More

    ಕೈಗಾರಿಕೆಗಳ ಪುನರಾರಂಭಕ್ಕೆ ಸಕಾಲ

    ಮಂಗಳೂರು: ಕಂಟೈನ್ಮೆಂಟ್ ವಲಯ ಬಿಟ್ಟು ಉಳಿದ ಕಡೆ ಇರುವ ಕೈಗಾರಿಕೆಗಳು ಮೇ 4ರಿಂದ ಕಾರ್ಯಾಚರಿಸಲು ಅವಕಾಶ ನೀಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಗೊಂಡಿರುವ ನಿರ್ಧಾರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೈಗಾರಿಕೋದ್ಯಮಿಗಳು ಸ್ವಾಗತಿಸಿದ್ದಾರೆ.

    ಒಂದೂವರೆ ತಿಂಗಳಿನಿಂದ ಯಂತ್ರಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇನ್ನಷ್ಟು ದಿನ ಹಾಗೆಯೇ ಬಿಟ್ಟರೆ ತುಕ್ಕು ಹಿಡಿಯುವ ಸಾಧ್ಯತೆ ಇದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಶೇ.50ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಕೈಗಾರಿಕೆಗಳು ಆರಂಭ ಮಾಡುವುದು ಸಮಯೋಚಿತ. ವ್ಯವಸ್ಥೆ ಸಮರ್ಪಕವಾಗಿ ಸರಿಯಾಗುವ ವೇಳೆಗೆ ಉತ್ಪಾದನಾ ವಲಯ ಸಜ್ಜಾಗಲು ಈಗಲೇ ಕಾರ್ಯಾರಂಭ ಮಾಡುವುದು ಉತ್ತಮ ನಿರ್ಧಾರ.

    ಕಾರ್ಮಿಕರ ಸಂಚಾರಕ್ಕೆ ಸಾರಿಗೆ ವ್ಯವಸ್ಥೆ ಆರಂಭವಾಗದೆ ಇರುವುದು ದೊಡ್ಡ ಪ್ರಮಾಣದಲ್ಲಿ ತೊಂದರೆಯಾಗಲಾರದು. ಉತ್ತರ ಭಾರತದ ಕಾರ್ಮಿಕರು ಕೈಗಾರಿಕೆಗಳ ಆರಂಭಕ್ಕೆ ಕಾಯುತ್ತಿದ್ದಾರೆ. ಕೈಗಾರಿಕೆಗಳ ಹೆಚ್ಚಿನ ಕಾರ್ಮಿಕರು ದ್ವಿಚಕ್ರ ವಾಹನ ಹೊಂದಿದ್ದಾರೆ. ಗೇರುಬೀಜ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರನ್ನು ಕರೆ ತರಲು ವಾಹನದ ವ್ಯವಸ್ಥೆ ಇದೆ. ಸಂಚಾರ ವ್ಯವಸ್ಥೆ ಆರಂಭವಾಗದಿದ್ದರೆ ಕೈಗಾರಿಕೆಗಳಿಗೆ ಸಮಸ್ಯೆ ಆಗುವುದಿಲ್ಲ ಎಂದು ಕೆನರಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಗೌರವ್ ಹೆಗ್ಡೆ ತಿಳಿಸಿದ್ದಾರೆ.
    ಸ್ಥಗಿತಗೊಂಡ ಕೈಗಾರಿಕೆಗಳು ಮತ್ತೆ ಹಳಿಗೆ ಮರಳಬೇಕಾದರೆ ಕನಿಷ್ಠ ಒಂದು ತಿಂಗಳು ಬೇಕು. ಕಚ್ಚಾ ವಸ್ತುಗಳು ಪೂರೈಕೆಯಾಗಬೇಕು. ಉತ್ಪಾದನಾ ವಸ್ತುಗಳು ಪೂರೈಕೆಯಾಗಬೇಕಾದರೆ ಗ್ರಾಹಕರಿಂದ ಬೇಡಿಕೆ ಬರಬೇಕು. ಕೈಗಾರಿಕೆಗಳು ಈಗಲೇ ಆರಂಭಗೊಂಡರೆ ಲಾಕ್‌ಡೌನ್‌ನಿಂದ ಎಲ್ಲ ಕ್ಷೇತ್ರಗಳಿಗೆ ವಿನಾಯಿತಿ ಸಿಗುವ ವೇಳೆಗೆ ಎದ್ದು ನಿಲ್ಲುವ ಹಂತಕ್ಕೆ ಬರಲು ಸಾಧ್ಯವಾಗಲಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

    ಕೈಗಾರಿಕೆಗಳನ್ನು ಪುನರಾರಂಭಿಸಲು ಈಗ ಸಕಾಲ. ಕೈಗಾರಿಕಾ ಕ್ಷೇತ್ರದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ ಹೊಸದೇನಲ್ಲ. ಕಾರ್ಮಿಕರ ಸಂಚಾರಕ್ಕೆ ಕೈಗಾರಿಕೋದ್ಯಮಿಗಳು ವ್ಯವಸ್ಥೆ ಮಾಡುತ್ತಾರೆ. ಸ್ಥಗಿತಗೊಂಡ ಪೂರೈಕೆ ಪ್ರಕ್ರಿಯೆ ಮತ್ತೆ ಅರಂಭವಾಗಬೇಕು. ಗ್ರಾಹಕರಿಂದ ಬೇಡಿಕೆ ಬರಲು ಆರಂಭವಾದರೆ ಮತ್ತೆ ಒಂದಷ್ಟು ಸಮಯದಲ್ಲಿ ಸಹಜ ಸ್ಥಿತಿಗೆ ಮರಳುತ್ತದೆ. ಸರ್ಕಾರದ ನಿರ್ಧಾರ ಸ್ವಾಗತಾರ್ಹ.
    – ಐಸಾಕ್ ವಾಜ್, ಅಧ್ಯಕ್ಷರು, ಕೆನರಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts