More

    ಗುರುರಾಜ್ ಇಂಡಿಯಾಸ್ ಸೈಬರ್ ಕಾಪ್ ಆಫ್ ದಿ ಇಯರ್

    ಶಿವಮೊಗ್ಗ: ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ನೀಡುವ ಇಂಡಿಯಾಸ್ ಸೈಬರ್ ಕಾಪ್ ಆಫ್ ದಿ ಇಯರ್ ಪ್ರಶಸ್ತಿಗೆ ಕಡೂರು ಪೊಲೀಸ್ ತರಬೇತಿ ಶಾಲೆಯ ಕೆ.ಟಿ.ಗುರುರಾಜ್ ಭಾಜನರಾಗಿದ್ದು, ಗುರುವಾರ ಹರಿಯಾಣದ ಗುರುಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
    ಶಿವಮೊಗ್ಗದ ಸಿಇಎನ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಕೆ.ಟಿ.ಗುರುರಾಜ್ ಕೈಗೊಂಡಿದ್ದ ತನಿಖಾ ಪ್ರಕರಣ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕ್ಷಕನೊಬ್ಬ ಮಕ್ಕಳ ಅಶ್ಲೀಲ ಚಿತ್ರಗಳನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಕೇಸ್ ಜಾಡು ಹಿಡಿದು ತನಿಖೆ ಕೈಗೊಂಡಿದ್ದ ಗುರುರಾಜ್, ಆರೋಪಿಯನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರಿಂದ ಶಿಕ್ಷಕನಿಗೆ 20 ವರ್ಷ ಸಜೆ ಆಗಿತ್ತು. ಈ ವೇಳೆ ಅವರು ಆರು ಅಪ್ರಾಪ್ತ ಮಕ್ಕಳನ್ನು ರಕ್ಷಿಸಿದ್ದರು.
    ಈ ಪ್ರಕರಣದ ತನಿಖೆ ಸೇರಿ ಮೂರು ಪ್ರಕರಣಗಳು ಈ ವರ್ಷದ ಇಂಡಿಯಾಸ್ ಸೈಬರ್ ಕಾಪ್ ಇಯರ್ ಪ್ರಶಸ್ತಿಯ ಫೈನಲ್‌ಗೆ ಆಯ್ಕೆಯಾಗಿದ್ದವು. ಬೆಂಗಳೂರಿನ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸುಪ್ರೀಂಕೋರ್ಟ್ ವಕೀಲ ವಕುಲ್ ಶರ್ಮಾ, ಎನ್‌ಐಪಿಆರ್‌ಟಿಯ ಟೆಲಿಕಾಂ ಸೆಕ್ಯುರಿಟಿ ವಿಭಾಗದ ಡೆಪ್ಯುಟಿ ಡೈರಕ್ಟರ್ ಜನರಲ್ ಮತ್ತು ಗೃಹ ಸಚಿವಾಲಯದ ವಿಧಿವಿಜ್ಞಾನ ನಿರ್ದೇಶನಾಲಯದ ನಿವೃತ್ತ ವಿಜ್ಞಾನಿ ಕೃಷ್ಣಶಾಸ್ತ್ರಿ ಪೆಂಡಾಲ್ಯ ಅವರನ್ನೊಳಗೊಂಡ ತೀರ್ಪುಗಾರರ ತಂಡ ಅಂತಿಮವಾಗಿ ಮೂವರ ಪೈಕಿ ಕೆ.ಟಿ.ಗುರುರಾಜ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts