More

    ಗಾಯಗೊಂಡಿದ್ದ ನವಿಲಿಗೆ ಪಿಎಚ್‌ಸಿ ಸಿಬ್ಬಂದಿ ಚಿಕಿತ್ಸೆ

    ಸಂಡೂರು: ಗಾಯಗೊಂಡಿದ್ದ ನವಿಲಿಗೆ ತಾರಾನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಸಿಬ್ಬಂದಿ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ತಾಲೂಕಿನ ತಾರಾನಗರ ಪಿಎಚ್‌ಸಿ ವ್ಯಾಪ್ತಿಯಲ್ಲಿ ನವಿಲೊಂದು ಗುರುವಾರ ಗಾಯಗೊಂಡು ನಡೆಲಾಗದ ಸ್ಥಿತಿಯಲ್ಲಿತ್ತು. ಇದ್ದನ್ನು ಅರಣ್ಯ ಇಲಾಖೆ ನೌಕರ ರಾಮು ನೋಡಿದ್ದಾನೆ. ಕೂಡಲೇ ಪಿಎಚ್‌ಸಿಗೆ ತಂದಿದ್ದಾರೆ. ಪರೀಕ್ಷಿಸಿದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುನೀತಾ, ಡಾ.ಹರೀಶ್ ಅವರು ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಪ್ರಾಣಿಗಳಿಗೆ ನೀಡುವ ಔಷಧಗಳನ್ನು ತರಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ಇದಕ್ಕೆ ಆರೋಗ್ಯ ಸಿಬ್ಬಂದಿ ಶಿವಗಂಗಾ, ಶಂಕರ್ ಸಹಾಯ ಮಾಡಿದ್ದಾರೆ. ಸದ್ಯ ನವಿಲು ಆರೋಗ್ಯವಾಗಿದ್ದು, ಕಾಡಿಗೆ ಬಿಡಲಾಗಿದೆ.

    ಈ ಕುರಿತು ಸಂಡೂರು ದಕ್ಷಿಣ ವಲಯ ಆರ್‌ಎಫ್‌ಒ ಡಿ.ಕೆ.ಗಿರೀಶ್ ಕುಮಾರ್ ಪ್ರತಿಕ್ರಿಯಿಸಿ, ಸಂಡೂರು ಅರಣ್ಯ ಪ್ರದೇಶದಲ್ಲಿ ಹೆಚ್ಚು ಪ್ರಾಣಿ ಪಕ್ಷಿಗಳು ಕಂಡು ಬರುತ್ತವೆ. ಪ್ರಾಣಿ, ಪಕ್ಷಿಗಳು ರಸ್ತೆ ದಾಟುವಾಗ ಅದಿರು ಲಾರಿ, ಇತರ ವಾಹನಗಳ ಚಾಲಕರು ನಿಧಾನವಾಗಿ ಚಲಿಸಬೇಕು. ಈ ಮೂಲಕ ಕಾಡುಪ್ರಾಣಿ, ಪಕ್ಷಿಗಳ ಸಂತತಿ ಕಾಪಾಡಬೇಕು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts