More

    ಭಾರತ ದೇವಾಲಯಗಳ ಪ್ರತೀಕ- ಶಿರಹಟ್ಟಿ ಫಕೀರೇಶ್ವರ ಮಹಾಸಂಸ್ಥಾನ ಮಠದ ದಿಂಗಾಲೇಶ್ವರ ಶ್ರೀ ಪ್ರತಿಪಾದನೆ

    ಹೂವಿನಹಡಗಲಿ: ಭಾರತ ದೇಶ ದೇವಾಲಯಗಳ ಪ್ರತೀಕವಾಗಿದೆ. ನಮ್ಮಲ್ಲಿರುವ ನೆಗೆಟಿವ್ ಎನರ್ಜಿಯನ್ನು ತೆಗೆದುಹಾಕಿ ಪಾಸಿಟಿವ್ ಎನರ್ಜಿ ಪಡೆದುಕೊಳ್ಳುವ ಉದ್ದೇಶದಿಂದ ಮಠ-ಮಂದಿರಗಳು ಹುಟ್ಟಿಕೊಂಡಿವೆ ಎಂದು ಶಿರಹಟ್ಟಿ ಫಕೀರೇಶ್ವರ ಮಹಾಸಂಸ್ಥಾನ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು.

    ತಾಲೂಕಿನ ಹೊಳಲು ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮದೇವತೆ ಶ್ರೀ ಕಾಳಿಕಾದೇವಿ, ಕರಿಯಮ್ಮದೇವಿ ದೇವಸ್ಥಾನಗಳ ಉದ್ಘಾಟನೆ, ಕಳಸಾರೋಹಣ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಮಾತನಾಡಿದರು. ರಾಜ ಮಹಾರಾಜರು ನೆಮ್ಮದಿ ತಂದುಕೊಳ್ಳುವ ಸಲುವಾಗಿ ಸಾವಿರಾರು ದೇವಾಲಯಗಳನ್ನು ನಿರ್ಮಿಸಿದ್ದರು. ಅದರ ಫಲವಾಗಿ ಭಾರತದಲ್ಲಿ ಇಂದು ಧರ್ಮ ಹಾಗೂ ಭಕ್ತಿ ಇಂದಿಗೂ ಜೀವಂತವಾಗಿವೆ. ದಿನಕ್ಕೆ ಒಂದು ಬಾರಿಯಾದರೂ ದೇವಸ್ಥಾನ, ಮಠ, ಮಂದಿರಗಳಿಗೆ ಹೋಗುವುದರಿಂದ ಆರೋಗ್ಯವಂತರಾಗಿರಬಹುದು ಎಂದರು.

    ಹೂವಿನಹಡಗಲಿ ಗವಿಸಿದ್ದೇಶ್ವರ ಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ನಾಡಪ್ರಭುಗಳು ದೇವಾಲಯಗಳನ್ನು ಕಟ್ಟಿಸಿದ್ದು ದೊಡ್ಡದಲ್ಲ. ಇಂದು ಊರಿನ ಪ್ರಭುಗಳು ದೇವಾಲಯ ಕಟ್ಟಿದ್ದು ದೊಡ್ಡದು ಎಂದರು. ಲಿಂಗನಾಯಕನಹಳ್ಳಿ ಚನ್ನವೀರಸ್ವಾಮೀಜಿ, ನೀಲಗುಂದ ಚನ್ನಬಸವ ಸ್ವಾಮೀಜಿ, ಹಾವನೂರು ಶಿವಕುಮಾರ ಸ್ವಾಮೀಜಿ ಮಾತನಾಡಿದರು.

    ಬೆಳಗ್ಗೆ ದೇವತೆಗಳ ಮೂರ್ತಿ ಪ್ರತಿಷ್ಠಾಪನೆಯನ್ನು ಮಾನಿಹಳ್ಳಿ ಮಳೆಯೋಗಿಶ್ವರ ಸ್ವಾಮೀಜಿ ನೆರವೇರಿಸಿದರು. ಹಾವನೂರು ಶಿವಕುಮಾರ ಸ್ವಾಮಿಜಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಉಪಾಧ್ಯಕ್ಷ ವಡ್ಡರ ನಾಗರಾಜ, ದೇವಸ್ಥಾನ ಸಮಿತಿಯ ಅಧ್ಯಕ್ಷ ಗೌಡ್ರ ಚನ್ನವೀರಗೌಡ, ಎಚ್.ಜಿ.ಚೆನ್ನಪ್ಪಜ್ಜ, ಕೋಡಬಾಳ ಶಿವಣ್ಣ, ಮುದ್ದಣ್ಣನವರ ಬಸವರಾಜ, ನಾರಮ್ಮನವರ ಸಣ್ಣಪ್ಪ, ಹಳ್ಳಳ್ಳಿ ಶಿವಣ್ಣ, ಬೂದನೂರು ಪ್ರಕಶ, ಹಲಗೇರಿ ಮೇಘರಾಜಪ್ಪ, ಕೋಡಬಾಳ ಸತೀಶ, ಕೋಡಬಾಳ ಚಿನ್ನಪ್ಪ, ಕೋಡಬಾಳ ಗೋಣೆಪ್ಪ, ಎಚ್.ಡಿ. ಜಗ್ಗಿನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts