More

    ಡೊಳ್ಳು ಹೊಟ್ಟೆ ಕ್ರಿಕೆಟಿಗರ ಟೂರ್ನಿಯಾಯಿತೇ ಐಪಿಎಲ್?

    ನವದೆಹಲಿ: ಕರೊನಾ ವೈರಸ್ ಹಾವಳಿಯಿಂದಾಗಿ ಕಳೆದ ಸುಮಾರು 6 ತಿಂಗಳಿನಿಂದ ಸಂಪೂರ್ಣ ಬಿಡುವಿನಲ್ಲಿದ್ದ ಕ್ರಿಕೆಟಿಗರನ್ನು ಒಳಗೊಂಡ ಐಪಿಎಲ್ 13ನೇ ಆವೃತ್ತಿ ಇದೀಗ ಅರಬ್ ರಾಷ್ಟ್ರ ಯುಎಇಯಲ್ಲಿ ನಡೆಯುತ್ತಿದೆ. ಆದರೆ ಬಿಡುವಿನಲ್ಲಿದ್ದ ವೇಳೆ ಫಿಟ್ನೆಸ್‌ನತ್ತ ಹೆಚ್ಚಿನ ಗಮನ ಹರಿಸದ ಕೆಲ ಕ್ರಿಕೆಟಿಗರು ಈಗ ಡೊಳ್ಳು ಹೊಟ್ಟೆಯನ್ನು ಹೊಂದಿದ್ದಾರೆ. ಇದರಿಂದಾಗಿ ಐಪಿಎಲ್ ಟೂರ್ನಿಯನ್ನು ‘ಇಂಡಿಯನ್ ಪಾಂಚ್ (ಡೊಳ್ಳು ಹೊಟ್ಟೆ) ಲೀಗ್’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಣಕಿಸಲಾಗುತ್ತಿದೆ.

    ಉದ್ಘಾಟನಾ ಪಂದ್ಯವಾಡಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ, ಬ್ಯಾಟ್ಸ್‌ಮನ್ ಸೌರಭ್ ತಿವಾರಿ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಸ್ಪಿನ್ನರ್ ಪೀಯುಷ್ ಚಾವ್ಲ ಅವರ ಡೊಳ್ಳು ಹೊಟ್ಟೆ ಪ್ರಮುಖವಾಗಿ ಕ್ರಿಕೆಟ್ ಪ್ರೇಮಿಗಳ ಕಣ್ಣು ಕುಕ್ಕಿದೆ. ಭಾರತ ಹಾಕಿ ತಂಡದ ಮಾಜಿ ನಾಯಕ ವಿರೇನ್ ರಸ್ಕಿನಾ ಈ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

    ‘ನಾನೆಂದೂ ಗಲ್ಲಿ ಕ್ರಿಕೆಟ್‌ಗಿಂತ ಹೆಚ್ಚಿನ ಕ್ರಿಕೆಟ್ ಆಡಿಲ್ಲ. ಆದರೆ ಐಪಿಎಲ್‌ನಲ್ಲಿ ಆಡುತ್ತಿರುವ ಕೆಲ ಆಟಗಾರರು ಅನ್‌ಫಿಟ್ ಆಗಿರುವುದನ್ನು ನೋಡಿ ಆಘಾತವಾಯಿತು. ಇಂಥ ಫಿಟ್‌ನೆಸ್ ಹೊಂದಿದ್ದರೂ, ಉನ್ನತ ಮಟ್ಟದಲ್ಲಿ ಆಡುವ ಅವಕಾಶ ಪಡೆದಿರುವ ಆಟಗಾರರನ್ನು ಬೇರೆ ಯಾವ ದೈಹಿಕ ಕ್ರೀಡೆಯಲ್ಲೂ ನೋಡಿಲ್ಲ’ ಎಂದು ವಿರೇನ್ ರಸ್ಕಿನಾ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಅದ್ಭುತ ಆಟವಾಡಿಯೂ ಗೆಲುವು ಕೈತಪ್ಪಿದ್ದಕ್ಕೆ ಮಯಾಂಕ್ ಅಗರ್ವಾಲ್ ಏನಂದರು?

    ಕ್ರಿಕೆಟ್ ವೀಕ್ಷಕವಿವರಣೆಕಾರ ಹರ್ಷಾ ಬೋಗ್ಲೆ ಕೂಡ ಡೊಳ್ಳು ಹೊಟ್ಟೆ ಆಟಗಾರರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಲಿಸಾ ಸ್ಥಳೇಕರ್ ಕೂಡ ಐಪಿಎಲ್‌ನಲ್ಲಿ ಆಡುತ್ತಿರುವ ಕ್ರಿಕೆಟಿಗರ ಫಿಟ್ನೆಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts