More

    ಮನ್‌ಮುಲ್‌ನಿಂದ ಹೈನುಗಾರರಿಗೆ ಅನ್ಯಾಯ

    ಮಳವಳ್ಳಿ: ಮಂಡ್ಯ ಹಾಲು ಒಕ್ಕೂಟ ಹಾಲಿನ ಖರೀದಿ ದರ ಕಡಿತಗೊಳಿಸುವುದರ ಜತೆಗೆ ಪಶು ಆಹಾರದ ಬೆಲೆಯನ್ನು ಹೆಚ್ಚಳ ಮಾಡುವ ಮೂಲಕ ಅನ್ನದಾತರನ್ನು ಶೋಷಣೆ ಮಾಡಲು ಮುಂದಾಗಿದೆ ಎಂದು ಗೌಡಗೆರೆ ಡೇರಿ ನಿರ್ದೇಶಕ ಜಿ.ಎಸ್.ಮಹದೇವಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಬರದಿಂದ ತತ್ತರಿಸಿ ಜೀವನೋಪಾಯಕ್ಕಾಗಿ ಸಂಘ, ಸಂಸ್ಥೆಗಳಿಂದ ಸಾಲ ಮಾಡಿಕೊಂಡು ಹಸುಗಳನ್ನು ಖರೀದಿಸಿ ಅವುಗಳು ನೀಡುವ ಹಾಲನ್ನು ಮಾರಾಟ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ ಇತ್ತೀಚೆಗೆ ಮನ್‌ಮುಲ್ ಆಡಳಿತ ಮಂಡಳಿ ಲೀಟರ್ ಹಾಲಿಗೆ 1.5 ರೂ. ಇಳಿಕೆ ಮಾಡಿರುವುದಲ್ಲದೆ ಪಶು ಆಹಾರದ 50 ಕೆ.ಜಿ. ಬ್ಯಾಗ್‌ಗೆ 85 ರೂ. ಹೆಚ್ಚಳ ಮಾಡಿ ರೈತರು ಬದುಕುವ ಹಕ್ಕನ್ನು ಕಸಿದುಕೊಂಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಈ ನಡುವೆ ಬರ ಪರಿಹಾರವನ್ನು ಒಂದೂವರೆ ತಿಂಗಳಲ್ಲಿ ಕೊಡುತ್ತೇವೆಂದು ಘೋಷಿಸಿದ್ದ ರಾಜ್ಯ ಸರ್ಕಾರ ಈವರೆಗೆ ಹಣ ಕೊಟ್ಟಿಲ್ಲ. ಜತೆಗೆ ಹಾಲು ಉತ್ಪಾದಕರಿಗೆ ನೀಡುತ್ತಿದ್ದ 4 ರೂ. ಪ್ರೋತ್ಸಾಹ ಧನವನ್ನು ಆರು ತಿಂಗಳಿಂದ ಬಿಡುಗಡೆ ಮಾಡಿಲ್ಲ. ಈ ಎಲ್ಲ ಕೆಟ್ಟ ಬೆಳವಣಿಗೆಯಿಂದ ಕೃಷಿಕರು ತಮ್ಮ ಮಕ್ಕಳ ಶಾಲಾ ಶುಲ್ಕ, ಜೀವನ ನಿರ್ವಹಣೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ರಾಜ್ಯ ಸರ್ಕಾರ ಹಾಲಿನ ಪ್ರೋತ್ಸಾಹ ಧನ ಹಾಗೂ ಬರ ಪರಿಹಾರ ಬಿಡುಗಡೆಗೆ ಕ್ರಮ ವಹಿಸುವುದರ ಜತೆಗೆ ಮಂಡ್ಯ ಹಾಲು ಒಕ್ಕೂಟಕ್ಕೆ ಹಾಲಿನ ದರ ಹೆಚ್ಚಳ ಮಾಡಲು ಸೂಚನೆ ನೀಡಬೇಕು. ಇಲ್ಲವಾದಲ್ಲಿ ಗ್ರಾಮದ ಮತ್ತು ಸುತ್ತಮುತ್ತಲ ಡೇರಿಗಳ ಹಾಲು ಉತ್ಪಾದಕ ಹಾಗೂ ರೈತರನ್ನು ಒಗ್ಗೂಡಿಸಿ ಸರ್ಕಾರ ಹಾಗೂ ಮನ್‌ಮುಲ್ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts