More

    250 ಕೋಟಿ ರೂ. ವಂಚನೆ, ಅಕ್ರಮ ಹಣಕಾಸು ವಹಿವಾಟು: ಇಂಜಾಜ್ ಕಂಪನಿ ಮುಖ್ಯಸ್ಥ ಇಡಿ ಬಲೆಗೆ

    ಬೆಂಗಳೂರು: ಅಕ್ರಮ ಹಣ ವಹಿವಾಟು ಆರೋಪ ಪ್ರಕರಣದಲ್ಲಿ ಇಂಜಾಜ್ ಇಂಟರ್ ನ್ಯಾಷನಲ್ ಮತ್ತು ಅಸೋಸಿಯಟೆಡ್ ಗ್ರೂಪ್ ಮುಖ್ಯಸ್ಥನನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ.

    ಇಂಜಾಜ್ ಇಂಟರ್ ನ್ಯಾಷನಲ್ ಮತ್ತು ಅಸೋಸಿಯಟೆಡ್ ಗ್ರೂಪ್ ಮುಖ್ಯಸ್ಥ ಮಿಸ್ಬಹೀದ್ದೀನ್ ಬಂಧಿತ. ಆರೋಪಿಯನ್ನು ವಿಶೇಷ ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಇಡಿ ಅಧಿಕಾರಿಗಳು ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಕೋರ್ಟ್, ನ.19ರ ವರೆಗೆ ಆರೋಪಿಯನ್ನು ಇಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.

    ಆರೋಪಿಗಳಾದ ಮಿಸ್ಬಹೀದ್ದೀನ್ ಮತ್ತು ಸುಹೇಲ್ ಅಹ್ಮದ್ ಸೇರಿಕೊಂಡು ಇಂಜಾಜ್ ಕಂಪನಿ ತೆರೆದಿದ್ದರು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ಮತ್ತು ಬಡ್ಡಿ ಕೊಡುವುದಾಗಿ ಗ್ರಾಹಕರಿಗೆ ಆಮಿಷವೊಡ್ಡಿ ಸಾವಿರಾರು ಜನರಿಂದ 250 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡಿದ್ದರು. ಆದರೆ, ಭರವಸೆಯಂತೆ ಹಣ ವಾಪಸ್ ಕೊಡದೆ ಮೊಸ ಮಾಡಿದ್ದ ಪರಿಣಾಮ ವಿಲ್ಸನ್ ಗಾರ್ಡ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಇದರ ಅನ್ವಯ ಸಿಸಿಬಿ ಪೊಲೀಸರು, ತನಿಖೆ ನಡೆಸಿತ್ತು.

    ಸಿಸಿಬಿ ತನಿಖೆಯಲ್ಲಿ ಅಕ್ರಮ ಹಣಕಾಸು ವಹಿವಾಟು ಬೆಳಕಿಗೆ ಬಂದಿತ್ತು. ವಿವಿಧ ಬ್ಯಾಂಕ್‌ಗಳಲ್ಲಿ ಹಲವು ಬ್ಯಾಂಕ್ ಖಾತೆ ತೆರೆದು ದೇಶ, ವಿದೇಶದಿಂದ ಹೂಡಿಕೆ ಹಣ ಜಮೆ ಮಾಡಿಸಿಕೊಂಡಿದ್ದರು. ಆನಂತರ ತಮ್ಮ ಅಸೋಸಿಯಟೆಡ್ ಗ್ರೂಪ್‌ಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಆದಾಯ ತೆರಿಗೆ ಇಲಾಖತೆಗೆ ತೆರಿಗೆ ಪಾವತಿ ಮಾಡಿರಲಿಲ್ಲ.

    ಇದರಿಂದಾಗಿ ಆರ್‌ಬಿಐ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿತ್ತು. ಈ ಬಗ್ಗೆ ಇಡಿ ಇಲಾಖೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಬಿಲ್​ ಕಟ್ಟಲು ಬಂದಿದ್ದ ವ್ಯಕ್ತಿಯಿಂದ 75 ಸಾವಿರ ರೂ. ಹಣವಿದ್ದ ಬ್ಯಾಗ್​ ಕಸಿದು ಕೋತಿ ಎಸ್ಕೇಪ್! ನಂತರ ನಡೆದಿದ್ದಿಷ್ಟು…

    ಹಾರ್ದಿಕ್ ಮುಂದೆ ಈಗ ಓಪನರ್ಸ್‌ ಆಯ್ಕೆ ಮಾಡುವ ಸವಾಲು; ಹೇಗಿರಲಿದೆ ಭಾರತ ತಂಡ? ಯಾರಿರಲಿದ್ದಾರೆ ಟಿ-20 ಟೀಮ್‌ನಲ್ಲಿ?

    ಅಶ್ಲೀಲ ಮೆಸೇಜ್​ ಆರೋಪ; ರಾಣಿ ವಿರುದ್ದ ಕೇಸ್​ ಹಾಕಲು ಡಿಂಗ್ರಿ ನಾಗರಾಜ್​ ತೀರ್ಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts