More

    2022ರಲ್ಲಿ ಮತ್ತೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದೆ ಟೀಮ್ ಇಂಡಿಯಾ

    ಲಂಡನ್: ಟೀಮ್ ಇಂಡಿಯಾ ಮುಂದಿನ ವರ್ಷ ಜುಲೈನಲ್ಲಿ ಮತ್ತೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, 6 ಪಂದ್ಯಗಳ ಸೀಮಿತ ಓವರ್ ಕ್ರಿಕೆಟ್ ಸರಣಿಯನ್ನು ಆಡಲಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಬುಧವಾರ ಬಿಡುಗಡೆಗೊಳಿಸಿರುವ ತನ್ನ 2022ರ ತವರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯ ವೇಳಾಪಟ್ಟಿಯಲ್ಲಿ ಇದನ್ನು ಖಚಿತಪಡಿಸಿದೆ.

    ಭಾರತ ತಂಡ ಹಾಲಿ ಇಂಗ್ಲೆಂಡ್ ಪ್ರವಾಸದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದ್ದರೆ, ಮುಂದಿನ ವರ್ಷ ತಲಾ 3 ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಲಿದೆ. ಜುಲೈ 1ರಂದು ಓಲ್ಡ್ ಟಾ್ರೆೆರ್ಡ್‌ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದರೆ, ಜುಲೈ 3ರಂದು ಟ್ರೆಂಟ್‌ಬ್ರಿಜ್ ಮತ್ತು ಜುಲೈ 6ರಂದು ಏಜಿಯಸ್ ಬೌಲ್‌ನಲ್ಲಿ ಮತ್ತೆರಡು ಟಿ20 ಪಂದ್ಯಗಳು ನಡೆಯಲಿವೆ. 3 ಏಕದಿನ ಪಂದ್ಯಗಳು ಕ್ರಮವಾಗಿ ಏಜ್‌ಬಾಸ್ಟನ್ (ಜುಲೈ 9), ಓವಲ್ (ಜುಲೈ 12) ಮತ್ತು ಲಾರ್ಡ್ಸ್‌ನಲ್ಲಿ (ಜುಲೈ 14) ನಡೆಯಲಿವೆ.

    ಇಂಗ್ಲೆಂಡ್ ತಂಡ 2022ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಆಡುವ ಮೂಲಕ ತವರು ಋತುವನ್ನು ಆರಂಭಿಸಲಿದ್ದು, ಬಳಿಕ ಭಾರತವನ್ನು ಎದುರಿಸಲಿದೆ. ಅದರ ಬೆನ್ನಲ್ಲೇ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ತಲಾ 3 ಏಕದಿನ, ಟಿ20 ಮತ್ತು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

    ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕನ್ನಡಿಗ ವೆಂಕಟೇಶ್ ಪ್ರಸಾದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts