More

  ಇಂದಿರಾ ಎಜುಕೇಶನ್ ಟ್ರಸ್ಟ್ ಪದವಿ ಪ್ರದಾನ

  ಮಂಗಳೂರು: ಫಳ್ನೀರ್‌ನ ಇಂದಿರಾ ಎಜುಕೇಶನ್ ಟ್ರಸ್ಟ್ ಅಧೀನದ ಕಾಲೇಜುಗಳ ಪದವಿ ಪ್ರದಾನ ಸಮಾರಂಭ ನಗರದ ಮಿಲಾಗ್ರಿಸ್ ಜುಬಿಲಿ ಹಾಲ್‌ನಲ್ಲಿ ನಡೆಯಿತು.

  ಮುಖ್ಯ ಅತಿಥಿಗಳಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಎನ್. ರಾಮಕೃಷ್ಣ ರೆಡ್ಡಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಯ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಯು.ಟಿ. ಇಫ್ತಿಕರ್ ಅಲಿ ಮುಖ್ಯ ಅತಿಥಿಗಳಾಗಿದ್ದರು.

  ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಗ್ರೀಶಾ ಜೋಸ್, ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಜಿಯೋವಿಯಾ ಜಾರ್ಜ್, ಅಲೈಡ್ ಹೆಲ್ತ್ ಸೈನ್ಸ್ ವಿಭಾಗದ ಪ್ರಾಂಶುಪಾಲೆ ಕೃತಿಕಾ, ಅರೆವೈದ್ಯಕೀಯ ವಿಜ್ಞಾನಗಳ ಉಸ್ತುವಾರಿ ಪ್ರಾಂಶುಪಾಲೆ ರಮೀಜಾ ಉಪಸ್ಥಿತರಿದ್ದರು.

  ಎಂಎಸ್ಸಿ ನರ್ಸಿಂಗ್, ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಅರೆವೈದ್ಯಕೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಪ್ರಮಾಣ ಪತ್ರ ನೀಡಲಾಯಿತು. ಇಂದಿರಾ ನಸಿರ್ಂಗ್ ಕಾಲೇಜಿನ ಉಪನ್ಯಾಸಕಿ ಇವಾನ್ಸಾರಾಲಿನ್ ವಾರ್ಜ್ರಿ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಸಿ.ಜಿ.ಆಗಸ್ಟಿನ್ ವಂದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts