More

    ಭಾರತೀಯ ಶಿಕ್ಷಕರೇ ಶ್ರೇಷ್ಠರು

    ಕೊಪ್ಪಳ: ಭಾರತ ದೇಶದ ಶಿಕ್ಷಕರು ಜಗತ್ತಿನಲ್ಲಿ ಶ್ರೇಷ್ಠರು. ಜ್ಞಾನದಲ್ಲಿ ಶ್ರೀಮಂತರು ಎಂದು ಶಿಕ್ಷಣ ತಜ್ಞ ಡಾ.ಎಚ್.ವಿ.ವಾಮದೇವಪ್ಪ ಹೇಳಿದರು.

    ಇದನ್ನೂ ಓದಿ:http://ಭಾರತೀಯ ಶಿಕ್ಷಕರೇ ಶ್ರೇಷ್ಠರು

    ತಾಲೂಕಿನ ದದೇಗಲ್ ಗ್ರಾಮದ ರಾಜೀವ್ ಗಾಂಧಿ ರೂರಲ್ ಬಿಇಡಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಟಿಇಟಿ ಉಚಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಜಗತ್ತಿನಲ್ಲಿ ಭಾರತೀಯ ಶಿಕ್ಷಕರಿಗೆ ತುಂಬಾ ಗೌರವ ಇದೆ. ನೀವೆಲ್ಲ ಶಿಕ್ಷಕರಾಗಬೇಕು ಅಂದುಕೊಂಡಿದ್ದೀರಿ. ಕಲಿಕೆ ನಿರಂತರವಾಗಿರಲಿ. ನಿಂತ ನೀರಾಗಬಾರದು. ಬೋಧನಾ ವಿಷಯದಲ್ಲಿ ಪ್ರಾವಿಣ್ಯತೆ ಸಾಧಿಸಬೇಕು.

    ವಿದ್ಯಾರ್ಥಿಗಳಲ್ಲಿ ಜ್ಞಾನದ ಬೀಜ ಬಿತ್ತಬೇಕು. ಶಿಕ್ಷಕರ ವರ್ತನೆಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿ ನಾವು ಮೊದಲು ಜವಾಬ್ದಾರಿಯಿಂದ ವರ್ತಿಸಬೇಕು. ಕಾರ್ಯಾಗಾರದ ಸದುಪಯೋಗ ಪಡೆದು ಉತ್ತಮ ಶಿಕ್ಷಕರಾಗಿ.

    ಉಪನ್ಯಾಸ ನೆಪದಲ್ಲಿ ಮೊದಲ ಬಾರಿ ಕೊಪ್ಪಳಕ್ಕೆ ಆಗಮಿಸಿದ್ದು ಖುಷಿ ತಂದಿದೆ ಎಂದರು. ಡಾ.ವೈ.ಎಮ್.ವಿಠಲರಾವ್, ಸಂಸ್ಥೆಯ ಸಂಯೋಜಕ ಬಾಳಪ್ಪ ಸಂಗಟಿ, ಪ್ರಾಚಾರ್ಯ ವಿನೋದ ಹೂಲಿ, ಉಪನ್ಯಾಸಕರಾದ ಮಲ್ಲಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts