More

    ತೆಂಗಿನಲ್ಲಿ ಕಂಡುಬರುವ ಕೆಂಪು ಮೂತಿ ದುಂಬಿಯ ನಿರ್ವಹಣೆ ಬಗ್ಗೆ ಮಾಹಿತಿ ತಿಳಿಸಿ? ನೇರಳೆ ಬಗ್ಗೆಯೂ ಇದೆ ವಿವರ

    | ಸಂತೋಷ್ ಗೌರಿಬಿದನೂರು

    ಹೆಣ್ಣು ದುಂಬಿಗಳು ಕಾಂಡದ ಮೇಲಿನ ಹಾನಿಯಾಗಿರುವ ಸ್ಥಳದಲ್ಲಿ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳಿಂದ ಹೊರ ಬಂದ ಮರಿಹುಳುಗಳು ಕಾಂಡವನ್ನು ಕೊರೆದು, ಕಾಂಡದ ಒಳಭಾಗವನ್ನು ತಿನ್ನುತ್ತವೆ. ಅಂತಹ ಜಾಗದಲ್ಲಿ ದ್ರವ ಸೋರುತ್ತಿರುತ್ತದೆ. ಹೆಚ್ಚಿನ ಹಾನಿಯಾದಲ್ಲಿ ಮರ ಗಾಳಿಯ ರಭಸಕ್ಕೆ ಮುರಿಯುವ ಸಾಧ್ಯತೆ ಇರುತ್ತದೆ.

    ನಿರ್ವಹಣೆ: ಕಾಂಡದ ಭಾಗದಲ್ಲಿ ಯಾವುದೇ ತರಹದ ಹಾನಿಯಾಗದಂತೆ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಬೇಕು. ರಸ ಸೋರುತ್ತಿರುವ ಕಡೆ ಸ್ವಚ್ಛ ಮಾಡಿ ಸಣ್ಣ ರಂಧ್ರ ಕೊರೆದು ಅದಕ್ಕೆ ಫೆನ್ವಾಲೆರೇಟ್ ಮಣ್ಣಿನ (1:3) ಜತೆಗೆ ಸೇರಿಸುವುದು. ಗಾಯಗಳಲ್ಲಿ ಕೀಟವು ಮೊಟ್ಟೆಗಳನ್ನು ಇಡುವುದರಿಂದ ಕಾಂಡಕ್ಕೆ ಗಾಯವಾಗುವುದನ್ನು ತಪ್ಪಿಸಬೇಕು. ಎಕರೆಗೆ ಒಂದು ಆಕರ್ಷಕ ಬಲೆಯನ್ನು ಬಳಸಿ ದುಂಬಿಗಳನ್ನು ಅಕರ್ಷಿಸುವುದು (ಹುಳಿ ಬಂದ ಕಬ್ಬಿನರಸ + ಅಸೆಟಿಕ್ ಆಮ್ಲ + ತೆಂಗಿನ ಗರಿಗಳ ದಂಟು + ಈಸ್ಟ್) ಅಥವಾ 10 ತೆಂಗಿನ ಮರಗಳಿಗೆ ಒಂದರಂತೆ ಆರ್​ಪಿಡಬು್ಲ್ಯ ಆಕರ್ಷಕ ಬಲೆಯನ್ನು ಕಟ್ಟಿ, ಅದರಲ್ಲಿ ಬಿದ್ದಂತಹ ದುಂಬಿಗಳನ್ನು ಸಾಯಿಸುವುದು.

    | ಡಾ. ಶಿವಣ್ಣ ಬಿ ಕೀಟಶಾಸ್ರ ತಜ್ಞರು

    ನೇರಳೆ ಹಣ್ಣಿನ ಕೊಳೆ ರೋಗದ ನಿರ್ವಹಣೆ ಹೇಗೆ?

    | ಫವಾಜ್ ತುಮಕೂರು

    ಮಾಗಿದ ಹಣ್ಣುಗಳಲ್ಲಿ ಕಪ್ಪು ಮಚ್ಚೆ ಕಂಡು ಬಂದು, ಹಣ್ಣುಗಳು ಮೃದುವಾಗಿ ಕೊಳೆತು ಉದುರುವುದು. ಈ ರೊಗಕ್ಕೆ ತುತ್ತಾದ ಹಣ್ಣುಗಳಲ್ಲಿ ಸಣ್ಣ ಗಾತ್ರದ ನೀರಿನಲ್ಲಿ ನೆನೆಸಿದ ವೃತ್ತಾಕಾರದ ಕುಳಿಯುಳ್ಳ ಗಾಯಗಳು ಕಂಡುಬರುತ್ತವೆ. ಈ ರೀತಿಯ ಗಾಯಗಳು ವೃದ್ಧಿಯಾಗಿ ಕಾಯಿ ಕೊಳೆಯುತ್ತವೆ. ಇದರಿಂದ ಹಣ್ಣುಗಳ ಮಾರಾಟದ ಬೆಲೆ ಕಡಿಮೆಯಾಗುತ್ತದೆ.

    ನಿರ್ವಹಣೆ: ರೋಗಕ್ಕೆ ತುತ್ತಾದ ಹಣ್ಣುಗಳನ್ನು ಕಿತ್ತು ನಾಶಪಡಿಸುವುದು. ಕೊಯ್ಲು ಮಾಡುವ 20 ದಿನಗಳ ಮುಂಚೆ ಪ್ರತಿ ಲೀಟರ್ ನೀರಿಗೆ 2.0 ಗ್ರಾಂ ಮ್ಯಾಂಕೊಜೆಬ್ ಅಥವಾ 1.0 ಗ್ರಾಂ ಕಾರ್ಬನ್​ಡೈಜಿಮ್ ಸೇರಿಸಿ ಆ ದ್ರಾವಣವನ್ನು ಹಣ್ಣುಗಳಿರುವ ರೆಂಬೆಗಳಿಗೆ ಚೆನ್ನಾಗಿ ಸಿಂಪಡಿಸಬೇಕು.

    | ಡಾ. ಪಲ್ಲವಿ ಕೆ. ಸಸ್ಯ ಸಂರಕ್ಷಣಾ ತಜ್ಞರು

    ಮಹಾಗನಿ ಮರಗಳನ್ನು ಕಟಾವು ಮಾಡಲು ಎಷ್ಟು ಸಮಯ ಬೇಕು?

    | ದಿವಾಕರ್ ಮಂಡ್ಯ

    ಈ ಮರವನ್ನು ಕಟಾವು ಮಾಡಲು 20-30 ವರ್ಷ ಬೇಕಾಗುತ್ತದೆ. ಅದಾಗ್ಯೂ ನಿಖರವಾದ ಸಮಯವು ಮಹಾಗನಿಯ ನಿರ್ಧಿಷ್ಟ ಜಾತಿಗಳು, ಬೆಳೆಯುತ್ತಿರುವ ಪರಿಸ್ಥಿತಿ ಮತ್ತು ಮರದ ಆರೈಕೆ/ ನಿರ್ವಹಣೆ ಕ್ರಮಗಳು ಬಹಳ ಮುಖ್ಯ. ಸ್ಥಳ ಮತ್ತು ಹವಾಮಾನದ ಪರಿಸ್ಥಿತಿಗಳ ಆಧಾರದ ಮೇಲೆ ಮರದ ಬೆಳವಣಿಗೆಯ ಸಮಯವು ಬದಲಾಗುತ್ತದೆ.

    | ಡಾ. ರಘು ಬಿ ಅರಣ್ಯಶಾಸ್ತ್ರ

    ರೈತರ ಸಮಸ್ಯೆಗಳಿಗೆ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು. ಇಲ್ಲಿನ ತಜ್ಞರು ಪ್ರತಿ ಸೋಮವಾರ ಉತ್ತರಿಸಲಿದ್ದಾರೆ. ನಿಮ್ಮ ಪ್ರಶ್ನೆಗಳನ್ನು 18004250571/ 080-23627889 ಸಂಖ್ಯೆಗೆ ಕರೆ ಮಾಡಿ ತಿಳಿಸಿ ಅಥವಾ

    94824 77812 ಸಂಖ್ಯೆಗೆ ವಾಟ್ಸ್​ಆಪ್ ಮಾಡಿ

    ಡೆಬ್ಯೂ ನಿರ್ದೇಶಕರ ಜತೆ ಕೆಲಸ ಮಾಡೋದಿಲ್ಲ! ನಟ ವಿಜಯ ದೇವರಕೊಂಡ ಹೇಳಿಕೆಯ ಹಿಂದಿದೆ ಈ ಕಾರಣ

    https://www.vijayavani.net/ravishastri-speaks-about-hardik-captaincy

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts