More

    ಇಂದ್ರಧನುಷ್ ಲಸಿಕಾ ಅಭಿಯಾನ, ಜಾಗೃತಿ ಜಾಥಾ

    ಸಿಂಧನೂರು: ಇಂದ್ರಧನುಷ್ ಲಸಿಕಾ ಅಭಿಯಾನ ಅ.9 ರಿಂದ 14 ವರೆಗೆ ನಡೆಯುವ ಹಿನ್ನೆಲೆಯಲ್ಲಿ ಗರ್ಭಿಣಿಯರಿಗೆ ಹಾಗೂ 0 ರಿಂದ 5 ವರ್ಷ ಮಕ್ಕಳಿಗೆ ಲಸಿಕೆ ಹಾಕಿಸುವ ಕುರಿತು ಶಾಲಾ ಮಕ್ಕಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಯಿತು.

    ಇದನ್ನೂ ಓದಿ: ಸೋಮವಾರದಿಂದ ಇಂದ್ರಧನುಷ್‌ ಲಸಿಕಾ ಅಭಿಯಾನ

    ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ರಂಗನಾಥ ಮಾತನಾಡಿ, ಮಿಷನ್ ಇಂದ್ರಧನುಷ್ 5.0 ಲಸಿಕೆಯು ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ತರ ಕಾರ್ಯನಿರ್ವಹಿಸುತ್ತದೆ.

    ಆದ್ದರಿಂದ ಐದು ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರು ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು. ಬಡಿಬೇಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶರಣಪ್ಪ, ಎಸ್.ಗೌಡರ್, ಶಿಕ್ಷಕರಾದ ಪುಟ್ಟಕ್ಕ, ಗಿರಿಜಾ, ನೀಲಮ್ಮ ಹಿರೇಮಠ, ವಿಜಯಲಕ್ಷ್ಮೀ, ನೀಲಮ್ಮ ಅಕ್ಕಿ, ರೇಖಾವತಿ, ಶಹಾಬೀ, ಸಿದ್ದಲಿಂಗಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts