More

    ಭಾರತದಲ್ಲಿ ಅಕ್ಕಿ ರಫ್ತು ಬ್ಯಾನ್; ಅಮೆರಿಕದ ಅಂಗಡಿಗಳಲ್ಲಿ ಮುಗಿಬಿದ್ದ ಅನಿವಾಸಿ ಭಾರತೀಯರು!

    ನವದೆಹಲಿ: ಭಾರತದಿಂದ ಇನ್ನು ಬಾಸ್ಮತಿ ಅಕ್ಕಿ ಬಿಟ್ಟು ಇನ್ಯಾವುದೇ ಅಕ್ಕಿಯನ್ನು ರಫ್ತು ಮಾಡಬಾರದು ಎನ್ನುವ ನಿಯಮ ಬಂದಿದೆ. ಈ ಕಾರಣದಿಂದಾಗಿ ಬರಬಹುದಾಗಿದ್ದ ಬಹಳಷ್ಟು ಆದಾಯ ನಿಲ್ಲಲಿದೆ.

    ಆದರೆ ಹೊರ ದೇಶಗಳಲ್ಲಿ, ವಿಶೇಷವಾಗಿ ಅಮೆರಿಕದಲ್ಲಿ ಇದರಿಂದಾಗಿ ಅನ್ನ ತಿನ್ನುವವರಿಗೆ ಆಘಾತ ನೀಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ದೇಸಿ ಜನರು, ಅಂದರೆ ಭಾರತೀಯರು, ಪಾಕಿಸ್ತಾನಿಯರು, ಬಾಂಗ್ಲಾದೇಶಿಗರು, ಶ್ರೀಲಂಕಾದವರು ಸೇರಿದಂತೆ ಅಕ್ಕಿ ಸೇವಿಸುವ ದೇಶಗಳ ಜನರಲ್ಲಿ ಹಾಹಾಕಾರ ಉಂಟಾಗಿದೆ. ಪರಿಣಾಮ? ಅಮೆರಿಕದ ಸುಪರ್​ಮಾರ್ಕೆಟ್​ಗಳಲ್ಲಿ ಅಕ್ಕಿ ಖರೀದಿಗಾಗಿ ಕಿಕ್ಕಿರಿದು ತುಂಬಿರುವ ಜನರು!

    ಇದನ್ನೂ ಓದಿ: ಭತ್ತದ ಇಳುವರಿ ಇಳಿಕೆ: ಒಂದು ಕೋಟಿ ಟನ್ ಅಕ್ಕಿ ಕೊರತೆ? ನುಚ್ಚಕ್ಕಿ ರಫ್ತು ಬ್ಯಾನ್

    ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹಲವಾರು ವೀಡಿಯೊಗಳಲ್ಲಿ ಅಕ್ಕಿಯ ಬ್ಯಾಗ್​ಗಳನ್ನು ಖರೀದಿಸಲು ಭಾರತೀಯರು ಕಿರಾಣಿ ಅಂಗಡಿಗಳ ಹೊರಗೆ ಸರತಿ ಸಾಲಿನಲ್ಲಿ ನಿಂತಿರುವುದನ್ನು ತೋರಿಸುತ್ತಿವೆ.

    ವೈರಲ್ ಆಗಿರುವ ವೀಡಿಯೊಗಳಲ್ಲಿ ಒಂದು ದೇಸಿ ಜನರು ಕಪಾಟುಗಳನ್ನು ಏರುತ್ತಾ ಭಾರವಾದ ಅಕ್ಕಿ ಚೀಲಗಳನ್ನು ಎಳೆಯುವುದನ್ನು ಕಾಣಬಹುದಾಗಿದೆ. ಸೂಪರ್‌ಮಾರ್ಕೆಟ್‌ಗಳ ಈ ದೃಶ್ಯಗಳು ವೈರಲ್ ಆಗಿದ್ದು ಜನರು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಖರೀದಿಸುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದೆ.

    ಇದನ್ನೂ ಓದಿ: VIDEO| ಬೋಲ್ಡ್​ ಸೀನ್​ ಮೂಲಕ ಎಲ್ಲರ ಹುಬ್ಬೇರಿಸಿದ ಸಮಂತಾ: ಮಾದಕ ದೃಶ್ಯಗಳು ವೈರಲ್​!

    “ಅಕ್ಕಿ ಎಂದರೆ ದೇಸಿ ಜನರಿಗೆ ಪ್ರಾಣ. ಒಬ್ಬ ಅಕ್ಕಿ ಪ್ರೇಮಿಯಾಗಿ, ನಾನು ಅವರ ನೋವು, ಸಂಕಟ ಮತ್ತು ಹತಾಶೆಯನ್ನು ಅರ್ಥಮಾಡಿಕೊಳ್ಳುತ್ತಿದ್ದೇನೆ” ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ.

    ಇನ್ನೊಬ್ಬ ವ್ಯಕ್ತಿ “COVID ಸಮಯದಲ್ಲಿ ಟಾಯ್ಲೆಟ್ ಪೇಪರ್‌ಗಳಿಗಾಗಿ ಜನರು ಹೋರಾಡುತ್ತಿರುವ ಸುದ್ದಿಯನ್ನು ನಾನು ಕೇಳಿದ್ದೆ. ಜೀವನಶೈಲಿಯನ್ನು ಮಾರ್ಪಾಡು ಮಾಡಬೇಕಾದ ಮೂಲಭೂತ ಸಮಸ್ಯೆ ಪ್ರಾರಂಭವಾದಾಗ ಮಾನವರು ಈ ರೀತಿ ವರ್ತಿಸುತ್ತಾರೆ. ಭಾರತೀಯರನ್ನು ಅಥವಾ ಸಂಸ್ಕೃತಿಯನ್ನು ದೂಷಿಸುವುದು ಈ ವ್ಯಕ್ತಿಯ ಕೀಳರಿಮೆ ಸಂಕೀರ್ಣವನ್ನು ತೋರಿಸುತ್ತದೆ” ಎಂದು ಬೇರೊಬ್ಬರು ದೇಸಿ ಜನರನ್ನು ನಿಂದಿಸಿ ಮಾಡಿದ್ದ ಟ್ವೀಟ್​ಗೆ ಖಾರವಾಗಿ ಉತ್ತರಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts