More

    ಜರ್ಮನ್ ಏರ್​ಪೋರ್ಟ್​ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಮಹಿಳೆ

    ದುಬೈ: ಅಬು ಧಾಬಿ ಮೂಲದ ಭಾರತೀಯ ಮಹಿಳೆಯೊಬ್ಬರು ಕಳೆದ ನಾಲ್ಕು ದಿನಗಳಿಂದ ಜರ್ಮನಿಯ ಫ್ರಾಂಕ್​ಫರ್ಟ್​ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಲ್ಲಿ ಅತಂತ್ರ ಪರಿಸ್ಥಿತಿ ಅನುಭವಿಸುತ್ತಿರುವುದಾಗಿ ವರದಿಯಾಗಿದೆ. ಜುಲೈ 4 ರಂದು ಕನೆಕ್ಟಿಂಗ್ ಫ್ಲೈಟ್ ಹಿಡಿದು ಯುಎಇಗೆ ಅವರು ವಾಪಸಾಗಬೇಕಾಗಿತ್ತು. ಆದರೆ, ಅವರ ಬಳಿಕ ಅಗತ್ಯ ದಾಖಲೆ ಪತ್ರಗಳು ಇಲ್ಲದ ಕಾರಣ ತೊಂದರೆಗೆ ಸಿಲುಕಿದ್ದು ನೆರವು ಯಾಚಿಸಿದ್ದಾರೆ.

    ಸಂಕಷ್ಟಕ್ಕೆ ಈಡಾಗಿರುವ ಮಹಿಳೆಯ ಹೆಸರು ಪ್ರಿಯಾ ಮೆಹ್ತಾ. ವೃತ್ತಿಯಲ್ಲಿ ಅಡ್ವರ್ಟೈಸಿಂಗ್ ಪ್ರೊಫೆಷನಲ್. ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋ ಇಂಟರ್​ನ್ಯಾಷನಲ್ ಏರ್​ಪೋರ್ಟ್​ ನಿಂದ ಫ್ರಾಂಕ್​ಫರ್ಟ್​ಗೆ ಬಂದು ಅಲ್ಲಿಂದ ದುಬೈ ವಿಮಾನ ಹಿಡಿಯಬೇಕಾಗಿತ್ತು. ಯುನೈಟೆಡ್ ಏರ್​ಲೈನ್ಸ್ ಮತ್ತು ಲುಫ್ತಾನ್​ಝಾ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಜುಲೈ 4ರಂದು ಫ್ರಾಂಕ್​ಫರ್ಟ್​ನಲ್ಲಿ ಇಳಿದಾಗ, ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಆ್ಯಂಡ್ ಸಿಟಿಜನ್​ಷಿಪ್​(ಐಸಿಎ) ಅಪ್ರೋವಲ್ಸ್ ಇಲ್ಲದ ಕಾರಣ ದುಬೈ ವಿಮಾನ ಏರುವುದಕ್ಕೆ ಅಧಿಕಾರಿಗಳು ಬಿಡಲಿಲ್ಲ.

    ಇದನ್ನೂ ಓದಿ:  ನವೆಂಬರ್‌ ಅಂತ್ಯದವರೆಗೂ ಉಚಿತ ಪಡಿತರ- ಸಚಿವ ಸಂಪುಟ ಅನುಮೋದನೆ

    ಕರೊನಾ ವೈರಸ್​ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಯುಎಇ ಸರ್ಕಾರ ತೆಗೆದುಕೊಂಡ ಕ್ರಮದ ಪ್ರಕಾರ, ವಿಮಾನ ಪ್ರಯಾಣಕ್ಕೆ ಯುಎಇ ಪೌರರ ನ್ಯಾಷನಲ್ ಐಡೆಂಟಿಟಿ ಕಾರ್ಡ್​ ಇದ್ದರಷ್ಟೇ ಸಾಕಾಗುವುದಿಲ್ಲ. ತನ್ನ ಬಳಿಕ ರೆಸಿಡೆನ್ಸ್ ವೀಸಾ ಇದೆ. ಆದ್ದರಿಂದ ಐಸಿಎ ಅಪ್ರೋವಲ್ ಬೇಕಾಗಿಲ್ಲ ಎಂಬುದು ಪ್ರಿಯಾ ವಾದ. ಅದನ್ನು ಅಧಿಕಾರಿಗಳು ಪರಿಗಣಿಸಲು ಸಿದ್ಧರಿಲ್ಲದ ಕಾರಣ ನಾಲ್ಕು ದಿನಗಳಿಂದ ವಿಮಾನ ನಿಲ್ದಾಣದ ಆವರಣದಲ್ಲೇ ಪ್ರಿಯಾ ಕಾಲಕಳೆದಿದ್ದಾರೆ.

    ಪ್ರಿಯಾ ಅವರ ತಂದೆ ಭಾರತದಲ್ಲಿದ್ದಾರೆ. ಯುಎಇನಲ್ಲಿ ವೃತ್ತಿ ಮಾಡುತ್ತಿರುವ ಪ್ರಿಯಾಗೆ ಅಲ್ಲಿ ಸಂಬಂಧಿಕರು ಯಾರೂ ಇಲ್ಲ. ಆದರೆ, ಕ್ಯಾಲಿಫೋರ್ನಿಯಾದಲ್ಲಿ ಸಂಬಂಧಿಕರಿದ್ದು ಅವರ ಸುಖದುಃಖ ವಿಚಾರಿಸಿಕೊಂಡು ಬರುವ ಸಂದರ್ಭದಲ್ಲಿ ಈ ಸಂಕಷ್ಟ ಉಂಟಾಗಿದೆ. ಈ ನಡುವೆ, ಪ್ರಿಯಾ ಕೆಲಸ ಮಾಡುತ್ತಿರುವ ಕಂಪನಿಯೂ ದೇಶದ ಅಧಿಕೃತರಿಗೆ ಪತ್ರ ಬರೆದಿದ್ದು, ಅವರನ್ನು ಸಂಕಷ್ಟದಿಂದ ಪಾರು ಮಾಡುವ ಪ್ರಯತ್ನ ನಡೆಸಿದೆ. (ಏಜೆನ್ಸೀಸ್)

    31ರ ತನಕ ಶಿಕ್ಷಕರಿಗೆ ವರ್ಕ್​ ಫ್ರಂ ಹೋಮ್ ಕೊಡಿ- ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts