More

    ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಮೂಲದ ವೈರಲಾಜಿಸ್ಟ್​ರನ್ನು ಬಲಿ ಪಡೆದ ಕರೊನಾ ವೈರಸ್​; ಮಹಿಳಾ ವಿಜ್ಞಾನಿ ಗೀತಾ ರಾಮ್​ ಜೀ ಸಾವು

    ಜೊಹಾನ್ಸ್​ಬರ್ಗ್​: ಕರೊನಾ ವೈರಸ್​​ನಿಂದ ಇತ್ತೀಚೆಗೆ ಭಾರತೀಯ ಶೆಫ್ ಫ್ಲಾಯ್ಡ್ ಕಾರ್ಡೋಜ್ ನ್ಯೂಜೆರ್ಸಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

    ಇದೀಗ ಭಾರತೀಯ ಮೂಲದ ಸೂಕ್ಷ್ಮರೋಗಾಣು ತಜ್ಞ(ವೈರಲಾಜಿಸ್ಟ್​) ರಾದ ಗೀತಾ ರಾಮ್​ ಜೀ (64) ಅವರು ಕರೋನಾದಿಂದ ಸಾವನ್ನಪ್ಪಿದ್ದಾರೆ.  ಗೀತಾ ರಾಮ್​ ಜೀ ಭಾರತೀಯರಾದರೂ ದಕ್ಷಿಣ ಆಫ್ರಿಕಾ ನಿವಾಸಿಯಾಗಿದ್ದರು.

    ಗೀತಾ ರಾಮ್​ ಜೀ ಲಸಿಕಾ ವಿಜ್ಞಾನಿ ಮತ್ತು ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಶೋಧನಾ ಮಂಡಳಿಯ (ಎಸ್‌ಎಎಂಆರ್‌ಸಿ) ಡರ್ಬನ್‌ನಲ್ಲಿರುವ ಕಚೇರಿಗಳ ಎಚ್‌ಐವಿ ತಡೆಗಟ್ಟುವಿಕೆ ಸಂಶೋಧನಾ ಘಟಕದ ಮುಖ್ಯಸ್ಥೆ. ಇವರು ವಾರದ ಹಿಂದಷ್ಟೇ ಲಂಡನ್​​ನಿಂದ ದಕ್ಷಿಣ ಆಫ್ರಿಕಾಕ್ಕೆ ವಾಪಸ್​ ಆಗಿದ್ದರು. ಆದರೆ ಅವರಲ್ಲಿ ಕೊವಿಡ್​-19ರ ಯಾವುದೇ ಲಕ್ಷಣಗಳೂ ಕಂಡುಬಂದಿರಲಿಲ್ಲ.

    ಎಸ್‌ಎಎಂಆರ್‌ಸಿಯ ಅಧ್ಯಕ್ಷೆ ಮತ್ತು ಸಿಇಒ ಆಗಿರುವ ಗ್ಲೆಂಡಾ ಗ್ರೇ ಅವರು ಗೀತಾ ರಾಮ್​ ಜೀ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೇ ಗೀತಾ ಕರೊನಾದಿಂದ ಮೃತಪಟ್ಟಿದ್ದಾಗಿ ದೃಢಪಡಿಸಿದ್ದಾರೆ.

    ಎಚ್​​ಐವಿ ತಡೆಗಟ್ಟುವ ಹೊಸ ವಿಧಾನಗಳ ಬಗ್ಗೆ ನಿರಂತರ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ ಗೀತಾ ರಾಮ್​ ಜೀ ಅವರ ಜೀವಮಾನ ಸಾಧನೆಗಾಗಿ ಯುರೋಪಿಯನ್ ಡೆವಲಪ್​ಮೆಂಟ್​ ಕ್ಲಿನಿಕಲ್​ ಟ್ರಯಲ್ಸ್​ ಪಾರ್ಟ್​ನರ್​ಶಿಪ್​ನಿಂದ 2018ರಲ್ಲಿ ಅತ್ಯುತ್ತಮ ಮಹಿಳಾ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಈ ಕಾರ್ಯಕ್ರಮ ಲಿಸ್ಬನ್​ನಲ್ಲಿ ನಡೆದಿತ್ತು.

    ಗೀತಾ ರಾಮ್​ ಜೀ ಅವರ ಪತಿ ಪ್ರವೀಣ್​ ರಾಮ್​ ಜೀ ಕೂಡ ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ಫಾರ್ಮಾಸಿಸ್ಟ್​. ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೆ ಐವರು ಕರೊನಾಕ್ಕೆ ಬಲಿಯಾಗಿದ್ದಾರೆ. ದೇಶದಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts