More

    ಮತದಾರ ಪಟ್ಟಿ ಪರಿಷ್ಕರಣೆಗೆ ಒತ್ತಾಯ

    ಹಾನಗಲ್ಲ: ನ್ಯೂನತೆಯುಳ್ಳ ಮತದಾರರ ಪಟ್ಟಿಯನ್ನು ಪರಿಷ್ಕರಿಸುವವರೆಗೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಬಾರದು ಎಂದು ತಾಲೂಕಿನ ಬೈಚವಳ್ಳಿ ಗ್ರಾಮದ 1 ಹಾಗೂ 2ನೇ ವಾರ್ಡ್​ನ ಅಭ್ಯರ್ಥಿಗಳು ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

    ಬೈಚವಳ್ಳಿ ಗ್ರಾಮದ ಮತದಾರರ ಪಟ್ಟಿಯನ್ನು 2015ರಂತೆ ಮುಂದುವರಿಸಬೇಕು. 1ನೇ ವಾರ್ಡ್​ನಲ್ಲಿ 774, 2ನೇ ವಾರ್ಡ್​ನಲ್ಲಿ 650 ಮತದಾರರ ಹೆಸರುಗಳಿದ್ದವು. ಈಗ 2020ರಲ್ಲಿ ಪರಿಷ್ಕರಿಸಿರುವ ಮತದಾರರ ಯಾದಿಯಲ್ಲಿ 1ನೇ ವಾರ್ಡ್​ಗೆ 1050 ಹಾಗೂ 2ನೇ ವಾರ್ಡ್​ಗೆ 348 ಮತದಾರರ ಹೆಸರುಗಳಿವೆ. ಪ್ರತಿ ವಾರ್ಡ್​ನಲ್ಲಿ ಒಂದು ಸದಸ್ಯ ಸ್ಥಾನಕ್ಕೆ ಕನಿಷ್ಠ 250 ಮತದಾರರಿರಬೇಕೆಂಬ ನಿಯಮವಿದೆ. 2ನೇ ವಾರ್ಡ್​ಗೆ 2 ಸದಸ್ಯ ಸ್ಥಾನಗಳಿದ್ದರೂ, ಮತದಾರರ ಸಂಖ್ಯೆ ಕಡಿಮೆಯಾಗಿರುವುದು ಆಶ್ಚರ್ಯ ತರಿಸಿದೆ. ಇದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹೊಣೆಗಾರರಾಗಿದ್ದಾರೆ. ಈ ಸಮಸ್ಯೆ ಪರಿಹರಿಸುವಂತೆ ಗ್ರಾಮಲೆಕ್ಕಾಧಿಕಾರಿಗಳ ಗಮನಕ್ಕೆ ತಂದಾಗ ಸರಿಪಡಿಸುವ ಭರವಸೆ ನೀಡಿದ್ದರು. ಆದರೂ ಸಮಸ್ಯೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಬೈಚವಳ್ಳಿ ಗ್ರಾಮದ 2 ವಾರ್ಡ್​ಗಳ ಮತದಾರರ ಪಟ್ಟಿಯನ್ನು 2015 ರಲ್ಲಿರುವಂತೆ ಪರಿಷ್ಕರಿಸಿ ನಂತರ ಚುನಾವಣೆ ನಡೆಸಬೇಕು. ಇಲ್ಲವಾದಲ್ಲಿ ಮತದಾನ ಬಹಿಷ್ಕರಿಸುವುದಾಗಿ 1 ಹಾಗೂ 2ನೇ ವಾರ್ಡ್​ನ ಅಭ್ಯರ್ಥಿಗಳಾದ ಉಮೇಶ ದಾನಪ್ಪನವರ, ನೀಲವ್ವ ಸಾವಿಕೇರಿ, ರೇಖಾ ಹಳೇಬಂಕಾಪುರ, ಶಶಿಧರ ಕೋಟಿ, ಕವನಾ ಕಲ್ಲನಗೌಡ್ರ, ಸರಸ್ವತಿ ಡುಮ್ಮಣ್ಣನವರ, ಸುಭಾಸ ನಾಗನೂರ, ರೇಖಾ ನಾಗನೂರ, ಸೋಮಪ್ಪ ಕೋಡನವರ, ಗಂಗಮಾಳವ್ವ ಕಿವುಡೇರ, ಶಂಭಣ್ಣ ಹಳೇಬಂಕಾಪುರ ಮನವಿಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts