More

    ‘ಮೂಳೆ ನಡುಗಿಸುವ ಚಳಿ’ ಎದುರಿಸಲು ಲಡಾಖ್‌ನಲ್ಲಿ ಸೇನೆಯ ತಯಾರಿ ನೋಡಿ…

    ಲಡಾಖ್‌: ಸದಾ ವೈರಿಗಳ ದಮನಕ್ಕೆ ಸಂಚು ರೂಪಿಸುವ ಸೈನಿಕರಿಗೆ ಚಳಿ ಎಂಬುದು ಇನ್ನೊಂದು ರೀತಿಯ ವೈರಿ ಇದ್ದಂತೆಯೇ.

    ಅದರಲ್ಲಿಯೂ ಕುತಂತ್ರಿ ಚೀನಾ ಜತೆ, ಲಡಾಖ್‌ನಲ್ಲಿ ಇದೀಗ ಭಾರತೀಯ ಯೋಧರು ಸಂಘರ್ಷಕ್ಕೆ ಇಳಿಯಬೇಕಿದೆ. ಲಡಾಖ್‌ನಲ್ಲಿ 70 ಸಾವಿರ ಯೋಧರನ್ನು ನಿಯೋಜಿಸುವುದು ವಾಡಿಕೆ. ಆದರೆ ಇದೀಗ ಚೀನಾದ ಜತೆ ಸಂಘರ್ಷ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 30 ಸಾವಿರ ಮಂದಿಯನ್ನು ಇಲ್ಲಿ ನಿಯೋಜಿಸಲಾಗಿವೆ. ಈ ಎಲ್ಲಾ ಸೈನಿಕರು ಕುತಂತ್ರಿ ಚೀನಾದ ಜತೆಜತೆಗೆ ಚಳಿಯನ್ನೂ ಎದುರಿಸಬೇಕಿದೆ.

    ಇನ್ನೇನು ಒಂದೆರಡು ತಿಂಗಳಿನಲ್ಲಿಯೇ ಚಳಿ ಈ ಪ್ರದೇಶವನ್ನು ಇನ್ನಷ್ಟು ಕಾಡಲಿದ್ದು, ಇದು ಸೈನಿಕರಿಗೆ ಅತ್ಯಂತ ಕಷ್ಟಕರ ಕಾಲವಾಗಿದೆ.
    ಲಡಾಖ್ ವಲಯದಲ್ಲಿ ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಚಳಿ ಬೀಳುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದನ್ನು ’ಮೂಳೆ ನಡುಗಿಸುವ ಚಳಿ’ ಎಂದೇ ಬಣ್ಣಿಸಲಾಗಿದೆ. ಇದೇ ಕಾರಣಕ್ಕೆ ಮುಂಚೂಣಿ ನೆಲೆಗಳಿಗೆ ನಿಯೋಜಿಸಿರುವ ಸೇನಾ ತುಕಡಿಗಳಿಗೆ ಚಳಿಗಾಲದಲ್ಲಿ ಆಹಾರ ಮತ್ತು ಇನ್ನಿತರ ಅಗತ್ಯ ವಸ್ತುಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ರಕ್ಷಣಾ ಇಲಾಖೆ ಸಿದ್ಧತೆ ಅರಂಭಿಸಿದೆ.

    ಇದನ್ನೂ ಓದಿ: ಎಷ್ಟು ಬೇಕಾದ್ರೂ ಗೇಮ್ಸ್‌ ಆಡ್ಕೋ ಅಂದ ಅಪ್ಪ: ಈಗ ಮಗ ರಾಕಿಂಗ್‌!

    ಸಪ್ಟೆಂಬರ್‌- ಅಕ್ಟೋಬರ್‌ನಿಂದ ಕೋರೈಸುವ ಚಳಿ ಶುರುವಾಗಲಿದ್ದು, ಮಾರ್ಚ್‌ ಅಂತ್ಯದವರೆಗೂ ಅದು ಕಾಡಲಿರುವ ಹಿನ್ನೆಲೆಯಲ್ಲಿ ನಮ್ಮ ಯೋಧರು ಚೀನದ ಸೈನಿಕರು ಮಾತ್ರವಲ್ಲ, ಚಳಿಯ ಜತೆಯೂ ಹೋರಾಡಬೇಕಿದೆ..

    ಸೈನಿಕರನ್ನು ಮತ್ತು ಅವರಿಗೆ ಅತ್ಯಗತ್ಯವಾಗಿ ಬೇಕಿರುವ ವಸ್ತುಗಳನ್ನು ಸಾಗಿಸುವ ನಿಟ್ಟಿನಲ್ಲಿ ಅಚ್ಚ ಹಸಿರು ಬಣ್ಣದ ಆರು ಸಾವಿರ ಎಎಲ್‌ಎಸ್ ಟ್ರಕ್‌ಗಳು ಸನ್ನದ್ಧವಾಗಿವೆ. ಇವರಿಗಾಗಿ 20 ಸಾವಿರ ಟನ್ ದಿನಸಿಯನ್ನು ಹೆಚ್ಚುವರಿಯಾಗಿ ಲಡಾಖ್‌ಗೆ ಸಾಗಿಸಬೇಕಾಗಬಹುದು ಎಂದು ಸೇನಾ ಮೂಲಗಳು ಹೇಳಿವೆ.
    ಎತ್ತರದ ಪ್ರದೇಶದಲ್ಲಿ ವಿಪರೀತ ಚಳಿ ತಡೆಯಲು ನೆರವಾಗುವ ಬಟ್ಟೆಗಳು, ತಾತ್ಕಾಲಿಕ ಶಿಬಿರಗಳು ಮತ್ತು ಟೆಂಟ್‌ಗಳಿಗೆ ಬಳಸುವ ವಸ್ತುಗಳನ್ನೂ ಒಯ್ಯಲು ಸಿದ್ಧವಾಗಿ ವಾಹನಗಳು ನಿಂತಿವೆ.

    ಸೇನೆಯ 14ನೇ ಕಾರ್ಪ್ಸ್‌ ಲಡಾಖ್‌ ಆಸುಪಾಸಿನ ನೈಜ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಕಾಯುತ್ತದೆ. ಸಿಯಾಚಿನ್‌ ಭದ್ರತೆಯೂ ಇದರದೇ ಹೊಣೆ ಎಂದು ಮೂಲಗಳು ತಿಳಿಸಿವೆ.

    ಅಪ್ಪ-ಅಮ್ಮನ ಕೊಂದ ತಾಲಿಬಾನರ ರುಂಡ ಚೆಂಡಾಡಿದ ಧೀರ ಪುತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts