More

    ಸರ್ವ ಜನಾಂಗಕ್ಕೂ ಸ್ಫೂರ್ತಿ ಡಾ. ಅಂಬೇಡ್ಕರ್

    ಜಮಖಂಡಿ: ಭಾರತೀಯ ಪ್ರತಿಯೊಬ್ಬ ಪ್ರಜೆಗೂ ಮೌಲ್ಯಯುತ ಮತದಾನದ ಹಕ್ಕನ್ನು ನಿಡುವ ಮೂಲಕ ಎಲ್ಲರೂ ಸಮಾನರು ಎಂದು ತಿಳಿಸಿದ ಅವರು ಸರ್ವ ಜನಾಂಗಕ್ಕೂ ಸ್ಫೂರ್ತಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.

    ನಗರದ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

    ಡಿವೈಎಸ್‌ಪಿ ಶಾಂತವೀರ ಈ. ಮಾತನಾಡಿ, ವಿಶ್ವಕ್ಕೆ ಒಬ್ಬನೇ ಸೂರ್ಯನಾದರೆ ಭರತವನ್ನು ಬೆಳಗಿಸಲು ಇಬ್ಬರು ಸೂರ್ಯರಿದ್ದಾರೆ ಒಬ್ಬ ಹುಟ್ಟಿ ಮುಳುಗುತ್ತಾನೆ. ಆದರೆ ಹುಟ್ಟಿದ ಮೇಲೆ ಮುಳುಗದ ಸೂರ್ಯ ಡಾ. ಬಿ.ಆರ್. ಅಂಬೇಡ್ಕರ್ ಅವರು. ಸ್ವಾತಂತ್ರೃ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸಿಕೊಟ್ಟವರು ಅವರು. ಅವರ ವಿಚಾರಧಾರೆಗಳು ಸಂವಿಧಾನದಲ್ಲಿ ಉಲ್ಲೇಖ ಆಗದೆ ಹೋಗಿದ್ದರೆ ನಮ್ಮ ರಾಷ್ಟ್ರ ಊಹೆಮಾಡಿಕೊಳ್ಳಲು ಅಸಾಧ್ಯವಾಗುತ್ತಿತ್ತು. ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಅವರನ್ನು ನೆನೆಯಬೇಕು ಎಂದರು.

    ಧರ್ಮ ಇರುವುದು ಮನುಷ್ಯರಿಗಾಗಿ ಧರ್ಮಕ್ಕಾಗಿ ಮನುಷ್ಯರು ಅಲ್ಲ, ನಾನು ಸಂವಿಧಾನ ರಥವನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದ್ದೇನೆ. ನಿವೇಲ್ಲರೂ ಅದನ್ನು ಮುಂದಕ್ಕೆ ಎಳೆಯಿರಿ. ಯಾವುದೇ ಕಾಲಕ್ಕೂ ಅದನ್ನು ಹಿಂದಕ್ಕೆ ಹೋಗಲು ಬಿಡಬೇಡಿ ಎಂಬ ಸಮಾಜ ಕಳಕಳಿ ಅವರದಾಗಿತ್ತು ಎಂದರು.

    ಜ್ಞಾನ, ಸಮಾನತೆ, ಸೀ ಸ್ವಾತಂತ್ರೃ, ಪತ್ರಿಕಾ ಸ್ವಾತಂತ್ರೃ, ಹೋರಾಟ, ಸಂಘಟನೆ ಎಂದಾಗ ಅಂಬೇಡ್ಕರ್ ನೆನಪಾಗುತ್ತದೆ. ಪ್ರಜಾ ಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನತೆ ನೀಡಿದ ಧೀಮಂತ ನಾಯಕ ಡಾ. ಅಂಬೇಡ್ಕರ್. ಅವರ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಲು ಶ್ರಮಿಸೋಣ ಎಂದರು.

    ನಗರದ ಅಂಬೇಡ್ಕರ್ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭೀಮ ಧ್ವಜಾರೋಹಣ ನೆರವೇರಿಸಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
    ರುದ್ರಾವಧೂತ ಮಠದ ಕೃಷ್ಣಾನಂದ ಶ್ರೀಗಳು, ತಹಸೀಲ್ದಾರ್ ಸದಾಶಿವ ಮಕ್ಕೋಜಿ, ನಗರಸಭೆ ಪೌರಾಯುಕ್ತೆ ಲಕ್ಷ್ಮಿ ಅಷ್ಟಗಿ, ಸಮಾಜಕಲ್ಯಾಣಾಧಿಕಾರಿ ಸಿ.ಎಸ್. ಗಡ್ಡದೇವರಮಠ, ಟಿಎಚ್‌ಒ ಡಾ.ಜಿ.ಎಸ್. ಗಲಗಲಿ, ಸಿಪಿಐ ಮಲ್ಲಪ್ಪ ಮಡ್ಡಿ, ಬಿಇಒ ಅಶೋಕ ಬಸಣ್ಣವರ, ಸಂತೋಷ ಬಾಡಗಿ, ಸಿದ್ದು ಮಿಸಿ, ದಾನೇಶ ಘಾಟಗೆ, ಶಾಮರಾವ ಘಾಟಗೆ, ಈಶ್ವರ ವಾಳೆಣ್ಣವರ, ಪರಮಾನಂದ ಗವರೋಜಿ, ನಾಗು ಹೆಗಡೆ, ಶಶಿಧರ ಮೀಸಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts