More

    ಗಾಯಗೊಂಡಿದ್ದ ಕಾಳಿಂಗ ಸರ್ಪಕ್ಕೆ ಚಿಕಿತ್ಸೆ

    ಬೆಳ್ತಂಗಡಿ: ತಾಲೂಕಿನ ದಿಡುಪೆ ಕಾಜೂರಿನ ಸಮೀಪ ಗಾಯಗೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪಕ್ಕೆ ಬೆಳ್ತಂಗಡಿಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ವಾಹನ ಅಥವಾ ಯಂತ್ರಕ್ಕೆ ಸಿಲುಕಿ ರಸ್ತೆಬದಿ ಗಾಯಗೊಂಡು ಒದ್ದಾಡುತ್ತಿದ್ದ ಕಾಳಿಂಗ ಸರ್ಪವನ್ನು ಕಂಡ ಸ್ಥಳೀಯರು ಉರಗ ತಜ್ಞ ಉಜಿರೆಯ ಸ್ನೇಕ್ ಜಾಯ್‌ಗೆ ತಿಳಿಸಿದ್ದರು. ಗಂಭೀರ ಗಾಯಗೊಂಡಿದ್ದ ಈ ಹಾವಿನ ಕುರಿತು ಬೆಳ್ತಂಗಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಬಳಿಕ, ಪ್ರಥಮ ಚಿಕಿತ್ಸೆ ನೀಡಿ ಅರಣ್ಯ ಇಲಾಖೆಯ ಸಿಬ್ಬಂದಿ ಶರತ್ ಶೆಟ್ಟಿ ಅವರ ಸಹಕಾರದಲ್ಲಿ ಮಂಗಳೂರಿನ ಪಶು ತಜ್ಞ ಡಾ.ಯಶಸ್ವಿ ನಾರಾವಿ ಅವರಲ್ಲಿ ಕೊಂಡೊಯ್ದು ಶಸ್ತ್ರ ಚಿಕಿತ್ಸೆ ಮಾಡಿಸಲಾಯಿತು.

    ಶಸ್ತ್ರಚಿಕಿತ್ಸೆ ಬಳಿಕ ಬೆಳ್ತಂಗಡಿಯ ಪಶುಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಕಾಳಿಂಗ ಸರ್ಪ ಚೇತರಿಕೆ ಕಾಣುತ್ತಿದೆ. ಸಂಪೂರ್ಣ ಚೇತರಿಸಿದ ಬಳಿಕ ಕಾಳಿಂಗ ಸರ್ಪವನ್ನು ಉರಗತಜ್ಞರ ನೇತೃತ್ವದಲ್ಲಿ ಕಾಡಿಗೆ ಬಿಡಲಾಗುವುದು ಎಂದು ಬೆಳ್ತಂಗಡಿ ವಲಯಾರಣ್ಯಾಧಿಕಾರಿ ತ್ಯಾಗರಾಜ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts