More

    ಭಾರತ ಆಗಲಿದೆ ಪ್ರಪಂಚದ ಸೂಪರ್ ಪವರ್ ದೇಶ

    ನಿಪ್ಪಾಣಿ: ದೇಶಕ್ಕೆ ಸ್ವಾತಂತ್ರ್ಯ ಬಂದು ಶತಮಾನಗಳು ಪೂರೈಸುವುದರೊಳಗೆ ಭಾರತ ಪ್ರಪಂಚದ ಸೂಪರ್ ಪವರ್ ಆಗಲಿದ್ದು, ಅದಕ್ಕೆ ಸ್ಥಳೀಯ ತಂತ್ರಜ್ಞಾನ ಅತ್ಯಾವಶ್ಯಕ ಎಂದು ಸ್ಥಳೀಯ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಮಾಧವಿ ಅವಳೇಕರ ಹೇಳಿದರು.

    ಸ್ಥಳೀಯ ಕೆಎಲ್‌ಇ ಸಂಸ್ಥೆಯ ಜಿ.ಐ. ಬಾಗೇವಾಡಿ ಮಹಾವಿದ್ಯಾಲಯದ ವಿಜ್ಞಾನ ಸಂಘ ಮತ್ತು ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿಕಸಿತ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನ ಎಂಬ ವಿಷಯದ ಕುರಿತು ಮಾತನಾಡಿದರು.

    ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಂ.ಎಂ. ಹುರಳಿ ಮಾತನಾಡಿದರು.

    ವಿಜ್ಞಾನ ಸಂಘದ ಸಂಯೋಜಕ ಜೆ.ಎನ್. ಮಗದುಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಚಾರ್ಯ ಡಾ. ಆರ್.ಜಿ. ಖರಾಬೆ, ಐಕ್ಯೂಎಸಿ ಸಂಯೋಜಕ ಡಾ.ಅತುಲಕುಮಾರ ಕಾಂಬಳೆ, ಡಾ.ಎಸ್.ಎಂ.ರಾಯಮಾನೆ, ಡಾ.ಬಸವರಾಜ ಜನಗೌಡ, ಸುರೇಶ ಶಿಂಗಟೆ, ಎನ್.ಎಸ್.ಬೆಳಗಾಂವಕರ, ನಿಖಿತಾ ಜಾಧವ, ಸಂಗೀತಾ ಮೊರೆ, ಆರ್. ಮೋನಿಕಾ, ಪ್ರಿಯಾಂಕಾ ಕೆಳಗಿನಮನಿ, ಶಿವಲಿಂಗ ನಾಯಿಕ, ಅಮೃತಾ ಮಂಗಾವತೆ, ಸಂಪತಾ ಹೆಗಡೆ, ಪ್ರತಿಭಾ ಬಾಕಳೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts