More

    ಪೈನಾಪಲ್​ನಿಂದಲೇ ಉಳಿಯಿತು ಗಂಭೀರವಾಗಿ ಗಾಯಗೊಂಡಿದ್ದ ಆನೆಯ ಜೀವ…!

    ಇಡುಕ್ಕಿ: ಕೆಲ ದಿನಗಳ ಹಿಂದೆ ಸ್ಪೋಟಕ ತುಂಬಿದ ಪೈನಾಪಲ್​ ತಿಂದು ಗರ್ಭಿಣಿ ಆನೆ ಮೃತಪಟ್ಟಿದ್ದ ಪ್ರಕರಣ ಇಡೀ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೇ, ಆನೆ ಸಾವಿನ ಬಗ್ಗೆ ಎಲ್ಲರೂ ಮರುಕ ವ್ಯಕ್ತಪಡಿಸಿದ್ದರು. ಇದೀಗ ಅದೇ ಪೈನಾಪಲ್​ನಿಂದಲೇ ಆನೆ ಮರಿಯ ಜೀವವೊಂದು ಉಳಿದಿದೆ.

    ಹೌದು, ಕೇರಳದ ಇಡುಕ್ಕಿ ಜಿಲ್ಲೆಯ ಕಾಂಥಾಲ್ಲೂರ್​ ಪಂಚಾಯಿತಿಯ ಶಿವಬಂತಿ ಗ್ರಾಮ ಸಮೀಪದ ಅರಣ್ಯದಲ್ಲಿ ಆನೆಯ ಮರಿಯೊಂದು ತನ್ನ ಕಾಲು ಮುರಿದುಕೊಂಡು ಗಂಭೀರವಾಗಿ ಗಾಯಗೊಂಡಿತ್ತು. ಜೂನ್​ 5 ರಂದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಮಾಹಿತಿ ತಿಳಿದು ಪಶುವೈದ್ಯಾಧಿಕಾರಿ ಡಾ ನಿಶಾ ರಾಚೆಲ್​ ಅವರನ್ನು ಸ್ಥಳಕ್ಕೆ ಆಗಮಿಸಿದ ಪರೀಕ್ಷಿಸಿದ್ದರು.

    ಕ್ಷಣ ಕ್ಷಣದ ಮಾಹಿತಿ ಹಾಗೂ ಕುತೂಹಲಕಾರಿ ಸುದ್ದಿಗಳಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಫಾಲೋ ಮಾಡಲು ಇಲ್ಲಿ ಕ್ಲಿಕ್ಕಿಸಿ

    ಈ ವೇಳೆ ಪೈನಾಪಲ್​ನಲ್ಲಿ ಔಷಧ ತುಂಬಿ ಆನೆಗೆ ನೀಡಲಾಗಿತ್ತು. ಇದೀಗ ಕಾಂಥಾಲ್ಲೂರ್​ ಅರಣ್ಯ ವಲಯದ 9 ಸಿಬ್ಬಂದಿಯನ್ನು 24 ಗಂಟೆ ಆನೆಯ ಮೇಲೆ ನಿಗಾವಹಿಸಲು ನಿಯೋಜಿಸಲಾಗಿದೆ. ಸ್ಥಳೀಯರಿಂದ ಹಾಗೂ ಇತರೆ ಆನೆಗಳು ಗುಂಪಿನಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಇದನ್ನೂ ಓದಿ: VIDEO| ಚೀನಾ ಮೇಲಿನ ಕೋಪಕ್ಕೆ ಕಿಮ್​ ಜಾಂಗ್​ ಉನ್​ ಪ್ರತಿಕೃತಿ ದಹಿಸಿ ಆಕ್ರೋಶ…!

    ಸದ್ಯ ಆನೆಯನ್ನು ಚಂದ್ರಮಂಡಲಂ ಏರಿಯಾದಲ್ಲಿ ಸುರಕ್ಷಿತವಾಗಿ ನೋಡಿಕೊಳ್ಳಲಾಗುತ್ತಿದೆ. ನೇರವಾಗಿ ಔಷಧ ಕೊಡಲು ಸಾಧ್ಯವಾಗದಿದ್ದರಿಂದ ಪೈನಾಪಲ್​ನಲ್ಲಿ ತುಂಬಿ ಆನೆಗೆ ನೀಡಲಾಗಿತ್ತು. ಬಲ ಕಾಲಿಗೆ ಗಂಭೀರವಾದ ಗಾಯವಾಗಿದ್ದರಿಂದ ಸರಿಯಾಗಿ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಚೇತರಿಸಿಕೊಳ್ಳುತ್ತಿದ್ದು, ಈಗ ಯಾರ ಸಹಾಯವೂ ಇಲ್ಲದೇ ಎದ್ದು ನಿಲ್ಲುತ್ತದೆ ಎಂದು ಕಾಂಥಾಲ್ಲೂರ್​ ವಲಯ ಅರಣ್ಯಾಧಿಕಾರಿ ಎಸ್​. ಸಂದೀಪ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಗರ್ಭಿಣಿ ಆನೆ ಕೊಂದ ಪ್ರಕರಣದಲ್ಲಿ ಮೂವರ ಬಂಧನ: ಮರಣೋತ್ತರ ವರದಿಯಲ್ಲಿ ನೋವಿನ ಸಂಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts