More

    ಇದು ಭಾರತದ 1328ನೇ ಚಿಟ್ಟೆ ಪ್ರಭೇದ, ಸಿಕ್ಕಿದ್ದೆಲ್ಲಿ ಗೊತ್ತೇ?!

    ‘ಬಿಗ್ ಬಟರ್​ಫ್ಲೈ ಮಂತ್​​..’
    – ಹೀಗೊಂದು ಚಿಟ್ಟೆ ಮಾಸವನ್ನು ಸೆ. 5ರಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲೇ ಭಾರತದ 1,328ನೇ ಚಿಟ್ಟೆಯ ಪ್ರಭೇದ ಪತ್ತೆಯಾಗಿದೆ. ಇದರ ವೈಜ್ಞಾನಿಕ ಹೆಸರು ಸ್ಪಿಯಾಲಿಯಾ ಜೀಬ್ರಾ. ಬರೀ ಎರಡೂವರೆ ಸೆಂಟಿಮೀಟರ್ ಅಗಲ ಇರುವ ಈ ಚಿಟ್ಟೆ ಭಾರೀ ವೇಗದಲ್ಲಿ ಹಾರಬಲ್ಲದು ಎನ್ನಲಾಗಿದೆ.

    ಚಿಟ್ಟೆತಜ್ಞ ಮುಖೇಶ್ ಪನ್ವರ್ ಇದನ್ನು ಪತ್ತೆ ಹಚ್ಚಿದ್ದಾರೆ. ರಾಜಸ್ಥಾನದ ಡುಂಗರ್​ಪುರ್ ಜಿಲ್ಲೆಯ ಸಾಗ್ವರ ನಿವಾಸಿ ಆಗಿರುವ ಇವರು, 15 ವರ್ಷಗಳಿಂದ ಚಿಟ್ಟೆಗಳ ಕುರಿತು ಅಧ್ಯಯನ ನಡೆಸುತ್ತಿರುವ ವಗಡ್​ ನೇಚರ್ ಕ್ಲಬ್​ನ ಸದಸ್ಯ.

    ಇವರು 2014ರ ನ. 8ರಂದು ಸಾಗ್ವರದ ಧನ್​ರಾಜ್​ ಫಾರ್ಮ್​ ಹೌಸ್​ನಲ್ಲಿ ಈ ಚಿಟ್ಟೆಯನ್ನು ಕಂಡಿದ್ದರು. ಇದರ ಫೋಟೋ ತೆಗೆದುಕೊಂಡಿದ್ದ ಮುಖೇಶ್​ ಉತ್ತರಾಖಂಡದ ಭಿಮ್ಟಲ್​ನ ಬಟರ್​ ಫ್ಲೈ ರಿಸರ್ಚ್​ ಇನ್​​ಸ್ಟಿಟ್ಯೂಟ್​ಗೆ ಕಳುಹಿಸಿದ್ದರು. ಆರು ವರ್ಷಗಳ ಅಧ್ಯಯನದ ಬಳಿಕ ಈ ಸಂಸ್ಥೆಯ ನಿರ್ದೇಶಕ, ಈ ಚಿಟ್ಟೆಯನ್ನು ಭಾರತದ 1,328ನೇ ಪ್ರಭೇದ ಎಂಬುದಾಗಿ ಘೋಷಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts