More

    ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಕರ್ನಾಟಕದ ಮೂವರಿಗೆ ಸ್ಥಾನ

    ನವದೆಹಲಿ: ಕರ್ನಾಟಕದ ಯುವ ಆಲ್ರೌಂಡರ್‌ಗಳಾದ ಸಿ.ಪ್ರತ್ಯುಷಾ ಹಾಗೂ ಮೋನಿಕಾ ಸಿ ಪಟೇಲ್ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ನಿಗದಿತ ಓವರ್‌ಗಳ ಸರಣಿಗೆ ಭಾರತ ಮಹಿಳಾ ತಂಡದಲ್ಲಿ ಮೊದಲ ಬಾರಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪ್ರತ್ಯುಷಾ, ಮೋನಿಕಾ ಸಿ ಪಟೇಲ್ ಸೇರಿದಂತೆ 6 ಹೊಸ ಮುಖಗಳಿಗೆ ಸ್ಥಾನ ಕಲ್ಪಿಸಲಾಗಿದ್ದು, ಹಿರಿಯ ಆಟಗಾರ್ತಿಯರಾದ ಕನ್ನಡತಿ ವೇದಾ ಕೃಷ್ಣಮೂರ್ತಿ, ಆಲ್ರೌಂಡರ್ ಶಿಖಾ ಪಾಂಡೆ ಹಾಗೂ ವಿಕೆಟ್ ಕೀಪರ್ ತಾನಿಯಾ ಭಾಟಿಯಾ, ಅನುಜ್ ಪಾಟೀಲ್‌ಗೆ ತಂಡದಿಂದ ಕೊಕ್ ನೀಡಲಾಗಿದೆ. ಮಾರ್ಚ್ 7 ರಿಂದ 17 ರವರೆಗೆ 5 ಏಕದಿನ ಹಾಗೂ ಮಾರ್ಚ್ 20 ರಿಂದ 23 ರವರೆಗೆ 3 ಟಿ20 ಪಂದ್ಯಗಳು ನಡೆಯಲಿವೆ. ಎಲ್ಲ ಪಂದ್ಯಗಳು ಲಖನೌದಲ್ಲಿರುವ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲೆ ನಡೆಯಲಿವೆ. ಮಿಥಾಲಿ ರಾಜ್ ಹಾಗೂ ಹರ್ಮಾನ್‌ಪ್ರೀತ್ ಕೌರ್ ಕ್ರಮವಾಗಿ ಏಕದಿನ ಹಾಗೂ ಟಿ20 ತಂಡಗಳನ್ನು ಮುನ್ನಡೆಸಲಿದ್ದಾರೆ.

    ಇದನ್ನೂ ಓದಿ: ಮತ್ತೊಮ್ಮೆ ಸುವರ್ಣ ಸಂಭ್ರಮ

    ಕನ್ನಡತಿಯರಾದ ಸಿ.ಪ್ರತ್ಯುಷಾ, ಮೋನಿಕಾ ಸಿ ಪಟೇಲ್ ಎರಡೂ ತಂಡಗಳಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದರೆ, ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಎರಡೂ ತಂಡಗಳಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಸ್ಪಿನ್ನರ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ 22 ವರ್ಷದ ಸಿ.ಪ್ರತ್ಯುಷಾ, ರಾಜ್ಯ ತಂಡದಲ್ಲಿ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ಬೆಂಗಳೂರಿನ ಹೆರಾನ್ಸ್ ಕ್ಲಬ್ ಕೋಚ್ ಮುರಳೀಧರ್ ಅವರ ಮಾರ್ಗದರ್ಶನದಲ್ಲಿ ಕ್ರಿಕೆಟ್ ತರಬೇತಿ ಆರಂಭಿಸಿದ್ದರು. ಬಳಿಕ ವಿವಿಧ ವಯೋಮಿತಿಯಲ್ಲೂ ರಾಜ್ಯ ತಂಡ ಪ್ರತಿನಿಧಿಸಿ ಮುನ್ನಡೆಸಿದ್ದಾರೆ. ಮತ್ತೋರ್ವ ಎಡಗೈ ವೇಗಿ ಹಾಗೂ ಬ್ಯಾಟ್ಸ್‌ವುಮೆನ್ ಆಗಿರುವ 21 ವರ್ಷದ ಮೋನಿಕಾ ಸಿ ಪಟೇಲ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.

    ಏಕದಿನ ತಂಡ: ಮಿಥಾಲಿ ರಾಜ್ (ನಾಯಕಿ), ಹರ್ಮಾನ್‌ಪ್ರೀತ್ ಕೌರ್ (ಉಪನಾಯಕಿ), ಸ್ಮತಿ ಮಂದನಾ , ಜೇಮಿಮಾ ರೋಡ್ರಿಗಸ್, ಪೂನಂ ರಾವತ್, ಪ್ರಿಯಾ ಪೂನಿಯಾ, ಯಸ್ಟಿಕಾ ಭಾಟಿಯಾ, ಡಿ. ಹೇಮಲತಾ, ದೀಪ್ತಿ ಶರ್ಮ, ಸುಷ್ಮಾ ವರ್ಮ (ವಿಕೀ), ಶ್ವೇತಾ ವರ್ಮ (ವಿಕೀ), ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಜೂಲನ್ ಗೋಸ್ವಾಮಿ, ಮಾನ್ಸಿ ಜೋಶಿ, ಪೂನಂ ಯಾದವ್, ಸಿ.ಪ್ರತ್ಯುಷಾ, ಮೋನಿಕಾ ಸಿ ಪಟೇಲ್.

    ಟಿ20 ತಂಡ: ಹರ್ಮಾನ್‌ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂದನಾ (ಉಪನಾಯಕಿ), ಶಾಲಿ ವರ್ಮ, ಜೇಮಿಮಾ ರೋಡ್ರಿಗಸ್, ದೀಪ್ತಿ ಶರ್ಮ, ರಿಚಾ ಘೋಷ್, ಹರ್ಲಿನ್ ಡಿಯೊಲ್, ಸುಷ್ಮಾ ವರ್ಮ (ವಿಕೀ), ನುಜಾಹತ್ ಪರ್ವೀನ್ (ವಿಕೀ), ಆಯೂಶಿ ಸೋನಿ, ಅರುಂಧತಿ ರೆಡ್ಡಿ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್, ಮಾನ್ಸಿ ಜೋಶಿ, ಮೋನಿಕಾ ಸಿ ಪಟೇಲ್, ಸಿ.ಪ್ರತ್ಯುಷಾ, ಸಿಮ್ರಾನ್ ದಿಲ್ ಬಹದೂರ್.

    ಟೂರ್ನಿ ವೇಳಾಪಟ್ಟಿ
    ಏಕದಿನ ಸರಣಿ
    ದಿನಾಂಕ, ಪಂದ್ಯ,
    ಮಾ.7, ಮೊದಲ ಏಕದಿನ,
    ಮಾ.9, 2ನೇ ಏಕದಿನ,
    ಮಾ.12, 3ನೇ ಏಕದಿನ,
    ಮಾ.14, 4ನೇ ಏಕದಿನ,
    ಮಾ.17, 5ನೇ ಏಕದಿನ,

    ಟಿ20 ಸರಣಿ

    ದಿನಾಂಕ, ಪಂದ್ಯ,
    ಮಾ.20, ಮೊದಲ ಟಿ20,
    ಮಾ.21, 2ನೇ ಟಿ20,
    ಮಾ.23, 3ನೇ ಟಿ20,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts