More

    ಹಡ್ಸನ್ ನದಿಯಲ್ಲಿ ಭಾರತ ಮೂಲದ ಗಣಿತಜ್ಞನ ಶವ !

    ನ್ಯೂ ಯಾರ್ಕ್ : ಭಾರತ ಮೂಲದ ಗಣಿತಜ್ಞನೊಬ್ಬನ ಶವವು ಅಮೆರಿಕದ ಹಡ್ಸನ್ ನದಿಯ ಮೇಲೆ ತೇಲುತ್ತಾ ಸಿಕ್ಕಿರುವುದನ್ನು ನ್ಯೂಯಾರ್ಕ್​ ಪೋಸ್ಟ್ ವರದಿ ಮಾಡಿದೆ. ಸ್ವಯಂಉದ್ಯೋಗಿಯಾಗಿದ್ದು ಕ್ರಿಪ್ಟೊಕರೆನ್ಸಿ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾದ 31 ವರ್ಷ ವಯಸ್ಸಿನ ಶುವ್ರೊ ಬಿಸ್ವಾಸ್ ಮೃತರು.

    ಪ್ರಕರಣ ದಾಖಲಿಸಿರುವ ನ್ಯೂ ಯಾರ್ಕ್ ಪೊಲೀಸರು, ಯಾವುದೇ ಅನುಮಾನಾಸ್ಪದ ವಿಚಾರಗಳು ತೋರಿಬಂದಿಲ್ಲ ಎಂದಿದ್ದಾರೆ. ಮೃತನು ಕಳೆದ ಒಂದು ವರ್ಷದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಸಾವಿನ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಯುಗಾದಿ ಶಾಕ್ : ಅತ್ತೆ-ಮಾವನಿಗೆ ಚೂರಿ ಇರಿದ ಅಳಿಯ !

    “ಒಂದು ವರ್ಷದಿಂದ ಶುವ್ರೊನ ವರ್ತನೆಯಲ್ಲಿ ಬದಲಾವಣೆಗಳು ಕಂಡುಬಂದಿದ್ದು, ಈ ಬಗ್ಗೆ ಮಾನಸಿಕ ತಜ್ಞರ ಸಹಾಯ ಪಡೆಯಲು ಎಷ್ಟು ಹೇಳಿದರೂ ಆತ ಒಪ್ಪಿರಲಿಲ್ಲ. ನರರೋಗತಜ್ಞರ ಬಳಿ ಚಿಕಿತ್ಸೆಗಾಗಿ ಹೋಗುತ್ತಿದ್ದ. ಆದರೆ ಅದರ ಕಾರಣ ಗೊತ್ತಿಲ್ಲ” ಎಂದು ಮೃತ ಶುವ್ರೊನ ಸೋದರ ಬಿಪ್ರೊಜಿತ್ ಬಿಸ್ವಾಸ್ ಹೇಳಿದ್ದಾರೆ ಎನ್ನಲಾಗಿದೆ.

    ಫೆಬ್ರವರಿಯಲ್ಲಿ ಶುವ್ರೊ ವಾಸಿಸುತ್ತಿದ್ದ ವೆಸ್ಟ್ 37 ಸ್ಟ್ರೀಟ್ ಅಪಾರ್ಟ್​ಮೆಂಟಿನವರು ಆತ ವಿಚಿತ್ರವಾಗಿ ವರ್ತಿಸುತ್ತಾ ನೂಯಿಸೆನ್ಸ್​ ಮಾಡುತ್ತಿದ್ದಾನೆ ಎಂದು ಹೇಳಿ, ಅವನನ್ನು ಮನೆಯಿಂದ ಹೊರಹಾಕಬೇಕೆಂದು ಮ್ಯಾನ್​ಹಟನ್ ಕೋರ್ಟ್ ಮೆಟ್ಟಿಲೇರಿದ್ದರು. ಸುಮ್ಮಸುಮ್ಮನೆ ಪೊಲೀಸರಿಗೆ ಕರೆ ಮಾಡುತ್ತಿದ್ದ ಶುವ್ರೋ, ಮನೆಯ ಒಳಗೆ ಹಾಸಿಗೆಗೆ ಬೆಂಕಿ ಹಚ್ಚಿದ್ದ, ಜನರಿಗೆ ಚಾಕು ತೋರಿಸಿದ್ದ, ಲಿಫ್ಟ್ ಒಳಗೆ ರಕ್ತ ಮೆತ್ತಿದ್ದ ಎಂಬುದಾಗಿ ಅಪಾರ್ಟ್​ಮೆಂಟಿನವರು ಆಪಾದಿಸಿದ್ದರು ಎನ್ನಲಾಗಿದೆ. (ಏಜೆನ್ಸೀಸ್)

    ಚಿನ್ನದ ಕಳ್ಳಸಾಗಣೆಯಲ್ಲಿ ಸಿಎಂ ಹೆಸರು ! ಇಡಿ ಅಧಿಕಾರಿಗಳ ವಿರುದ್ಧದ ಕೇಸು ರದ್ದು

    ಕರೊನಾ ಲಸಿಕೆಯ ಮೇಲೂ ಕಳ್ಳರ ಕಣ್ಣು ? ಆಸ್ಪತ್ರೆಯಿಂದ 32 ಕೋವಾಕ್ಸಿನ್ ವಯಲ್​ಗಳು ಕಾಣೆ !

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts