More

    ಅತಿವೃಷ್ಟಿ ಹಾನಿ ಕೇಂದ್ರ ತಂಡದಿಂದ ಪರಿಶೀಲನೆ ಇಂದು

    ಹಾವೇರಿ: ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಸೆ. 9ರಂದು ಜಿಲ್ಲೆಯ ಆಯ್ದ ಗ್ರಾಮಗಳಿಗೆ ಭೇಟಿ ನೀಡಿ, ನಿರಂತರ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳನ್ನು ವೀಕ್ಷಿಸಲಿದೆ.

    ಭಾರತ ಸರ್ಕಾರದ ಜಲಶಕ್ತಿ ಇಲಾಖೆಯ ಅಶೋಕಕುಮಾರ ನೇತೃತ್ವದ ತಂಡ ಬೆಳಗ್ಗೆ 8ಕ್ಕೆ ಹಾವೇರಿಯಿಂದ ಹೊರಟು ಚಿಕ್ಕಲಿಂಗದಹಳ್ಳಿ, ಕದರಮಂಡಲಗಿ, ಅಸುಂಡಿ, ಕುಂಚೂರು, ಮಕರಿ, ಕೋಡ, ಶಂಕರನಹಳ್ಳಿ, ಬೋಗಾವಿ, ತಿಳವಳ್ಳಿ, ಸೋಮಸಾಗರ ಹಾಗೂ ಆಡೂರ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಯಾಗಿರುವ ಕೃಷಿ, ತೋಟಗಾರಿಕೆ ಬೆಳೆ ಹಾನಿ, ಮನೆ ಹಾನಿ, ಅಂಗನವಾಡಿ, ಶಾಲಾ ಕಟ್ಟಡ, ರಸ್ತೆ ಹಾನಿ ಪರಿಶೀಲನೆ ನಡೆಸಲಿದೆ.

    ಮಧ್ಯಾಹ್ನ 3.10ರಿಂದ ತೆವರಮೆಳ್ಳಿಹಳ್ಳಿ, ಹಲಸೂರ, ಬಂಕಾಪುರ ಟೋಲ್​ಗೇಟ್, ಬಂಕಾಪುರ, ಸವಣೂರ, ಅಲ್ಲಿಪುರ, ಶಿಗ್ಗಾಂವಿ, ಮುಗಳಿ ಹಾಗೂ ತಿಮ್ಮಾಪುರ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಯಾಗಿರುವ ಕೃಷಿ, ತೋಟಗಾರಿಕೆ ಬೆಳೆ ಹಾನಿ, ಮನೆ ಹಾನಿ, ಅಂಗನವಾಡಿ, ಶಾಲಾ ಕಟ್ಟಡ, ರಸ್ತೆ ಹಾನಿ ಪರಿಶೀಲನೆ ನಡೆಸಲಿದೆ. ಇದಕ್ಕೂ ಮುನ್ನ ಜಿಲ್ಲಾಡಳಿತದಿಂದ ಹಾನಿಯ ಮಾಹಿತಿಯನ್ನು ಪಡೆದುಕೊಳ್ಳಲಿದೆ. ಹಾನಿಯ ತೀವ್ರತೆ ಕುರಿತು ಛಾಯಾಚಿತ್ರ ಪ್ರದರ್ಶನ ವೀಕ್ಷಣೆ ನಡೆಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts