More

    ಭಾರತದ ರಕ್ಷಣಾ ಸಾಮಗ್ರಿಗಳ ರಫ್ತು ಪ್ರಮಾಣ ಹೆಚ್ಚಳ; ಕಳೆದ 4 ವರ್ಷದಲ್ಲಿ ಎಷ್ಟು ಪಟ್ಟು ಹೆಚ್ಚಾಗಿದೆ ಗೊತ್ತಾ…?

    ನವದೆಹಲಿ: ಭಾರತ ವಿಶ್ವದ ಅತಿದೊಡ್ಡ ರಕ್ಷಣಾ ಸಾಮಗ್ರಿಗಳ ಆಮದು ರಾಷ್ಟ್ರ ಎಂದೇ ಹೇಳಲಾಗುತ್ತದೆ. ಆದರೆ, ರಕ್ಷಣಾ ಸಾಮಗ್ರಿಗಳ ರಫ್ತು ವಲಯದಲ್ಲೂ ಈಗ ನಿಧಾನವಾಗಿ ತನ್ನ ಅಸ್ತಿತ್ವ ಕಂಡುಕೊಳ್ಳಲಾರಂಭಿಸಿದೆ.

    ರಕ್ಷಣಾ ಸಚಿವಾಲಯದ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ವಿಭಾಗದ ಪ್ರಕಾರ, ಕಳೆದ 4 ವರ್ಷಗಳಲ್ಲಿ ಭಾರತದ ರಕ್ಷಣಾ ಸಾಮಗ್ರಿಗಳ ರಫ್ತು 5 ಪಟ್ಟು ಹೆಚ್ಚಳವಾಗಿದೆ. ಅಂದರೆ 2016-17ನೇ ಸಾಲಿನಲ್ಲಿದ್ದ 1,521.86 ಕೋಟಿ ರೂ. ರಫ್ತು 2019-20ನೇ ಸಾಲಿಗೆ 8,620.59 ಕೋಟಿ ರೂ.ಗೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ರಫ್ತು ಪ್ರಮಾಣವನ್ನು 15 ಸಾವಿರ ಕೋಟಿ ರೂ.ಗೆ ಹೆಚ್ಚಿಸುವ ಗುರಿ ನಿಗದಿಪಡಿಸಿಕೊಳ್ಳಲಾಗಿದೆ.

    ಮೇಕ್​ ಇನ್​ ಇಂಡಿಯಾ ಕಾರಣ: ರಕ್ಷಣಾ ಸಾಮಗ್ರಿಗಳ ಆಮದಿನಲ್ಲಿ ಮುಂಚೂಣಿಯಲ್ಲಿದ್ದ ಭಾರತ ಇದೀಗ ರಫ್ತು ವಲಯದಲ್ಲಿ ಉನ್ನತ ಸಾಧನೆ ಮಾಡುವತ್ತ ಹೆಜ್ಜೆ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಮೇಕ್​ ಇನ್​ ಇಂಡಿಯಾ ಅಭಿಯಾನ ಕಾರಣ ಎಂದು ಹೇಳಲಾಗುತ್ತಿದೆ.

    ಖಾಸಗಿ ಕಂಪನಿಗಳಿಗೆ ಹೆಚ್ಚಿನ ಲಾಭ: ದೇಶದ ಖಾಸಗಿ ಕಂಪನಿಗಳು ರಕ್ಷಣಾ ಸಾಮಗ್ರಿಗಳ ರಫ್ತಿನಿಂದ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿವೆ. 2016-17ನೇ ಸಾಲಿನಲ್ಲಿ ಖಾಸಗಿ ಕಂಪನಿಗಳು 194.35 ಕೋಟಿ ರೂ. ಮೌಲ್ಯದ ಉಪಕರಣಗಳನ್ನು ರಫ್ತು ಮಾಡಿದ್ದವು. 2019-20ನೇ ಸಾಲಿನಲ್ಲಿ ಈ ಪ್ರಮಾಣ 8,013.65 ಕೋಟಿ ರೂ.ಗೆ ಹೆಚ್ಚಳವಾಗಿದೆ. ಇನ್ನೊಂದೆಡೆ 2016-17ನೇ ಸಾಲಿನಲ್ಲಿ 1,327.51 ಕೋಟಿ ರೂ. ಇದ್ದ ರಕ್ಷಣಾ ವಲಯದ ಸಾರ್ವಜನಿಕ ಉದ್ದಿಮೆಗಳು ಮತ್ತು ಆರ್ಡನನ್ಸ್​ ಫ್ಯಾಕ್ಟರಿಗಳ ರಫ್ತು ಪ್ರಮಾಣ 2019-20ನೇ ಸಾಲಿನಲ್ಲಿ 403.94 ಕೋಟಿ ರೂ.ಗೆ ಕುಸಿದಿರುವುದು ಕಳವಳಕಾರಿಯಾಗಿದೆ.

    ಲಾಕ್‌ಡೌನ್‌ ನಿಯಮ ಪಾಲನೆ- ತಂದೆಯ ಅಂತಿಮ ಕ್ರಿಯೆಗೆ ಯೋಗಿ ಆದಿತ್ಯನಾಥ ಗೈರು: ಕರೊನಾ ಸಭೆ ಮುಗಿಸಿದ ಮೇಲೆ ಎದ್ದುನಿಂತು ತಂದೆಗೆ ಗೌರವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts