More

    ಸ್ವಚ್ಛ್ ಸರ್ವೇಕ್ಷಣ್​ 2022: 6ನೇ ಸಲ ಸ್ವಚ್ಛ ನಗರವಾಗಿ ಹೊಮ್ಮಿದ ಇಂದೋರ್; ಶಿವಮೊಗ್ಗ-ಮೈಸೂರಿಗೇನು ಸ್ಥಾನ?

    ನವದೆಹಲಿ: ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಸ್ವಚ್ಛ ಭಾರತ ಅಭಿಯಾನ ಇದೀಗ 8ನೇ ವರ್ಷದ ಸಂಭ್ರಮದಲ್ಲಿದ್ದು, ಈ ವರ್ಷದ ಫಲಿತಾಂಶ ಪ್ರಕಟಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯಲ್ಲಿ ಆಯೋಜಿಸಿದ್ದ ಆಜಾದಿ@ 75 ಸ್ವಚ್ಛ್ ಸರ್ವೇಕ್ಷಣ್​ 2022 ಸಮಾರಂಭದಲ್ಲಿ ಅತಿಸ್ವಚ್ಛ ರಾಜ್ಯ ಹಾಗೂ ನಗರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

    ಮಧ್ಯಪ್ರದೇಶದ ಇಂದೋರ್ ಸತತ ಆರನೇ ಸಲ ದೇಶದ ಅತಿಸ್ವಚ್ಛ ನಗರವಾಗಿ ಹಾಗೂ ದೇಶದ ಪ್ರಥಮ ಸೆವೆನ್ ಸ್ಟಾರ್ ಗಾರ್ಬೇಜ್ ಫ್ರೀ ನಗರವಾಗಿಯೂ ಹೊರಹೊಮ್ಮಿದೆ. ಒಂದು ಲಕ್ಷಕ್ಕಿಂತಲೂ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳ ಶ್ರೇಣಿಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ಇನ್ನು ಸೂರತ್​ ಸತತ ಎರಡನೇ ಸಲ ಎರಡನೇ ಅತಿಸ್ವಚ್ಛ ನಗರವಾಗಿ ಹೊರಹೊಮ್ಮಿದೆ. ನವಮುಂಬೈ ಮೂರನೇ ಅತಿಸ್ವಚ್ಛ ನಗರ ಸ್ಥಾನವನ್ನು ಪಡೆದಿದೆ.

    ಇನ್ನು ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರಗಳ ವರ್ಗದಲ್ಲಿ ಮಹಾರಾಷ್ಟ್ರದ ಪಂಚಗನಿ ಮತತು ಕರದ್ ಕ್ರಮವಾಗಿ ಮೊದಲ ಮತ್ತು ಮೂರನೇ ಸ್ಥಾನ ಪಡೆದಿದ್ದರೆ, ಚತ್ತೀಸ್​ಘಡದ ಪಠಾನ್​ ಎರಡನೇ ಸ್ಥಾನವನ್ನು ಪಡೆದಿದೆ. ತಿರುಪತಿಯು ಸಫಾಯಿ ಮಿತ್ರ ಸುರಕ್ಷ ವಿಭಾಗದಲ್ಲಿ ಬೆಸ್ಟ್​ ಸಿಟಿ ಪ್ರಶಸ್ತಿ ಪಡೆದಿದೆ. ಉತ್ತರಾಖಂಡದ ಹರಿದ್ವಾರ ಬೆಸ್ಟ್​ ಗಂಗಾ ಟೌನ್​ ಪ್ರಶಸ್ತಿ ಪಡೆದಿದೆ. ಕರ್ನಾಟಕದ ಶಿವಮೊಗ್ಗ ಫಾಸ್ಟ್ ಮೂವರ್ ಸಿಟಿ ಪ್ರಶಸ್ತಿ ಪಡೆದಿದೆ.

    ಇಂದೋರ್ ಸೆವೆನ್ ಸ್ಟಾರ್​ ಗಾರ್ಬೇಜ್ ಫ್ರೀ ಸಿಟಿಯಾಗಿ ಹೊರಹೊಮ್ಮಿದ್ದರೆ, ಸೂರತ್​, ಭೋಪಾಲ್, ಮೈಸೂರು, ನವ ಮುಂಬೈ, ವಿಶಾಖಪಟ್ಟಣ ಮತ್ತು ತಿರುಪತಿ ಫೈವ್ ಸ್ಟಾರ್​ ಗಾರ್ಬೇಜ್​ ಫ್ರೀ ನಗರಗಳಾಗಿ ಹೊರಹೊಮ್ಮಿವೆ.

    ನೂರಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳಿರುವ ರಾಜ್ಯಗಳ ಪೈಕಿ ಮಧ್ಯಪ್ರದೇಶ ಅತ್ಯಂತ ಸ್ವಚ್ಛ ರಾಜ್ಯವಾಗಿ ಹೊರಹೊಮ್ಮಿದೆ. ಈ ಮೂಲಕ ಕಳೆದ ಮೂರು ವರ್ಷಗಳಿಂದ ಅತ್ಯಂತ ಸ್ವಚ್ಛ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದ ಚತ್ತೀಸ್​ಘಡವನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ. ಮೂರನೇ ಅತಿ ಸ್ವಚ್ಛ ರಾಜ್ಯವಾಗಿ ಮಹಾರಾಷ್ಟ್ರ ಹೊರಹೊಮ್ಮಿದೆ.

    ಮತ್ತೊಂದೆಡೆ ನೂರಕ್ಕೂ ಕಡಿಮೆ ನಗರ ಸ್ಥಳೀಯ ಸಂಸ್ಥೆಗಳಿರುವ ರಾಜ್ಯಗಳ ಪೈಕಿ ತ್ರಿಪುರ ಅತ್ಯಂತ ಸ್ವಚ್ಛ ರಾಜ್ಯ ಸ್ಥಾನವನ್ನು ಪಡೆದಿದೆ. ಈ ಮೂಲಕ ಕಳೆದೆರಡು ವರ್ಷಗಳಿಂದ ಪ್ರಥಮ ಸ್ಥಾನ ಪಡೆಯುತ್ತಿದ್ದ ಜಾರ್ಖಂಡ್​ ಎರಡನೇ ಸ್ಥಾನಕ್ಕೆ ಕುಸಿದಿದೆ. ಈ ವಿಭಾಗದಲ್ಲಿ ಮೂರನೇ ಅತಿ ಸ್ವಚ್ಛ ರಾಜ್ಯವಾಗಿ ಉತ್ತರಾಖಂಡ ಹೊರಹೊಮ್ಮಿದೆ.

    ‘ಇನ್ನೇನು ಪರಿಚಯ ರೊಮ್ಯಾನ್ಸ್​ಗೆ ತಿರುಗಬೇಕು ಎನ್ನುವಷ್ಟರಲ್ಲಿ…’: ಹೀಗಂದಿದ್ದೇಕೆ ಅನೂಪ್​ ಭಂಡಾರಿ?

    ಡಿ.ಕೆ.ಶಿವಕುಮಾರ್ ಡ್ಯಾನ್ಸ್ ಚಿತ್ರೀಕರಣ​ಕ್ಕೆ ಅಡ್ಡಿ, ಡ್ರೋಣ್ ಕ್ಯಾಮೆರಾ ಕಿತ್ತೊಯ್ದ ರಾಹುಲ್ ಭದ್ರತಾ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts