More

    ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಶೆಫಾಲಿಗೆ ಬಡ್ತಿ, ಕನ್ನಡತಿ ವೇದಾಗೆ ನಿರಾಸೆ

    ನವದೆಹಲಿ: ಯುವ ಬ್ಯಾಟುಗಾರ್ತಿ ಶೆಫಾಲಿ ವರ್ಮ ಬಿಸಿಸಿಐ ಬುಧವಾರ ಪ್ರಕಟಿಸಿರುವ 2020-21ರ ಸಾಲಿನ ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಎ ಶ್ರೇಣಿಗೆ ಬಡ್ತಿ ಪಡೆದಿದ್ದಾರೆ. ಕನ್ನಡತಿ ವೇದಾ ಕೃಷ್ಣಮೂರ್ತಿ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿದ್ದು, ವಾರ್ಷಿಕ ಗುತ್ತಿಗೆ ಪಡೆದ ಒಟ್ಟು ಆಟಗಾರ್ತಿಯರ ಸಂಖ್ಯೆ 22ರಿಂದ 19ಕ್ಕೆ ಇಳಿದಿದೆ.

    2020ರ ಅಕ್ಟೋಬರ್‌ನಿಂದ 2021ರ ಸೆಪ್ಟೆಂಬರ್‌ವರೆಗೆ ಅನ್ವಯಿಸುವ ಈ ಗುತ್ತಿಗೆ ಪಟ್ಟಿಯಲ್ಲಿ ಟಿ20 ತಂಡದ ನಾಯಕಿ ಹರ್ಮಾನ್‌ಪ್ರೀತ್ ಕೌರ್, ಉಪನಾಯಕಿ ಸ್ಮತಿ ಮಂದನಾ ಮತ್ತು ಸ್ಪಿನ್ನರ್ ಪೂನಂ ಯಾದವ್ ಮಾತ್ರ ಎ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದಾರೆ. ಏಕದಿನ ತಂಡದ ನಾಯಕಿ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಮತ್ತು ದೀಪ್ತಿ ಶರ್ಮ ಸಹಿತ 10 ಆಟಗಾರ್ತಿಯರು ಬಿ ಶ್ರೇಣಿಯಲ್ಲಿದ್ದಾರೆ. ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಕೂಡ ಬಿ ಶ್ರೇಣಿಯಲ್ಲಿದ್ದಾರೆ. 17 ವರ್ಷದ ಆಟಗಾರ್ತಿ ರಿಚಾ ಘೋಷ್ ಸಿ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದಾರೆ. ಎ, ಬಿ, ಸಿ ಶ್ರೇಣಿಯಲ್ಲಿರುವವರು ಕ್ರಮವಾಗಿ ವಾರ್ಷಿಕ 50, 30, 10 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ. ವೇದಾ ಜತೆಗೆ ಏಕ್ತಾ ಬಿಷ್ಟ್, ಅನುಜಾ ಪಾಟೀಲ್ ಮತ್ತು ಡಿ. ಹೇಮಲತಾ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿರುವ ಪ್ರಮುಖ ಆಟಗಾರ್ತಿಯರು.

    ಗುತ್ತಿಗೆ ಪಟ್ಟಿ: ಎ ಗ್ರೇಡ್ (ವಾರ್ಷಿಕ 50 ಲಕ್ಷ ರೂ.): ಹರ್ಮಾನ್‌ಪ್ರೀತ್ ಕೌರ್, ಸ್ಮತಿ ಮಂದನಾ, ಪೂನಂ ಯಾದವ್; ಬಿ ಗ್ರೇಡ್ (30 ಲಕ್ಷ ರೂ): ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ದೀಪ್ತಿ ಶರ್ಮ, ಪೂನಂ ರಾವತ್, ರಾಜೇಶ್ವರಿ ಗಾಯಕ್ವಾಡ್, ಶೆಫಾಲಿ ವರ್ಮ, ರಾಧಾ ಯಾದವ್, ಶಿಖಾ ಪಾಂಡೆ, ತಾನಿಯಾ ಭಾಟಿಯಾ, ಜೆಮೀಮಾ ರೋಡ್ರಿಗಸ್; ಸಿ ಗ್ರೇಡ್ (10 ಲಕ್ಷ ರೂ): ಮಾನ್ಸಿ ಜೋಶಿ, ಅರುಂಧತಿ ರೆಡ್ಡಿ, ಪೂಜಾ ವಸಾಕರ್, ಹರ್ಲೀನ್ ಡಿಯೋಲ್, ಪ್ರಿಯಾ ಪೂನಿಯಾ, ರಿಚಾ ಘೋಷ್.

    ಕರೊನಾ ಭೀತಿಯಿಂದ ಮತ್ತೊಂದು ಪ್ರಮುಖ ಕ್ರಿಕೆಟ್ ಟೂರ್ನಿ ರದ್ದು!

    ಐಪಿಎಲ್‌ಗಾಗಿ ವಿಶೇಷ ಪ್ಲ್ಯಾನ್, ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯ ಕಡಿತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts