More

    ಗೋವಿನ ಪೋಷಣೆ ರಾಷ್ಟ್ರೀಯ ಕರ್ತವ್ಯ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ

    ಉಡುಪಿ: ಗೋವು ಹುಟ್ಟಿನಿಂದ ಕೊನೆಯವರೆಗೂ ಪರಹಿತಕ್ಕಾಗಿ ಜೀವಿಸುತ್ತದೆ. ಆದ್ದರಿಂದ ರಾಷ್ಟ್ರದ ಸುಭಿಕ್ಷೆ ಸಮೃದ್ಧಿ ಬಯಸುವ ಸರ್ಕಾರ ಗೋವಿನ ಪೋಷಣೆಯನ್ನು ರಾಷ್ಟ್ರೀಯ ಕರ್ತವ್ಯವಾಗಿ ಪರಿಗಣಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

    ಶನಿವಾರ ನೀಲಾವರ ಗೋಶಾಲೆಯ ಶಾಖಾಮಠದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಅವರು, ದೇಶದಲ್ಲಿ ಅನೇಕ ಕಷ್ಟ ಮತ್ತು ಸವಾಲುಗಳು ಎದುರಾದರೂ ಗೋವಿನ ರಕ್ಷಣೆಯ ಕಾರ್ಯದಿಂದ ಹಿಂದೆ ಸರಿಯಬಾರದು. ಒಂದೊಮ್ಮೆ ಈ ಬಗ್ಗೆ ನಿರ್ಲಕ್ಷೃ ವಹಿಸಿದರೆ ಅದರಿಂದ ದೇಶಕ್ಕೆ ವಿಪತ್ತು ನಿಶ್ಚಿತ ಎಂದರು. ಗೋಶಾಲೆಯ ವ್ಯವಸ್ಥಾಪಕ ನರಸಿಂಹ ಭಟ್, ಆಪ್ತ ಕಾರ್ಯದರ್ಶಿ ಕೃಷ್ಣ ಭಟ್, ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts