More

    ಸಕಾಲದಲ್ಲಿ ವೇತನ ಪಾವತಿಗೆ ವಾಟರ್‌ಮನ್‌ಗಳ ಒತ್ತಾಯ

    ಸೊರಬ: ಸರಿಯಾದ ಸಮಯಕ್ಕೆ ವೇತನ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಪಂಗಳ ವಾಟರ್‌ಮನ್‌ಗಳು ಸಿಐಟಿಯು ನೇತೃತ್ವದಲ್ಲಿ ಮಂಗಳವಾರ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

    ಗೃಹಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದೇವೆ. ಮೂರ‌್ನಾಲ್ಕೂ ತಿಂಗಳಿಗೊಮ್ಮೆ ಸಂಬಳ ನೀಡಲಾಗುತ್ತದೆ. ಆಗಿರುವ ಸಂಬಳವನ್ನೂ ಸಂಬಂಧಿಸಿದ ಅಧಿಕಾರಿಗಳು ಸರಿಯಾಗಿ ನೀಡದೆ ನಮ್ಮ ಬ್ಯಾಂಕ್ ಖಾತೆಗೆ ಹಾಕಲು ತಾರತಮ್ಯ ಮಾಡುತ್ತಾರೆ. ಅಲ್ಲದೆ 2 ದಿನಗಳ ನಂತರ ಹಾಕುತ್ತಾರೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಕೆಲವು ಗ್ರಾಪಂಗಳ ಸಿಬ್ಬಂದಿಗೆ 7-8 ತಿಂಗಳಿನಿಂದ ವೇತನ ಬಂದಿಲ್ಲ. ಕೂಡಲೇ ವೇತನ ಪಾವತಿಸಬೇಕು ಮತ್ತು ವೇತನ ತಾರತಮ್ಯ ಸರಿಪಡಿಸಬೇಕು ಎಂದು ಸಿಐಟಿಯು ತಾಲೂಕು ಅಧ್ಯಕ್ಷ ಚನ್ನಬಸಪ್ಪ ಒತ್ತಾಯಿಸಿದರು.
    ಸಮಯಕ್ಕೆ ಸರಿಯಾಗಿ ವೇತನ ನೀಡಬೇಕು. ಹಿಂದಿನ ಸರ್ಕಾರ 2020ರಲ್ಲಿ 2017 ರಲ್ಲಿದ್ದ ಎಲ್ಲ ಸಿಬ್ಬಂದಿಯನ್ನೂ ಕಾಯಂ ಮಾಡುತ್ತವೆ ಎಂದು ಹೇಳಿದ್ದರೂ ಇನ್ನೂ ಆಗಿಲ್ಲ. ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ದಿನಕ್ಕೆ ಎರಡು ಬಾರಿ ೆನ್‌ನಲ್ಲಿ ಹಾಜರಾತಿ ಮಾಡಬೇಕು. ಇದನ್ನು ನಾವಿರುವ ಗ್ರಾಮದಲ್ಲೇ ಮಾಡುವ ಅವಕಾಶ ನೀಡಬೇಕು. ಪ್ರತಿ ದಿನ ಗ್ರಾಮದಿಂದ 5-6 ಕಿ.ಮೀ ಓಡಾಡಲು ಆಗುವುದಿಲ್ಲ. ಕೆಲ ಗ್ರಾಪಂಗಳಲ್ಲಿ ನಮ್ಮ ಸಿಬ್ಬಂದಿಗೆ ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿದರು.
    ಸಿಐಟಿಯು ನೌಕರರಿಗೆ ಪಿಂಚಣಿ ಸೌಲಭ್ಯ ನೀಡಬೇಕು. ಮೃತ ನೌಕರನ ಮನೆಯವರಿಗೆ ಕೆಲಸ ನೀಡಬೇಕು. ಈ ಹಿಂದೆ ಬಹಳಷ್ಟು ಸಿಬ್ಬಂದಿ ಮೃತಪಟ್ಟಿದ್ದು ಸರ್ಕಾರದಿಂದ ಅವರಿಗೆ ಯಾವುದೇ ಸೌಲಭ್ಯ ನೀಡಿಲ್ಲ ಎಂದು ದೂರಿದರು.
    ಸಿಐಟಿಯು ತಾಲೂಕು ಉಪಾಧ್ಯಕ್ಷ ನಿಂಗರಾಜ್, ಎಚ್.ಮೋಹನ್, ನಾಗರಾಜ್, ಶೇಷಪ್ಪ, ನಿಂಗಪ್ಪ, ಹನುಮಂತ, ಪುರಸಪ್ಪ, ಆನಂದಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts