More

    ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರಗಳ ಪ್ರಾಯೋಗಿಕ ಅನುಭವ ಅಗತ್ಯ

    ಶಿವಮೊಗ್ಗ: ಕ್ಯಾಮೆರಾ ತಂತ್ರಜ್ಞಾನದಲ್ಲಿ ಪ್ರತಿನಿತ್ಯ ಹೊಸ ಹೊಸ ಆವಿಷ್ಕಾರಗಳಾಗುತ್ತಿದ್ದು, ಟೆಲಿವಿಷನ್ ಹಾಗೂ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಅವುಗಳ ಪರಿಚಯ ಮತ್ತು ಪ್ರಾಯೋಗಿಕ ಅನುಭವವಿರಬೇಕು ಎಂದು ಖಾಸಗಿ ಸುದ್ದಿವಾಹಿನಿಯ ಕ್ರಿಯೇಟಿವ್ ಹೆಡ್ ಸತ್ಯಬೋಧ ಜೋಶಿ ಹೇಳಿದರು.
    ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಸ್ಟುಡಿಯೋ ಕಾರ್ಯಕ್ರಮ ನಿರ್ಮಾಣ ಕುರಿತ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.
    ಮಾಧ್ಯಮಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ವಿದ್ಯಾರ್ಥಿಗಳೇ. ಪ್ರತೀ ದಿನವೂ ಹೊಸದಾಗಿ ಕಲಿಯುವಂತದ್ದು ಸಾಕಷ್ಟಿದೆ. ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿಯಿದ್ದರೆ ಹಿಂದಿಗಿಂತ ಹೆಚ್ಚು ಕಲಿಯುವ ಅವಕಾಶಗಳಿವೆ. ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡರೆ ಸುಲಭವಾಗಿ ಉದ್ಯೋಗಾವಕಾಶಗಳು ಸಿಗುತ್ತವೆ ಎಂದರು.
    ಟಿವಿ ಸ್ಟುಡಿಯೋಗಳಲ್ಲಿ ಕಾರ್ಯಕ್ರಮಗಳನ್ನು ನಿರ್ಮಿಸುವ ವಿವಿಧ ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಕಲಿಸಿಕೊಟ್ಟರು. ವಿಭಾಗದಿಂದ ಸತ್ಯಬೋಧ ಜೋಶಿ ಅವರನ್ನು ಸನ್ಮಾನಿಸಲಾಯಿತು. ವಿಭಾಗದ ಮುಖ್ಯಸ್ಥ ಪ್ರೊ. ಸತೀಶ್‌ಕುಮಾರ್ ಅಂಡಿಂಜೆ, ಪ್ರಾಧ್ಯಾಪಕರಾದ ಪ್ರೊ. ಪಿ.ಎ.ವರ್ಗೀಸ್, ಡಾ. ಎಂ.ಆರ್.ಸತ್ಯಪ್ರಕಾಶ್, ಉಪನ್ಯಾಸಕಿ ಡಾ. ರುಮಾನ ತನ್ವೀರ್, ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts