More

    ವೈದ್ಯನಾಗಲು ಚೀನಾಗೆ ಹೋಗಿದ್ದ ಯುವಕ ಅನಾರೋಗ್ಯದಿಂದ ಸಾವಿಗೀಡಾದ…

    ನವದೆಹಲಿ: ಕಳೆದ ಐದು ವರ್ಷಗಳಿಂದ ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ತಮಿಳುನಾಡಿನ 22 ವರ್ಷದ ಭಾರತೀಯ ವಿದ್ಯಾರ್ಥಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಆರ್ಥಿಕವಾಗಿ ಹಿಂದುಳಿದಿರುವ ಆತನ ಕುಟುಂಬ ಮೃತದೇಹವನ್ನು ಮರಳಿ ಭಾರತಕ್ಕೆ ತರಲು ವಿದೇಶಾಂಗ ಸಚಿವಾಲಯವನ್ನು ಕೇಳಿದೆ.

    ಭಾರತೀಯ ವಿದ್ಯಾರ್ಥಿ ಅಬ್ದುಲ್ ಶೇಖ್, ತನ್ನ ಕೋರ್ಸ್‌ನ ಕೊನೆಯಲ್ಲಿ ಚೀನಾದಲ್ಲಿ ಇಂಟರ್ನ್​ಶಿಪ್​ ಮಾಡುತ್ತಿದ್ದ. ಇತ್ತೀಚೆಗಷ್ಟೇ ಭಾರತಕ್ಕೆ ಬಂದಿದ್ದ ಆತ, ಡಿಸೆಂಬರ್ 11ರಂದು ಚೀನಾಕ್ಕೆ ವಾಪಸಾಗಿದ್ದ.

    ಶೇಖ್ ಚೀನಾಕ್ಕೆ ತೆರಳಿದ ನಂತರ ಕ್ವಾರಂಟೈನ್​ಗೆ 8 ದಿನಗಳ ಕಾಲ ಒಳಗಾಗಿದ್ದ. ನಂತರ ಈಶಾನ್ಯ ಚೀನಾದ ಹೈಲಾಂಗ್‌ಜಿಯಾಂಗ್ ಪ್ರಾಂತ್ಯದ ಕಿಕಿಹಾರ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ತನ್ನ ಇಂಟರ್ನ್‌ಶಿಪ್ ಮಾಡುತ್ತಿದ್ದ.

    ಆದರೂ, ನಂತರ ಆತ ಅಸ್ವಸ್ಥನಾದ ಕಾರಣ ಆತನನ್ನು ತೀವ್ರ ನಿಗಾ ಘಟಕಕ್ಕೆ ಕಳುಹಿಸಲಾಯಿತು, ಅಲ್ಲಿ ಯುವಕ ಸಾವಿಗೀಡಾಗಿದ್ದಾನೆ. ಮೃತದೇಹವನ್ನು ಮನೆಗೆ ತರಲು ವಿದ್ಯಾರ್ಥಿಯ ಕುಟುಂಬ ವಿದೇಶಾಂಗ ಸಚಿವಾಲಯದಿಂದ ನೆರವು ಕೋರಿದೆ. ದರ ಜೊತೆಗೆ ಕುಟುಂಬ, ತಮಿಳುನಾಡು ಸರ್ಕಾರದಿಂದಲೂ ನೆರವು ಕೋರಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts