More

    ಅಫ್ಘಾನ್​ ಜೈಲಿನ ಮೇಲೆ ದಾಳಿ ಮಾಡಿದ ಐಸಿಸ್​ ಉಗ್ರರಲ್ಲಿ ಮೂವರು ಭಾರತೀಯರು; ಒಬ್ಬಾತ ಕಾಸರಗೋಡಿನವ

    ನವದೆಹಲಿ: ಅಫ್ಘಾನಿಸ್ತಾನದ ಜೈಲಿನ ಮೇಲೆ ಆ.2ರಂದು ಐಸಿಸ್​ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ. ಇಂದು ಇಸ್ಲಾಮಿಕ್ ಸ್ಟೇಟ್​ ದಾಳಿಕೋರರ ಫೋಟೋವನ್ನೂ ಕೂಡ ಬಿಡುಗಡೆ ಮಾಡಿದೆ.

    ಅಫ್ಘಾನ್​ ಜೈಲಿನ ಮೇಲೆ ದಾಳಿ ನಡೆಸಿದ ಉಗ್ರರಲ್ಲಿ ಮೂವರು ಭಾರತೀಯರು, ಓರ್ವ ಪಾಕಿಸ್ತಾನಿ, ಮೂವರು ಅಫ್ಘಾನಿಸ್ತಾನದವರು ಹಾಗೂ ಮೂವರು ತಾಝಿಕ್ ಉಗ್ರರು ಎಂದು ಐಸಿಸ್​ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ತಮ್ಮನನ್ನು ಕಾಪಾಡಲು ಅಣ್ಣ, ಇಬ್ಬರನ್ನು ರಕ್ಷಿಸಲು ಮತ್ತೋರ್ವ ಸಹೋದರ ಕೃಷಿ ಹೊಂಡಕ್ಕೆ ಬಿದ್ದು ಸಾವು

    ಭಾರತದ ಮೂವರು ಉಗ್ರರಲ್ಲಿ ಓರ್ವನನ್ನು ಕೇರಳದ ಕಾಸರಗೋಡಿನ ಕಲುಕೆಟ್ಟಿಯಾ ಪುರೈಲ್ ಇಜಾಸ್ ಎಂದು ಗುರುತಿಸಲಾಗಿದೆ.
    ತಾಲಿಬಾನ್​ ಹೋರಾಟಗಾರರು ಮತ್ತು ಅಫ್ಘಾನ್​ ಭದ್ರತಾ ಪಡೆಗಳ ನಡುವೆ ಕದನ ವಿರಾಮ ಜಾರಿಯಲ್ಲಿದ್ದರೂ ಭಾನುವಾರ ರಾತ್ರಿ ಈ ದಾಳಿ ನಡೆಸಿದ್ದಾರೆ.

    ಘಟನೆ ನಡೆದ ಜಲಲಾಬಾದ್ಗೆ ಅಫ್ಘಾನ್​ ಸೇನಾ ಮುಖ್ಯಸ್ಥ ಜನರಲ್​ ಯಾಸಿನ್ ಝಿಯಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 10 ಮಂದಿ ದಾಳಿಕೋರರನ್ನೂ ಹಿಮ್ಮೆಟ್ಟಿಸಲಾಗಿದೆ ಎಂದು ಹೇಳಿದ್ದಾರೆ. ಒಟ್ಟು 29 ಮಂದಿ ಮೃತಪಟ್ಟಿದ್ದು, 48 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಮಾಸ್ಕ್​ ಯಾಕೆ ಧರಿಸಲಿಲ್ಲ ಎಂದು ಪ್ರಶ್ನೆ ಮಾಡಿದ ಪೊಲೀಸ್​ ತಲೆಯನ್ನು ಸಿಮೆಂಟ್​​ ನೆಲಕ್ಕೆ ಜಜ್ಜಿದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts