More

    ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್​ ಸರಣಿಗೆ ಶಮಿ ಅಲಭ್ಯ: ಏಕದಿನ ಸರಣಿಗೆ ಚಹರ್ ಔಟ್​, ಆಕಾಶ್ ಇನ್​​

    ಬೆಂಗಳೂರು: ಏಕದಿನ ವಿಶ್ವಕಪ್​ನಲ್ಲಿ ಮಿಂಚಿದ ಹಿರಿಯ ವೇಗಿ ಮೊಹಮದ್​ ಶಮಿ ಮೊಣಕಾಲು ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸದ 2 ಪಂದ್ಯಗಳ ಟೆಸ್ಟ್​ ಸರಣಿಗೆ ಅಲಭ್ಯರಾಗಿದ್ದಾರೆ. ವೈದ್ಯಕೀಯ ಸಿಬ್ಬಂದಿಯಿಂದ ಇನ್ನೂ ಫಿಟ್​ನೆಸ್​ ಪ್ರಮಾಣ ಪತ್ರ ಪಡೆಯದ ಹಿನ್ನೆಲೆಯಲ್ಲಿ ಶಮಿ ಹೆಸರನ್ನು ಕೈಬಿಟ್ಟಿರುವುದಾಗಿ ಬಿಸಿಸಿಐ ಶನಿವಾರ (ಡಿ.16) ತಿಳಿಸಿದೆ.

    ಶಮಿ ಮೊಣಕಾಲು ನೋವಿನ ನಡುವೆಯೇ ವಿಶ್ವಕಪ್​ನಲ್ಲಿ ಆಡಿದ್ದರು. 7 ಪಂದ್ಯಗಳಲ್ಲೇ 24 ವಿಕೆಟ್​ ಕಬಳಿಸಿದ್ದ ಅವರು, ಬೌಲಿಂಗ್​ ರನ್​ಅಪ್​ನಲ್ಲಿ ಚೆಂಡೆಸೆಯುವ ಹಂತದಲ್ಲಿ ಬಲಗಾಲನ್ನು ನೆಲದ ಮೇಲಿಡುವ ವೇಳೆ ನೋವು ಅನುಭವಿಸುತ್ತಿದ್ದರು ಎನ್ನಲಾಗಿದೆ. ಟೆಸ್ಟ್​ ಸರಣಿಗೆ ಸ್ಥಾನ ಪಡೆಯಲಿದ್ದಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಇನ್ನೂ ಫಿಟ್​ ಆಗದೇ ಇರುವುದರಿಂದ ಅಲಭ್ಯರಾಗಿದ್ದಾರೆ. ಡಿ. 26ರಿಂದ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದ್ದು, ಶಮಿ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂದು ಬಿಸಿಸಿಐ ತಿಳಿಸಿಲ್ಲ. ಸದ್ಯ ಶಮಿಗೆ ಮನೆಯಲ್ಲೇ ಚಿಕಿತ್ಸೆ ಮುಂದುವರಿಯಲಿದ್ದು, ಮುಂದಿನ ವರ್ಷ ಜನವರಿ 25ರಿಂದ ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟೆಸ್ಟ್​ ಸರಣಿಗೆ ಶಮಿ ಲಭ್ಯವಾಗುವ ನಿರೀಕ್ಷೆ ಇದೆ.

    ಏಕದಿನ ತಂಡದಿಂದ ಚಾಹರ್ ಔಟ್​​
    ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ದೀಪಕ್​ ಚಹರ್ ಅಲಭ್ಯರಾಗಲಿದ್ದಾರೆ. ಕುಟುಂಬದ ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಆಫ್ರಿಕಾ ಪ್ರವಾಸ ಸಾಧ್ಯವಿಲ್ಲ ಎಂದು ಚಹರ್​ ಹೇಳಿರುವುದಾಗಿ ಬಿಸಿಸಿಐ ತಿಳಿಸಿದೆ.​ ವೇಗಿ ಚಹರ್​ ಬದಲಿಗೆ ಆಕಾಶ್​ ದೀಪ್​ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಮುಂದಿನ ಭಾನುವಾರದಿಂದ ಜೋಹಾನ್ಸ್​ಬರ್ಗ್​ನಲ್ಲಿ ಮೊದಲ ಪಂದ್ಯದ ಆರಂಭವಾಗಲಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಸಹಾಯಕ ಸಿಬ್ಬಂದಿಯು ಸಹ ಮೂರು ಪಂದ್ಯಗಳ ಏಕದಿನ ಸರಣಿಯ ಉಸ್ತುವಾರಿ ವಹಿಸುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಬದಲಾಗಿ, ಮುಂಬರುವ ಟೆಸ್ಟ್ ಸರಣಿಗೆ ಹೆಚ್ಚಿನ ಗಮನ ಹರಿಸಲಿದ್ದಾರೆ.

    ಭಾರತದ ನವೀಕೃತ ಏಕದಿನ ತಂಡ: ಕೆ.ಎಲ್. ರಾಹುಲ್ (ನಾಯಕ, ವಿಕೆಟ್​ ಕೀಪರ್​), ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಕುಮಾರ್, ಅವೇಶ್ ಖಾನ್, ಅರ್ಷದೀಪ್ ಸಿಂಗ್ ಮತ್ತು ಆಕಾಶ್ ದೀಪ್. (ಏಜೆನ್ಸೀಸ್​)

    ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್​ ಸರಣಿಗೆ ಶಮಿ ಅನುಮಾನ; ಆತಿಥೇಯರಿಗೂ ಪ್ರಮುಖ ಆಟಗಾರರ ಅಲಭ್ಯತೆ ಭೀತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts