. ಕೂಡಲೆ ಸ್ವಚ್ಛಗೊಳಿಸಬೇಕು ಎಂದು ಅಶೋಕ ಮನ್ನಂಗಿ ಅಧಿಕಾರಿಗಳನ್ನು ಆಗ್ರಹಿಸಿದರು.

    ಅಧ್ಯಕ್ಷೆ ಶೈಲಾ ಮುದಿಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಲ್ಲಾವುದ್ದೀನ್ ಮನಿಯಾರ, ಸದಸ್ಯರು, ಅಧಿಕಾರಿಗಳು ಇದ್ದರು.

    ಫೋಟೋ-15ಎಸ್​ವಿಆರ್01-ಸವಣೂರ ಪುರಸಭೆಯಲ್ಲಿ ಗುರುವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಅದ್ದು ಪರಾಶ ಟೆಂಡರ್ ಅನುಮೋದನೆ ಕುರಿತು ಮುಖ್ಯಾಧಿಕಾರಿ ಕೃಷ್ಣ ಕಟ್ಟಮನಿ ಅವರೊಂದಿಗೆ ವಾಗ್ವಾದ ನಡೆಸಿದರು.

    =======================

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts