More

    ಅಂತರಿಕ್ಷಕ್ಕೆ ಮಾನವಯಾನ ನಡೆಸುವ 4ನೇ ರಾಷ್ಟ್ರವಾಗಲಿದೆ, ಭಾರತ : ರಾಷ್ಟ್ರಪತಿ ಕೋವಿಂದ್​

    ನವದೆಹಲಿ : ಸ್ವಾತಂತ್ರ್ಯದಿನದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸರ್ಕಾರವು ಹಲವು ಯೋಜನೆಗಳನ್ನು ಆರಂಭಿಸಿದೆ. ಅವುಗಳಲ್ಲಿ ಗಗನ್​ ಯಾನ್​ ಮಿಷನ್​ ಮಹತ್ವದ್ದಾಗಿದೆ. ಇದರಡಿ ಭಾರತೀಯ ವಾಯುಪಡೆಯ ಕೆಲವು ಪೈಲೆಟ್​ಗಳು ವಿದೇಶದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರು ಅಂತರಿಕ್ಷದಲ್ಲಿ ಹಾರಾಟ ನಡೆಸಿದಾಗ ಭಾರತವು ಅಂತರಿಕ್ಷಕ್ಕೆ ಮಾನವರನ್ನು ಕಳುಹಿಸಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ ಎಂದು ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಹೇಳಿದರು.

    ಸ್ವಾತಂತ್ರ್ಯೋತ್ಸವದ ಮುನ್ನಾದಿವಸವಾದ ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಕೋವಿಂದ್, 75ನೇ ಸ್ವಾತಂತ್ರ್ಯೋತ್ಸವ ವರ್ಷದ ಸಂದರ್ಭದಲ್ಲೇ ಲೋಕತಂತ್ರದ ಮಂದಿರವಾದ ಸಂಸತ್​ ಭವನವು ಹೊಸ ಕಟ್ಟಡಕ್ಕೆ ವರ್ಗಾವಣೆಯಾಗುತ್ತಿರುವುದು ವಿಶೇಷವಾಗಿದೆ ಎಂದು ರಾಜಧಾನಿಯ ಸೆಂಟ್ರಲ್​ ವಿಸ್ತಾ ಯೋಜನೆಯ ಬಗ್ಗೆ ಪ್ರಸ್ತಾಪಿಸಿದರು.

    ಇದನ್ನೂ ಓದಿ: ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವದಲ್ಲಿ ಒಲಿಂಪಿಕ್ಸ್​ ಪದಕ ವಿಜೇತರು; ಬೆಳಿಗ್ಗೆ 7.30 ಕ್ಕೆ ಪ್ರಧಾನಿ ಭಾಷಣ

    ಆತ್ಮನಿರ್ಭರ ಭಾರತದ ಆಶಯದಲ್ಲಿ ಹಲವು ಯೋಜನೆಗಳನ್ನು ಭಾರತ ಸರ್ಕಾರ ಆರಂಭಿಸಿದೆ. ಕರೊನಾ ತಂದೊಡ್ಡಿರುವ ಆರ್ಥಿಕ ಸಂಕಷ್ಟಗಳನ್ನು ಸವಾಲುಗಳನ್ನು ಎದುರಿಸಲು ಸರ್ವಪ್ರಯತ್ನ ಮಾಡುತ್ತಿದೆ ಎಂದರು. ಈಸ್​ ​ ಆಫ್​ ಡೂಯಿಂಗ್ ಬಿಸಿನೆಸ್​​ ಉತ್ತಮಗೊಳ್ಳುವುದರೊಂದಿಗೆ ಜನರ ಈಸ್ ಆಫ್​ ಲಿವಿಂಗ್​​ ಉತ್ತಮಗೊಳ್ಳುತ್ತದೆ ಎಂದರು.

    ಅನ್ನದಾತ ರೈತರಿಗೆ ಶಕ್ತಿ ತುಂಬಲು ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯಲ್ಲಿ ಸರ್ಕಾರ ಹಲವು ಬದಲಾವಣೆ ತರುತ್ತಿದೆ ಎಂದು ಸರ್ಕಾರದ ಕೆಲವು ಯೋಜನೆಗಳ ಬಗ್ಗೆ ಮಾತನಾಡಿದ ರಾಷ್ಟ್ರಪತಿ ಕೋವಿಂದ್​ ಅವರು, ಸ್ವಾತಂತ್ರ್ಯ ಸೇನಾನಿಗಳ ಕನಸಿನಂತೆ ನಾವು ಸಾಧಿಸಬೇಕಾದ ಮೈಲಿಗಲ್ಲುಗಳು ಇನ್ನೂ ಬಹಳಷ್ಟಿವೆ. ಈ ಸಾಧನೆಯನ್ನು ಮಾಡಲು ನಾವೆಲ್ಲಾ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು. (ಏಜೆನ್ಸೀಸ್)

    ಒಲಿಂಪಿಕ್​​ ಕ್ರೀಡಾಪಟುಗಳ ಸಾಧನೆ ಐತಿಹಾಸಿಕ! 75ನೇ ಸ್ವಾತಂತ್ರ್ಯೋತ್ಸವಕ್ಕೆ ಶುಭ ಕೋರಿದ ರಾಷ್ಟ್ರಪತಿ ಕೋವಿಂದ್​

    ಸೋಂಕು ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಆಗಸ್ಟ್​ 23 ರಿಂದ ಶಾಲೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts