More

    ಕಿಲ್ಲರ್ ​ಕರೊನಾ​ ತವರು ಚೀನಾದ ವುಹಾನ್​ನಲ್ಲಿ ಲಾಕ್​ಡೌನ್​ ಸಮಯ ಹೇಗೆ ಕಳೆದೆ ಎಂಬುದನ್ನು ವಿವರಿಸಿದ ಭಾರತೀಯ

    ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಮೊದಲು ಸ್ಪೋಟಗೊಂಡ ಚೀನಾದ ಹುಬೇ ಪ್ರಾಂತ್ಯದ ವುಹಾನ್​ ನಗರದಲ್ಲಿ ವಾಸವಿದ್ದ ಭಾರತೀಯರೊಬ್ಬರು ಚೀನಾ ಸರ್ಕಾರ ಹೇರಿದ್ದ ದೀರ್ಘ ಸಮಯದ ಲಾಕ್​ಡೌನ್​ ವೇಳೆ ತಾವು ಹೇಗೆ ಸಮಯ ಕಳೆದರೂ ಎಂಬುದನ್ನು ವಿವರಿಸಿದ್ದಾರೆ.

    ಕರಾಳ ದಿನಗಳ ಬಗ್ಗೆ ಮಾತನಾಡಿರುವ ಶುವಮ್​ ಪೌಲ್​, ಕರೊನಾ ವೈರಸ್​ ಮೊದಲು ಉಲ್ಬಣಗೊಂಡ ಚೀನಾದಲ್ಲಿ ಬಹುತೇಕ ಪ್ರದೇಶಗಳನ್ನು ಸ್ತಬ್ಧ ಮಾಡಲಾಗಿತ್ತು. ಅದರಲ್ಲೂ ಹುಬೇ ಪ್ರಾಂತ್ಯದ ವುಹಾನ್ ನಗರವನ್ನು ಜೈಲಿನಂತೆ ಮಾರ್ಪಾಡು ಮಾಡಲಾಗಿತ್ತು. ಯಾವುದೇ ಅಂಗಡಿ-ಮುಂಗಟ್ಟುಗಳಾಗಲಿ, ಶಾಪಿಂಗ್​ ಮಾಲ್​, ಥಿಯೇಟರ್​, ಮ್ಯೂಸಿಯಂ ಹಾಗೂ ಶಾಲಾ-ಕಾಲೇಜುಗಳು ಸೇರಿದಂತೆ ಎಲ್ಲವನ್ನು ಬಂದ್​ ಮಾಡಿಸಲಾಗಿತ್ತು. ಎಲ್ಲರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿತ್ತು ಎಂದಿದ್ದಾರೆ.

    ಕ್ವಾರಂಟೈನ್​ನಲ್ಲಿದ್ದಾಗ ಸಮಯ ಕಳೆಯಲು​ ಸಿನಿಮಾ ವೀಕ್ಷಿಸಿಸುವುದು, ಪುಸ್ತಕಗಳು ಮತ್ತು ಕಾದಂಬರಿಗಳನ್ನು ಓದುವುದು ಮತ್ತು ಕವಿತೆಯನ್ನು ಬರೆಯುವುದು ಮಾಡುತ್ತಿದ್ದೆ. ಬರೋಬ್ಬರಿ ಒಂದು ತಿಂಗಳ ಸಮೀಪ ವುಹಾನ್​ಗೆ ದಿಗ್ಬಂಧನ ಹೇರಲಾಗಿತ್ತು. ಜನರು ಸಾಕಷ್ಟು ಹೈರಾಣಾಗಿದ್ದರು. ಆಹಾರಕ್ಕೂ ಸಾಕಷ್ಟು ಪರದಾಡುವಂತಾಯಿತು. ಇಡೀ ನಗರಕ್ಕೇ ನಗರವೇ ಬಿಕೋ ಎನ್ನುತ್ತಿತ್ತು ಎಂದು ತಿಳಿಸಿದ್ದಾರೆ.

    ಇದೇ ವೇಳೆ ಭಾರತೀಯರಿಗೂ ಸಂದೇಶವನ್ನು ರವಾನಿಸಿರುವ ಪೌಲ್​, ಆದಷ್ಟೂ ಎಲ್ಲರೂ ಪ್ರತ್ಯೇಕವಾಗಿರಿ. ಹೀಗಿದ್ದರೆ ಮಾತ್ರ ಸೋಂಕು ಹರಡುವುದನ್ನು ತಡೆಯಬಹುದು ಎಂದು ಹೇಳಿದರು. (ಏಜೆನ್ಸೀಸ್​)

    ಕರೊನಾ ಮಹಾಮಾರಿ ಬಗ್ಗೆ ನಿಮ್ಮಲ್ಲಿ ಮೂಡಬಹುದಾದ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts