More

    ಭಾರತ vs ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ 2023: ಉದ್ಘಾಟನಾ ಸಮಾರಂಭ, ಸೆಲೆಬ್ರೆಟಿಗಳು ಯಾರೆಲ್ಲಾ ಇರಲಿದ್ದಾರೆ? ಇಲ್ಲಿದೆ ವಿವರ

    ನವದೆಹಲಿ: ಐಸಿಸಿ ವಿಶ್ವಕಪ್‌ನ ಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ವಿಶ್ವಕಪ್ ನ ಈ ಫೈನಲ್ ಪಂದ್ಯ ವೀಕ್ಷಿಸಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ತೆರಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 19 ರಂದು ಅಹಮದಾಬಾದ್‌ಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಅಲ್ಲಿ ಅವರು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕುಳಿತು ಭಾರತ ಮತ್ತು ಆಸ್ಟ್ರೇಲಿಯಾದ ಫೈನಲ್ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಈ ಫೈನಲ್ ಪಂದ್ಯ ವೀಕ್ಷಿಸಲು ಆಸ್ಟ್ರೇಲಿಯಾ ಪ್ರಧಾನಿ ಕೂಡ ಬರಬಹುದು ಎಂದು ಮೂಲಗಳು ತಿಳಿಸಿವೆ. ಆದರೆ, ಇಲ್ಲಿಯವರೆಗೆ ಆಸ್ಟ್ರೇಲಿಯಾದ ಪ್ರಧಾನಿ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.

    ಮಾಧ್ಯಮ ವರದಿಗಳ ಪ್ರಕಾರ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ಭಾರತ ಸರ್ಕಾರವು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರಿಗೆ ಆಹ್ವಾನ ಕಳುಹಿಸಿದೆ. ಅಷ್ಟೇ ಅಲ್ಲ, ಆಸ್ಟ್ರೇಲಿಯಾದ ಉಪ ಪ್ರಧಾನಿಗೂ ಆಹ್ವಾನ ನೀಡಲಾಗಿದ್ದು, ಇಬ್ಬರೂ ಪಂದ್ಯ ವೀಕ್ಷಿಸಲು ಅಹಮದಾಬಾದ್ ಗೆ ಬರುತ್ತಾರೆ ಎಂಬ ನಂಬಿಕೆ ಇದೆ. ಅಲ್ಲದೆ, ಈ ಅವಧಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕ್ರೀಡಾಂಗಣದಲ್ಲಿ ಉಪಸ್ಥಿತರಿರುತ್ತಾರೆ. ಪ್ರಸ್ತುತ, ಆಸ್ಟ್ರೇಲಿಯಾದ ಪ್ರಧಾನಿ ಆಗಮನದ ಬಗ್ಗೆ ಅಧಿಕೃತ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ. ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯದ ಪ್ರಧಾನಿಯಲ್ಲದೆ, ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಕಪಿಲ್ ದೇವ್ ಕೂಡ ಪಂದ್ಯ ವೀಕ್ಷಿಸಲು ಬರಬಹುದು. 

    ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತಿತರರು ಕೂಡ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸುವ ನಿರೀಕ್ಷೆಯಿದೆ. ಸಹ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಹಾಲ್ ಮತ್ತು ಇತರರು ಸಹ ಆಟದ ಸಮಯದಲ್ಲಿ ಉಪಸ್ಥಿತರಿರುವ ಸಾಧ್ಯತೆಯಿದೆ.

    ಖಲಾಸಿ ಖ್ಯಾತಿಯ ಗಾಯಕರಾದ ದುವಾ ಲಿಪಾ ಮತ್ತು ಆದಿತ್ಯ ಗಾಧವಿ  ಕೆಲವು ಜನಪ್ರಿಯ ಹಾಡುಗಳನ್ನು ಹಾಡಿದರೆ ಸಂಗೀತ ಸಂಯೋಜಕ ಪ್ರೀತಮ್ ಚಕ್ರವರ್ತಿ ಅವರ ಕೆಲವು ಬಾಲಿವುಡ್ ಚಾರ್ಟ್‌ಬಸ್ಟರ್‌ಗಳನ್ನು ಪ್ರದರ್ಶಿಸಲಿದ್ದಾರೆ.

    ಟಾಪ್ ರಾಜಕಾರಣಿಗಳು ಮತ್ತು ಮಾಜಿ ಕ್ರಿಕೆಟಿಗರನ್ನು ಹೊರತುಪಡಿಸಿ, ಅಮಿತಾಭ್ ಬಚ್ಚನ್, ರಜನಿಕಾಂತ್, ಕಮಲ್ ಹಾಸನ್, ಮೋಹನ್ ಲಾಲ್, ವೆಂಕಟೇಶ್, ನಾಗಾರ್ಜುನ ಮತ್ತು ರಾಮ್ ಚರಣ್ ಅವರಂತಹ ಹೆಸರುಗಳು ಕೇಳಿಬರುತ್ತಿವೆ. ಜತೆಗೆ ಭಾರತೀಯ ಕ್ರಿಕೆಟಿಗರ ನಿಕಟ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಸಹ ಭಾಗಿಯಾಗಲಿದ್ದಾರೆ. ಕಳೆದ ತಿಂಗಳು ಭಾರತ ಮತ್ತು ಪಾಕಿಸ್ತಾನ ಪಂದ್ಯದಂತೆಯೇ, ಫೈನಲ್ ಕೂಡ ಪ್ರೇಕ್ಷಕರಿಗೆ ಮನರಂಜನೆ ನೀಡುವ ಭರವಸೆಯಿದೆ.

    ಆಕಾಶದಲ್ಲಿ ಸಾಹಸಗಳನ್ನು ಪ್ರದರ್ಶಿಸಲಿರುವ ವಾಯುಪಡೆ

    ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ತಂಡ ಕೂಡ ವಿಶ್ವಕಪ್ ಫೈನಲ್‌ಗೆ ಪ್ರದರ್ಶನ ನೀಡಲಿದೆ. ಹೌದು, ವಿಶ್ವಕಪ್‌ನ ಫೈನಲ್ ಪಂದ್ಯವನ್ನು ಸ್ಮರಣೀಯ ಮತ್ತು ವಿಶೇಷವಾಗಿಸಲು ಏರ್ ಶೋ ಕೂಡ ಏರ್ಪಡಿಸಲಾಗಿದೆ. ಪಂದ್ಯ ಆರಂಭಕ್ಕೂ ಮುನ್ನವೇ ಭಾರತೀಯ ವಾಯುಪಡೆ ಅಹಮದಾಬಾದ್ ನ ಆಕಾಶದಲ್ಲಿ ಯುದ್ಧ ವಿಮಾನಗಳ ಮೂಲಕ ಸಾಹಸ ಪ್ರದರ್ಶಿಸಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಅಜೇಯವಾಗಿದೆ ಮತ್ತು ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ ಎಂಬುದು ಗಮನಾರ್ಹ. ಸತತ 10 ಪಂದ್ಯಗಳನ್ನು ಗೆದ್ದು ಟೀಂ ಇಂಡಿಯಾ ಫೈನಲ್ ತಲುಪಿದೆ. ಮತ್ತೊಂದೆಡೆ, ಆಸ್ಟ್ರೇಲಿಯಾ ಕೂಡ ಕಳೆದ 8 ಪಂದ್ಯಗಳನ್ನು ಸತತವಾಗಿ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದೆ.

    ‘ಈ ಸಲ ಕಪ್ ನಮ್ದೇ’ ; ಇತಿಹಾಸ ಸೃಷ್ಟಿಸಲು ಉತ್ಸುಕರಾಗಿರುವ ರೋಹಿತ್​ ಪಡೆ, 20 ವರ್ಷಗಳ ನಂತರ ಸೇಡು ತೀರಿಸಿಕೊಳ್ಳುವ ಚಾನ್ಸ್…

    “ಅವಕಾಶ ಸಿಕ್ಕರೆ ನಾನು ಧಾರ್ಮಿಕ ಚಲನಚಿತ್ರಗಳಲ್ಲಿ ನಟಿಸುತ್ತೇನೆ, ಆದರೆ….”: ನಟಿ ಸನ್ನಿ ಲಿಯೋನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts